ನಟಿ ರಶ್ಮಿಕಾ ಮತ್ತು ರಕ್ಷಿತ್​ ಶೆಟ್ಟಿ ನಡುವಿನ ಸಂಬಂಧಕ್ಕೆ ಸದ್ಯ ಫುಲ್​ಸ್ಟಾಪ್ ಬಿದ್ದಿದೆ. ಅಧಿಕೃತವಾಗಿಯೇ ಇಬ್ಬರು ಬೇರೆ ಬೇರೆಯಾಗಿದ್ದಾರೆ.  ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಇಬ್ಬರೂ ಎಂಗೇಜ್​ಮೆಂಟ್​  ರಿಂಗ್​ನ್ನು ವಾಪಸ್ಸು ಮಾಡಿದ್ದಾರಂತೆ ಎಂಬ ಸುದ್ದಿ ಸ್ವತಃ ರಶ್ಮಿಕಾ ತಾಯಿಯೇ ಬಾಯಿ ಬಿಟ್ಟಿದ್ದಾರಂತೆ.

ಇವರಿಬ್ಬರ ನಡುವೆ ಎಷ್ಟೋ ಬ್ರೇಕ್​ಅಪ್​ ಸುದ್ದಿಗಳು ಹಬ್ಬಿದ್ರೂ ಕೂಡ ತಲೆ ಕೆಡಿಸಿಕೊಳ್ಳದ ಈ ಜೋಡಿ, ಟ್ರೋಲ್​  ವಿಪರೀತಕ್ಕೆ ಹೋದಾಗ  ರಿಯಾಕ್ಟ್​ ಮಾಡಿದ್ದರು. ನಟಿ ರಶ್ಮಿಕಾ ಮಂದಣ್ಣ, ನಾನು ರಕ್ಷಿತ್​ ಜೊತೆ ಚೆನ್ನಾಗಿಯೇ ಇದ್ದೇವೆ, ವಿಜಯ್​ ದೇವರಕೊಂಡ ಜೊತೆಗಿನ ಗಾಸಿಪ್​ಗೆ  ಫುಲ್​ ಸ್ಟಾಪ್​ ಇಡಿ ಎಂದು ಕೇಳಿಕೊಂಡಿದ್ದರು. ಆ ನಂತರ ರಕ್ಷಿತ್​ ಶೆಟ್ಟಿ ಕೂಡ ತಮ್ಮೆಲ್ಲಾ ಸಾಮಾಜಿಕ ಜಾಲತಾಣಗಳ ಅಕೌಂಟ್​ನಿಂದ  ಇದೇ ಕಾರಣಕ್ಕೆ ಹೊರ ಬಂದಿದ್ರು ಎನ್ನಲಾಗ್ತಿದೆ.  ನಿಜಕ್ಕೂ ಇವರಿಬ್ಬರ ಸಂಬಂಧ ಮುರಿದು ಬಿದ್ದಿದ್ಯಾ, ಕಿರಿಕ್​ ಯಶಸ್ಸಿನ ಜೋಡಿ ಮದುವೆಯಾಗೋ ಮುಂಚೆನೇ ಬೇರೆ ಬೇರೆಯಾಗೋದ್ರಾ….?

ಈ ವಿಚಾರವಾಗಿ ರಶ್ಮಿಕಾ ಮಂದಣ್ಣ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಬ್ರೇಕಪ್​ ಕಹಾನಿ ಬಗ್ಗೆ ಮಾತನಾಡಿದ್ದಾರೆ. ಅವರವರ ಬದುಕು ಅವರವರ ಸ್ವತಂತದ್ದು ಎಂಬ  ಹೇಳಿಕೆ ಹಿಂದೆ ಇವರಿಬ್ಬರ ಬ್ರೇಕ್​ಅಪ್​ ಅನ್ನು  ಬಯಲಿಗೆಳೆದಿದ್ದಾರೆ.

