ಸ್ಯಾಂಡಲ್​ವುಡ್​ ಕ್ವೀನ್​, ಕಾಂಗ್ರೆಸ್ ನಾಯಕಿ  ರಮ್ಯಾ ಮತ್ತೆ ಫ್ರಂಟ್​ ಲೈನ್​ ಸುದ್ದಿಯಾಗ್ತಿದ್ದಾರೆ. ನನ್ನನ್ನು ಮರೆಯ ಬೇಡಿ ಎಂದು ಆಗಾಗ್ಗ ಸಿನಿಮಾ, ಬಗ್ಗೆ ಮಾತನಾಡುತ್ತಾ ಅಭಿಮಾನಿಗಳಿಎಗ ಶಾಕ್​ಕೊಡ್ತಿದ್ರು. ಇನ್ನು ರಾಜಕೀಯದಿಂದ ದೂರ ಸರಿಯುವ ಪ್ಲಾನ್​ ಮಾಡಿಲ್ಲವೆನ್ನುವ ರಮ್ಯಾ ಮತ್ತೆ ಮೋದಿ ಸರ್ಕಾರದ ವಿರುದ್ಧ ಮಾತನಾಡಿ  ಸು್ದ್ದುಯಾಗಿದ್ದಾರೆ. ನಿನ್ನೆ ಭಾರತ್​ ಬಂದ್​ ಗೆ ಬೆಂಬಲ  ನೀಡುವುದರ ಮೂಲಕ ಟ್ವೀಟ್​ ಮಾಡಿದ್ದಾರೆ.

ಪ್ರೆಟ್ರೋಲ್​​ ರೇಟ್​ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾನೇ ಇದೆ. ಲೀಟರ್​​ಗೆ 76 ರೂಪಾಯಿ ಇದ್ದ ಪ್ರೆಟ್ರೋಲ್​ ರೇಟ್​​ ಈಗ 87 ರೂಪಾಯಿ ಆಗಿದೆ. ಹಾಗಾಗಿ ನಿತ್ಯ ಗ್ರಾಹಕರ ಜೇಬಿಗೆ ಕತ್ತರಿ ಬೀಳ್ತಿದೆ. ಇನ್ನು ಇದೇ ಹಿನ್ನೆಲೆಯಲ್ಲಿ ಕಾಂಗ್ರೇಸ್​​ನ ಮಾಜಿ ಸಂಸದೆಯಾದ ನಟಿ ರಮ್ಯಾ ಕೇಂದ್ರ ಸರ್ಕಾರವನ್ನ ಟ್ವಿಟ್ಟರ್​​ ಮೂಲಕ ಟೀಕಿಸಿದ್ದಾರೆ. ಪೆಟ್ರೋಲ್​​ ಹಾಗೂ ಡೀಸೆಲ್ ರೇಟ್​​ ಏರಿಕೆ ಆಗ್ತಿರೋದನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಭಾರತ್ ಬಂದ್​ಗೆ ಕರೆ ನೀಡಲಾಗಿತ್ತು. ಇನ್ನು ಅದಕ್ಕೆ ಸಂಭಂದ ಪಟ್ಟಂತೆ ರಮ್ಯಾ ಕೆಲ ಹಾಸ್ಯಾಸ್ಪದ ಫೋಟೋಗಳನ್ನು ಹಾಕಿ ಕೇಂದ್ರ ಸರ್ಕಾರವನ್ನು ಟ್ವಿಟ್ಟರ್​​ನಲ್ಲಿ ಲೇವಡಿ ಮಾಡಿದ್ದಾರೆ.

