ಒಂದು ಕಡೆ ಪರ್ಸನಲ್, ಮತ್ತೊಂದು ಕಡೆ ಪ್ರೊಫೆಷನಲ್​.ಪ್ರೊಫೆಷನಲೀ ಹಿಟ್​ ನಾಯಕಿಯಾಗಿದ್ರೂ, ಪರ್ಸನಲೀ ಸೋತ್ರ…?  ಅಂತಾರೆ ಅಭಿಮಾನಿಗಳು. ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಸಂಬಂಧಕ್ಕೆ ಸದ್ಯ ಬ್ರೇಕ್​ ಬಿದ್ದಿದೆ. ರಶ್ಮಿಕಾ ಅಭಿನಯದ ಗೀತಾ ಗೋವಿಂದಂ ಸಿನಿಮಾ ಬಾಕ್ಸ್​ ಆಫೀಸ್​ ಹಿಟ್​ ಆಗಿದೆ.ತೆರೆಕಾಣುವ ಮೊದಲೇ ಆಡಿಯೋ ಮೂಲಕ ಸಿನಿಮಾ ಹಿಟ್​  ಆಗುವ ಭವಿಷ್ಯ ನುಡಿದಿದ್ದ ಅಭಿಮಾನಿಗಳು, ಸಿನಿಮಾ ತೆರೆಕಂಡ ಮೇಲೆ ಭವಿಷ್ಯ ಸತ್ಯ ಮಾಡಿದ್ದಾರೆ.

ನಾಗಾರ್ಜುನ ಅವರ ತಂದೆ ಅಕ್ಕಿನೇನಿ ನಾಗೇಶ್ವರ ರಾವ್​ ಅವರು ಬಹಳ ಹಿಂದೆಯೇ ‘ದೇವದಾಸು’ ಸಿನಿಮಾದ ಹೆಸರನ್ನೇ ಕೊಂಚ ಬದಲಾಯಿಸಿ, ಈ ಸಿನಿಮಾಗೆ ‘ದೇವದಾಸ್​’ ಎಂದು ಇಡಲಾಗಿದೆ. ಈ ಸಿನಿಮಾದಲ್ಲಿ ನಾಗಾರ್ಜುನ ಅವರೊಂದಿಗೆ ನಾನಿ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ನಾಗ್​ ‘ದೇವ’ ಎಂಬ ಡಾನ್​ ಪಾತ್ರದಲ್ಲಿ ಕಾಣಿಸಿಕೊಂಡರೆ, ನಾನಿ ‘ದಾಸ್​’ ಪಾತ್ರಧಾರಿಯಾಗಿದ್ದಾರೆ. ಅದಕ್ಕಾಗಿಯೇ ಈ ಸಿನಿಮಾಗೆ ‘ದೇವದಾಸ್​’ ಎಂದು ಶೀರ್ಷಿಕೆ ನೀಡಲಾಗಿದೆ.

ಬಿರುಸಿನಿಂದಸಾಗಿದ್ದ ಚಿತ್ರೀಕರಣಕ್ಕೆ ಈಗ ತೆರೆ ಬಿದ್ದಿದ್ದು, ಈ ವಿಷಯವನ್ನು ಖುದ್ದು ನಾಗಾರ್ಜುನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೇ ಈ ಸಿನಿಮಾವನ್ನು ಸೇರಿ 3 ಸಿನಿಮಾಗಳನ್ನು ತೆಲುಗಿನಲ್ಲೇ ಮುಗಿಸಿರುವ ರಶ್ಮಿಕಾ, ಗೀತಾ   ಗೋವಿಂದಂ ಖ್ಯಾತಿಯ ವಿಜಯ್​ ದೇವರಕೊಂಡ  ಜೊತೆ ಮತ್ತೊಂದು  ಹೊಸ ಸಿನಿಮಾ ಆರಂಭ  ಮಾಡಿದ್ದಾರೆ. ಒಂದು ಕಡೆ, ಒಂದರ ಮೇಲೊಂದರಂತೆ ಸಿನಿಮಾ ಆಫರ್ಸ್​ಗಳು, ಮತ್ತೊಂದು ಕಡೆ ನಿಶ್ಚಿತಾರ್ಥ ಮಾಡಿಕೊಂಡಿದ್ದ  ರಕ್ಷಿತ್​ ಶೆಟ್ಟಿ ಜೊತೆಗಿನ ಬ್ರೇಕ್​ಅಪ್​. ಏನೇ ಆಗಲೀ   ಎಲ್ಲದ್ದಕ್ಕಿಂತ ಮುಖ್ಯ ಸಿನಿಮಾ ಕೆರಿಯರ್​ ಎನ್ನುವ ರಶ್ಮಿಕಾ ಅಂಡ್​ ರಶ್ಮಿಕಾ ಫ್ಯಾಮಿಲಿ, ಅವಳ ಯಶಸ್ಸಿಗೆ ನಾವ್ಯಾರು ಅಡ್ಡಲಾಗುವುದಿಲ್ಲ. ಅವಳ ವೈಯಕ್ತಿಕ, ಅವರವರ ಸ್ವಾತಂತ್ರ್ಯ ಅವರವರಿಗೆ ಬಿಟ್ಟಿದ್ದು ಎಂದಿದ್ದಾರೆ. ಆದರೆ ರಕ್ಷಿತ್​ ಮಾತ್ರ ಸದ್ಯದರಲ್ಲೇ ನಿಮಗೆ ಎಲ್ಲಾ  ವಿಚಾರ  ತಿಳಿಸ್ತೀನಿ. ಸದ್ಯ ಗಾಸಿಪ್​ಗೆ ಬ್ರೇಕ್​ ಹಾಕಿ ಎಂದಿದ್ದಾರೆ.

