ಬೆಂಗಳೂರು: ರಾಜಕಾರಣಿಗಳಿಗೂ ಕ್ಯಾಂಟೀನ್ಗೂ ಚುನಾವಣಾ ವರ್ಷ ಆದ್ದರಿಂದಲೇ ಏನೋ ಅವಿನಾಭಾವತೆಯೊಂದು ಸೃಷ್ಠಿಯಾಗಿದೆ ಎಂದು ಕಾಣುತ್ತದೆ. ಇಂದಿರಾಕ್ಯಾಂಟೀನ್ ಆಯ್ತು ಅಪ್ಪಾಜಿ ಕ್ಯಾಂಟೀನ್ ಆಯ್ತು, ಇದೀಗ ಮಂಡ್ಯಾದಲ್ಲಿ ರಮ್ಯಾ ಕ್ಯಾಂಟೀನ್ ಒಂದು ಸ್ಟಾರ್ಟ್ ಆಗಿದೆ.

ಹೌದು, ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲಿ ರಿಯಾಯ್ತಿ ದರದಲ್ಲಿ ಕ್ಯಾಂಟೀನ್ ಪ್ರಾರಂಭವಾಗಿದ್ದು, 10ರೂ.ಗೆ ತರಹೇವಾರಿ ತಿಂಡಿಗಳು ದೊರೆಯುತ್ತಿವೆ. ಇಡ್ಲಿ, ವಡೆ, ದೋಸೆ, ರವೆ ಇಡ್ಲಿ, ಮಸಾಲೆ ವಡೆ, ಕಾಫಿ, ಟೀ, ಮುದ್ದೆ, ಅನ್ನಸಾಂಬಾರ್ ಸೇರಿದಂತೆ ಎಲ್ಲಾ ಐಟಮ್ಗಳು ದೊರೆಯುತ್ತಿವೆ. ಪಾರ್ಸಲ್ ವ್ಯವಸ್ಥೆ ಕೂಡ ಮಾಡಲಾಗಿದೆ. ರಮ್ಯಾ ಅಭಿಮಾನಿಗಳು ಈ ಕ್ಯಾಂಟೀನ್ನನ್ನು ಮಂಡ್ಯಾದಲ್ಲಿ ಪ್ರಾರಂಭಿಸಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಚಾಲನೆ ನೀಡಿದ್ದಾರೆ.
ಇದರೊಂದಿಗೆ ರಮ್ಯಾ ಮಂಡ್ಯ ರಾಜಕಾರಣಕ್ಕೆ ಹಿಂದಿರುಗಲಿದ್ದಾರೆ ಎಂಬ ಸುದ್ದಿ ರಾಜಕಾರಣದಲ್ಲಿ ದಟ್ಟವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಮಂಡ್ಯ ಅಥವಾ ಮೇಲುಕೋಟೆಯಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Please follow and like us:
0
http://bp9news.com/wp-content/uploads/2017/12/ramya.jpghttp://bp9news.com/wp-content/uploads/2017/12/ramya-150x150.jpgPolitical Bureauತಂತ್ರಜ್ಞಾನಪ್ರಮುಖಮಂಡ್ಯಬೆಂಗಳೂರು: ರಾಜಕಾರಣಿಗಳಿಗೂ ಕ್ಯಾಂಟೀನ್ಗೂ ಚುನಾವಣಾ ವರ್ಷ ಆದ್ದರಿಂದಲೇ ಏನೋ ಅವಿನಾಭಾವತೆಯೊಂದು ಸೃಷ್ಠಿಯಾಗಿದೆ ಎಂದು ಕಾಣುತ್ತದೆ. ಇಂದಿರಾಕ್ಯಾಂಟೀನ್ ಆಯ್ತು ಅಪ್ಪಾಜಿ ಕ್ಯಾಂಟೀನ್ ಆಯ್ತು, ಇದೀಗ ಮಂಡ್ಯಾದಲ್ಲಿ ರಮ್ಯಾ ಕ್ಯಾಂಟೀನ್ ಒಂದು ಸ್ಟಾರ್ಟ್ ಆಗಿದೆ. ಹೌದು, ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲಿ ರಿಯಾಯ್ತಿ ದರದಲ್ಲಿ ಕ್ಯಾಂಟೀನ್ ಪ್ರಾರಂಭವಾಗಿದ್ದು, 10ರೂ.ಗೆ ತರಹೇವಾರಿ ತಿಂಡಿಗಳು ದೊರೆಯುತ್ತಿವೆ. ಇಡ್ಲಿ, ವಡೆ, ದೋಸೆ, ರವೆ ಇಡ್ಲಿ, ಮಸಾಲೆ ವಡೆ, ಕಾಫಿ, ಟೀ,...Kannada News Portal