ಗೀತಾ ಗೋವಿಂದಂ ಸಿನಿಮಾಗೆ ಮೊದಲೇ ರಕ್ಷಿತ್​ ಶೆಟ್ಟಿ-ರಶ್ಮಿಕಾ ಮದುವೆ ಯಾವಾಗ ಅಂತಾ ಕೇಳಿದ್ರೆ, ಇಬ್ಬರದ್ದೂ ಒಂದೇ ಉತ್ತರ. ಮನೆಯವರು ನೋಡಿಕೊಳ್ತಾರೆ, ನಾವು ಸಿನಿಮಾಗಳಲ್ಲಿ  ಬ್ಯುಸಿ ಅಂತಾ. ಆದರೆ ಟ್ರಾಲ್​ನಿಂದಾಗಿ ರಕ್ಷಿತ್​ ಮನೆಯವರಿಂದ ನೆಗಟೀವ್​ ಕಮೆಂಟ್ಸ್​ ಬರತೊಡಗಿದೆ.  ಹಾಗಾಗಿಯೇ ಖುದ್ದು ರಶ್ಮಿಕಾ ಕುಟುಂಬಸ್ಥರು ಈ ಸಂಬಂಧ ಬೇಡ ಎಂದಿದ್ದಾರೆ ಎಂಬ ಮಾತುಗಳು ಕೇಳತೊಡಗಿವೆ.

ಏನೇ ಆಗಲೀ ಈ ಸ್ಟಾರ್​ ಜೋಡಿ ಹಸೆಮಣೆ ಏರುವ ಮುನ್ನವೇ ಅಭಿಮಾನಿಗಳಿಗೆ ಕಹಿ ಸುದ್ದಿಯನ್ನು ಕೊಟ್ಟಿವೆ. ನಿಜಕ್ಕೂ ಇವರಿಬ್ಬರ ಬ್ರೇಕ್​ಅಪ್​ ಸುದ್ದಿ ಸ್ಟಾರ್​ ಫ್ಯಾನ್ಸ್​ಗೆ  ಬರಸಿಡಿಲಿನಂತಾಗಿರೋದು ಸತ್ಯ.

Please follow and like us:
0
http://bp9news.com/wp-content/uploads/2018/09/Rashmika_Mandanna-1.jpeghttp://bp9news.com/wp-content/uploads/2018/09/Rashmika_Mandanna-1-150x150.jpegBP9 Bureauಸಿನಿಮಾನಟಿ ರಶ್ಮಿಕಾ ಮತ್ತು ರಕ್ಷಿತ್​ ಶೆಟ್ಟಿ ನಡುವಿನ ಸಂಬಂಧಕ್ಕೆ ಸದ್ಯ ಫುಲ್​ಸ್ಟಾಪ್ ಬಿದ್ದಿದೆ. ಅಧಿಕೃತವಾಗಿಯೇ ಇಬ್ಬರು ಬೇರೆ ಬೇರೆಯಾಗಿದ್ದಾರೆ.  ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಇಬ್ಬರೂ ಎಂಗೇಜ್​ಮೆಂಟ್​  ರಿಂಗ್​ನ್ನು ವಾಪಸ್ಸು ಮಾಡಿದ್ದಾರಂತೆ ಎಂಬ ಸುದ್ದಿ ಸ್ವತಃ ರಶ್ಮಿಕಾ ತಾಯಿಯೇ ಬಾಯಿ ಬಿಟ್ಟಿದ್ದಾರಂತೆ. ಇವರಿಬ್ಬರ ನಡುವೆ ಎಷ್ಟೋ ಬ್ರೇಕ್​ಅಪ್​ ಸುದ್ದಿಗಳು ಹಬ್ಬಿದ್ರೂ ಕೂಡ ತಲೆ ಕೆಡಿಸಿಕೊಳ್ಳದ ಈ ಜೋಡಿ, ಟ್ರೋಲ್​  ವಿಪರೀತಕ್ಕೆ ಹೋದಾಗ  ರಿಯಾಕ್ಟ್​ ಮಾಡಿದ್ದರು. ನಟಿ ರಶ್ಮಿಕಾ ಮಂದಣ್ಣ, ನಾನು...Kannada News Portal