ರಾಯಚೂರು: ರಾಯಚೂರು ಭಾಗದಲ್ಲಿ ಭೀಕರ ಬರಗಾಲ ಪರಸ್ಥಿತಿ ಇದೆ, ಕುಡಿಯುವ ನೀರಿನ ಸಮಸ್ಯೆ ಇದೆ.ಇದ್ಯಾವುದಕ್ಕೂ ಸರ್ಕಾರ ಸ್ಪಂದಿಸಿಲ್ಲ. ರೈತರ ಪಾಲಿಗೆ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ರಾಯಚೂರನ್ನು ಬರಗಾಲ ಎಂದು ಘೋಷಣೆ ಮಾಡಬೇಕು. ತುಂಗಭದ್ರಾ ಡ್ಯಾಂ  ಭರ್ತಿಯಾದರು, ರೈತರಿಗೆ ನೀರು ಹರಿಸುವಲ್ಲಿ ವಿಫಲವಾಗಿದೆ. ಜಿಲ್ಲೆಗೆ ಎರಡು ನದಿಗಳಿದ್ದರು, ಜನರಿಗೆ ಕುಡಿಯುವ ನೀರು ಕೊಡಲು ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರ ಫಸಲ್ ಭೀಮಾ ಯೋಜನೆಯಲ್ಲಿ ಪರಿಹಾರ ರಾಜ್ಯಕ್ಕೆ ನೀಡಿದರು ರಾಯಚೂರು ಜಿಲ್ಲೆ ಸರಿಯಾಗಿ ಮುಟ್ಟಿಲ್ಲ ಅನ್ನೋ ದೂರಿದೆ ಎಂದರು. ರಾಯಚೂರಿನಲ್ಲಿ ನೀರಿಗಾಗಿ ಜನರು ಹಾಹಾಕಾರ ಪಡುತ್ತಿದ್ದಾರೆ. ಸರ್ಕಾರ ಶೀಘ್ರದಲ್ಲಿ ನೀರಿನ ಸಮಸ್ಯೆ ಬಗೆ ಹರಿಸಬೇಕು ಇಲ್ಲದಿದ್ದಲ್ಲಿ ರಾಯಚೂರಿನಲ್ಲಿ ರಸ್ತೆಗಿಳಿದು ಹೋರಾಟ ಮಾಡ್ತೇವೆ ಎಂದು ಎಚ್ಚರಿಸಿದರು.

ಕುಮಾರಸ್ವಾಮಿ ರೈತರ ಸಾಲ‌ಮನ್ನಾ ಬಗ್ಗೆ ದಿನಕ್ಕೊಂದು ಮಾತಾಡುತ್ತಿದ್ದಾರೆ.ಸಾಲಮನ್ನಕ್ಕಾಗಿ  ಕುಮಾರಸ್ವಾಮಿ  ಹಣ ಎಲ್ಲಿಂದ ತರ್ತಾರೋ ಗೊತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಸಾಲ ಬಗ್ಗೆ ಸಿಎಂ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ಬಗ್ಗೆ  ಸಿಎಂ ದೂರುವುದು ಬೇಡ ಅವರೇ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಸಾಲ ಮನ್ನಾ ಮಾಡಲಿ ಎಂದು ಹೆಳಿದರು.

ಜನರಿಗೆ ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದ್ದಿರಿ.ರೈತರ ಸಾಲ‌ಮನ್ನಾ ಬಗ್ಗೆ  ರೈತರಿಗೆ ಭರವಸೆ ನೀಡದಿದ್ದರೆ 20 ಸೀಟನ್ನು ಜೆಡಿಎಸ್  ಗೆಲ್ಲುತ್ತಿರಲಿಲ್ಲ ಎಂದು ವಗ್ದಾಳಿ ನಡೆಸಿದರು.ರಾಜ್ಯದ ಆರ್ಧಿಕ ಪರಸ್ಥಿತಿ ಬಗ್ಗೆ ಸರ್ಕಾರ ಒಂದು ವೈಟ್ ಪೇಪರ್ ಬಿಡುಗಡೆ ಮಾಡಲಿ ಎಂದು ಮನವಿ ಮಾಡಿದ್ದಾರೆ.

ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರ ಸಾಕಷ್ಟು ಹಣ  ಬಿಡುಗಡೆ ಮಾಡಿದೆ. ಫಸಲ್ ಭೀಮಾ ಯೋಜನೆಗೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ಅದನ್ನ ರಾಜ್ಯ ಸರ್ಕಾರ ಸರಿಯಾಗಿ ತಲುಪಿಸ ಬೇಕು ಎಂದು ಹೇಳಿದರು.

ಬಾದಾಮಿಗೆ ನಾನು ಅರ್ಧ ದಿನ ಹೋಗಿ ಪ್ರಚಾರ ನಡೆಸಿದ್ದರೂ  ಸಾಕಿತ್ತು, ಸಿದ್ದರಾಮಯ್ಯ ಪೂರ್ತಿಯಾಗಿ ‌ಮನೆಗೆ ಹೋಗ್ತಿದ್ರು. ಆದರೆ ಬೈ ಚಾನ್ಸ್​​​ ಗೆದ್ದಿದ್ದಾರೆ ಎಂದು ಲೇವಡಿಮಾಡಿದರು. ಮುಂಬರುವ ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ  20-22 ಸೀಟ್ ಗೆಲ್ಲಲಿದೆ ಎಂದು ಆಶಯವ್ಯಕ್ತಪಡಿಸಿದರು.

 

 

Please follow and like us:
0
http://bp9news.com/wp-content/uploads/2018/08/BSY-Raichuru-BP9-NEWS-e1533908356884.jpeghttp://bp9news.com/wp-content/uploads/2018/08/BSY-Raichuru-BP9-NEWS-e1533908356884-150x150.jpegBP9 Bureauಪ್ರಮುಖರಾಜಕೀಯರಾಯಚೂರುರಾಯಚೂರು: ರಾಯಚೂರು ಭಾಗದಲ್ಲಿ ಭೀಕರ ಬರಗಾಲ ಪರಸ್ಥಿತಿ ಇದೆ, ಕುಡಿಯುವ ನೀರಿನ ಸಮಸ್ಯೆ ಇದೆ.ಇದ್ಯಾವುದಕ್ಕೂ ಸರ್ಕಾರ ಸ್ಪಂದಿಸಿಲ್ಲ. ರೈತರ ಪಾಲಿಗೆ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) +...Kannada News Portal