ಕಿರಿಕ್​ ಪಾರ್ಟಿ ಸಕ್ಸಸ್​ ನಟಿ ರಶ್ಮಿಕಾ ಮಂದಣ್ಣನಿಗಷ್ಟೇ ಅಲ್ಲ, ನಟ ರಕ್ಷಿತ್​ ಶೆಟ್ಟಿಗೆ,  ನಿರ್ದೇಶಕ ರಿಷಬ್​ ಶೆಟ್ಟಿಗೆ, ಇನ್ನೊಬ್ಬ ನಾಯಕಿ ಕಿರಿಕ್​ ಹುಡುಗಿ ಎಂದೇ ಖ್ಯಾತಿಯಾದ ಸಂಯುಕ್ತಾ ಹೆಗ್ಡೆಗೂ ಸಕ್ಸಸ್ಸು ತಂದುಕೊಟ್ಟಿತು. ಕಿರಿಕ್​ ಪಾರ್ಟಿ ನಂತರ ಸಂಯುಕ್ತಾ , ಕಾಲೇಜು ಕುಮಾರ ಸಿನಿಮಾದಲ್ಲೂ  ಕೂಡ ನಟಿಸಿದ್ದರೂ. ಸಿನಿಮಾ ಏನೋ  ಹೇಳಿಕೊಳ್ಳುವಂತೆ ಯಶಸ್ಸು ಕಾಣದೇ ಇದ್ರೂ, ಸಂಯುಕ್ತಾ ಗೆ ಮಾತ್ರ ಅವಕಾಶಗಳು ಕಡಿಮೆಯಾಗಿಲ್ಲ. ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ  ರಶ್ಮಿಕಾ ಗೆದ್ದಾಯ್ತು ಈಗ ಸಂಯುಕ್ತಾ…ಆದರೆ ಈ ಬಾರಿ ಸಂಯುಕ್ತಾ ಪರೀಕ್ಷೆ ಬರೆಯೋಕೆ ರೆಡಿಯಾಗ್ತಿರೋದು ತಮಿಳು ಸಿನಿಮಾದಲ್ಲಿ…

ಕಳೆದ ಸೀಸನ್​ ಬಿಗ್​ಬಾಸ್​ ಶೋನಲ್ಲಿ ಭಾಗವಹಿಸಿ ಕಿರಿಕ್​ ಮಾಡಿಕೊಂಡಿದ್ದ ಸಂಯುಕ್ತಾ  ಒಂದಷ್ಟು ತಿಂಗಳು ಕಾಲ ಸುಮ್ಮನಾಗಿಬಿಟ್ಟಿದ್ದರು. ಕನ್ನಡದ ಯಾವ ಚಿತ್ರಗಳಲ್ಲಿಯೂ ನಟಿಸಿರಲಿಲ್ಲ. ಆದರೀಗ ಸಂಯುಕ್ತಾ ತಮಿಳು ಚಿತ್ರರಂಗದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಆದರೆ ಸಂಯುಕ್ತಾ ಅಳೆದೂ ತೂಗಿ ಇದೀಗ ಒಂದು ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ನಟ್ಟುದೇವ್ ಜೊತೆ ಸಂಯುಕ್ತಾ ಜೋಡಿಯಾಗಿ ನಟಿಸಲಿರೋ ಈ ಚಿತ್ರ ‘ಪಪ್ಪಿ’.

ಒಂದು ಪ್ರೇಮ ಕಥನ, ಪ್ರಾಣಿ ಪ್ರೀತಿ ಹಾಗೂ ಡಾಗ್ ಬ್ರೀಡಿಂಗ್ ಸುತ್ತ ಹೆಣೆದಿರೋ ಮಾನವೀಯ ಅಂಶಗಳ ಥ್ರಿಲ್ಲಿಂಗ್ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಇವತ್ತಿನ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳೇ ಸವಕಲಾಗುತ್ತಿವೆ. ಈ ಜನರೇಷನ್ನಿನ ಕಣ್ಣಿನಲ್ಲಿ ಸಂಬಂಧಗಳು ಬೇರೆಯದ್ದೇ ಛಾಯೆಯಲ್ಲಿ ಕಾಣಿಸಲಾರಂಭಿಸಿವೆ. ಈ ಸೂಕ್ಷ್ಮ ಸಂಗತಿಯ ನೆಲೆಗಟ್ಟಿನಲ್ಲಿ ಈ ಚಿತ್ರದ ಕಥೆ ಹೆಣೆಯಲ್ಪಟ್ಟಿದೆಯಂತೆ.

ಈ ಚಿತ್ರದ ಬಗ್ಗೆ ಸಂಯುಕ್ತಾ ಖುಷಿಯ ಮೂಡಿನಲ್ಲಿದ್ದಾರೆ. ತಮಿಳಿನಿಂದ ಸಾಲು ಸಾಲು ಅವಕಾಶಗಳು ಬರುತ್ತಿವೆ. ಆದರೆ ಈ ಚಿತ್ರದಲ್ಲಿ ಕಥೆ ಅದ್ಭುತವಾಗಿರೋ ಕಾರಣದಿಂದ ನಟಿಸಲು ಒಪ್ಪಿರೋದಾಗಿ ಹೇಳಿಕೊಂಡಿರುವ ಸಂಯುಕ್ತಾ ತಮಿಳಿನಲ್ಲಿ ನೆಲೆಗೊಳ್ಳುವ ಆಸೆ ಹೊಂದಿರುವಂತಿದೆ.

 

 

 

Please follow and like us:
0
http://bp9news.com/wp-content/uploads/2018/09/Samyuktha-Hegde1-Photo-Galle.jpghttp://bp9news.com/wp-content/uploads/2018/09/Samyuktha-Hegde1-Photo-Galle-150x150.jpgBP9 Bureauಸಿನಿಮಾಕಿರಿಕ್​ ಪಾರ್ಟಿ ಸಕ್ಸಸ್​ ನಟಿ ರಶ್ಮಿಕಾ ಮಂದಣ್ಣನಿಗಷ್ಟೇ ಅಲ್ಲ, ನಟ ರಕ್ಷಿತ್​ ಶೆಟ್ಟಿಗೆ,  ನಿರ್ದೇಶಕ ರಿಷಬ್​ ಶೆಟ್ಟಿಗೆ, ಇನ್ನೊಬ್ಬ ನಾಯಕಿ ಕಿರಿಕ್​ ಹುಡುಗಿ ಎಂದೇ ಖ್ಯಾತಿಯಾದ ಸಂಯುಕ್ತಾ ಹೆಗ್ಡೆಗೂ ಸಕ್ಸಸ್ಸು ತಂದುಕೊಟ್ಟಿತು. ಕಿರಿಕ್​ ಪಾರ್ಟಿ ನಂತರ ಸಂಯುಕ್ತಾ , ಕಾಲೇಜು ಕುಮಾರ ಸಿನಿಮಾದಲ್ಲೂ  ಕೂಡ ನಟಿಸಿದ್ದರೂ. ಸಿನಿಮಾ ಏನೋ  ಹೇಳಿಕೊಳ್ಳುವಂತೆ ಯಶಸ್ಸು ಕಾಣದೇ ಇದ್ರೂ, ಸಂಯುಕ್ತಾ ಗೆ ಮಾತ್ರ ಅವಕಾಶಗಳು ಕಡಿಮೆಯಾಗಿಲ್ಲ. ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ  ರಶ್ಮಿಕಾ ಗೆದ್ದಾಯ್ತು...Kannada News Portal