ಅಂದಹಾಗೇ ಕನ್ನಡದ ಹುಡುಗಿಯೊಬ್ಬಳು ಟಾಲಿವುಡ್​ನಲ್ಲಿ ಈ ಪರಿ ಬೆಳೆದಿದ್ದರ ಬಗ್ಗೆ ಇಡೀ ಟಾಲಿವುಡ್​ ರಶ್ಮಿಕಾರನ್ನು ಹೊಗಳುತ್ತಿದೆ. ಸಿನಿಮಾ ಯಶಸ್ಸಿಗೆ ರಶ್ಮಿಕಾ ಪಾತ್ರ ಅಷ್ಟೇ ಪ್ರಮುಖವಾಗಿದೆ ಎನ್ನುತ್ತಿದ್ದಾರೆ. ಅದು ಹೀರೋ ಸಿನಿಮಾವಾದ್ರೂ ರಶ್ಮಿಕಾ ಅವರಿಗೆ ಅವರದ್ದೇ ಆದ ಚಾರ್ಮ್​ ಕೊಡಲಾಗುತ್ತದೆ ತೆಲುಗಿನಲ್ಲಿ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಇದೆಲ್ಲಾ ನೋಡಿದ್ರೆ ಸೋತು ಗೆದ್ರಾ ನಟಿ ರಶ್ಮಿಕಾ ಮಂದಣ್ಣ ಎನಿಸೋದು ನಿಜ. ಒಂದು ಕಡೆ ಸಿನಿಮ ಯಶಸ್ಸು, ಮತ್ತೊಂದು ಕಡೆ ಕಾಂಟ್ರೋವರ್ಸಿ ಭೂತ.

Please follow and like us:
0
http://bp9news.com/wp-content/uploads/2018/09/Rashmika-Mandanna.jpghttp://bp9news.com/wp-content/uploads/2018/09/Rashmika-Mandanna-150x150.jpgBP9 Bureauಪ್ರಮುಖಸಿನಿಮಾಒಂದು ಕಡೆ ಪರ್ಸನಲ್, ಮತ್ತೊಂದು ಕಡೆ ಪ್ರೊಫೆಷನಲ್​.ಪ್ರೊಫೆಷನಲೀ ಹಿಟ್​ ನಾಯಕಿಯಾಗಿದ್ರೂ, ಪರ್ಸನಲೀ ಸೋತ್ರ...?  ಅಂತಾರೆ ಅಭಿಮಾನಿಗಳು. ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಸಂಬಂಧಕ್ಕೆ ಸದ್ಯ ಬ್ರೇಕ್​ ಬಿದ್ದಿದೆ. ರಶ್ಮಿಕಾ ಅಭಿನಯದ ಗೀತಾ ಗೋವಿಂದಂ ಸಿನಿಮಾ ಬಾಕ್ಸ್​ ಆಫೀಸ್​ ಹಿಟ್​ ಆಗಿದೆ.ತೆರೆಕಾಣುವ ಮೊದಲೇ ಆಡಿಯೋ ಮೂಲಕ ಸಿನಿಮಾ ಹಿಟ್​  ಆಗುವ ಭವಿಷ್ಯ ನುಡಿದಿದ್ದ ಅಭಿಮಾನಿಗಳು, ಸಿನಿಮಾ ತೆರೆಕಂಡ ಮೇಲೆ ಭವಿಷ್ಯ ಸತ್ಯ ಮಾಡಿದ್ದಾರೆ. ನಾಗಾರ್ಜುನ ಅವರ ತಂದೆ ಅಕ್ಕಿನೇನಿ...Kannada News Portal