 

ವಿಶೇಷ ಅಂದ್ರೆ ಅಮೀರ್ ಖಾನ್ ನಟಿಸಿರುವ ಧೂಮ್3 ಹಾಗೂ ದಂಗಲ್ ಚಿತ್ರಗಳ ಪೋಟೋಗಳನ್ನು ಯುಪಿಎ ಮತ್ತು ಎನ್​ಡಿಎ ಸರ್ಕಾರಕ್ಕೆ ಹೋಲಿಸಿದ್ದಾರೆ. ಇಲ್ಲಿ ಒಳ್ಳೆ ಮೈಕಟ್ಟು ಹೊಂದಿರುವ ಅಮೀರ್ ಖಾನ್​ ಚಿತ್ರವನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಪೆಟ್ರೋಲ್ ಬೆಲೆಗೆ ಹೋಲಿಸಿದ್ರೆ, ದಂಗಲ್​ನಲ್ಲಿ ಮುದುಕನ ಪಾತ್ರದಲ್ಲಿ ಕಾಣಿಸಿಕೊಂಡ ಅಮೀರ್​ನ್ನು ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಪೆಟ್ರೋಲ್​ ರೇಟ್​ಗೆ ಹೋಲಿಸಿ ರಮ್ಯಾ ಟ್ರೋಲ್ ಮಾಡಿದ್ದಾರೆ. ಇನ್ನು ನಿನ್ನೆ ನಡೆದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಭಾರತದ ಪರ ರವೀಂದ್ರ ಜಡೇಜಾ 86 ರನ್ ಗಳಿಸಿಕೊಂಡಿದ್ರು. ​ಇದನ್ನು ತಮ್ಮ ಟ್ವೀಟ್​ನಲ್ಲಿ ಹಾಸ್ಯಾವಾಗಿ ಟ್ರೋಲ್​​ ಮಾಡಿರೊ ರಮ್ಯಾ, ಇದು ಭಾರತದ 2ನೇ ಗರಿಷ್ಠ ರನ್​ ಆಗಿದೆ. ಮೊದಲನೇ ಸ್ಥಾನದಲ್ಲಿ ಭಾರತದ ಪೆಟ್ರೋಲ್ ದರ 87 ಇದೆ ಅಂತ ವ್ಯಂಗ್ಯವಾಗಿ ಟ್ವೀಟ್​ ಮಾಡಲಾಗಿದೆ.

Please follow and like us:
0
http://bp9news.com/wp-content/uploads/2018/09/ramya_20160823_630_630.jpghttp://bp9news.com/wp-content/uploads/2018/09/ramya_20160823_630_630-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ ಕ್ವೀನ್​, ಕಾಂಗ್ರೆಸ್ ನಾಯಕಿ  ರಮ್ಯಾ ಮತ್ತೆ ಫ್ರಂಟ್​ ಲೈನ್​ ಸುದ್ದಿಯಾಗ್ತಿದ್ದಾರೆ. ನನ್ನನ್ನು ಮರೆಯ ಬೇಡಿ ಎಂದು ಆಗಾಗ್ಗ ಸಿನಿಮಾ, ಬಗ್ಗೆ ಮಾತನಾಡುತ್ತಾ ಅಭಿಮಾನಿಗಳಿಎಗ ಶಾಕ್​ಕೊಡ್ತಿದ್ರು. ಇನ್ನು ರಾಜಕೀಯದಿಂದ ದೂರ ಸರಿಯುವ ಪ್ಲಾನ್​ ಮಾಡಿಲ್ಲವೆನ್ನುವ ರಮ್ಯಾ ಮತ್ತೆ ಮೋದಿ ಸರ್ಕಾರದ ವಿರುದ್ಧ ಮಾತನಾಡಿ  ಸು್ದ್ದುಯಾಗಿದ್ದಾರೆ. ನಿನ್ನೆ ಭಾರತ್​ ಬಂದ್​ ಗೆ ಬೆಂಬಲ  ನೀಡುವುದರ ಮೂಲಕ ಟ್ವೀಟ್​ ಮಾಡಿದ್ದಾರೆ. ಪ್ರೆಟ್ರೋಲ್​​ ರೇಟ್​ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾನೇ ಇದೆ. ಲೀಟರ್​​ಗೆ 76...Kannada News Portal