ರಾಯಚೂರು : ರಾಯಚೂರಿನ ಕ್ಯಾದಿಗ್ಗೇರಾ ಜಿಲ್ಲಾ ಪಂಚಾಯತ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಉಳಿದಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕ್ಯಾದಿಗ್ಗೇರಾ ಜಿಲ್ಲಾ ಪಂಚಾಯತ ಕ್ಷೇತ್ರವು ಉಪಚುನಾವಣೆಗೆ ಸಜ್ಜಾಗಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಿರುಸುಗೊಂಡಿದೆ. ಈಗಾಗಲೇ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನಾಮ ಪತ್ರ ಸಲ್ಲಿಸಲು ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ, ಹೀಗಿರುವಾಗ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳು ಯಾರೆಂಬುದು ಇನ್ನೂ ನಿಗೂಢವಾಗಿ ಉಳಿದಿದೆ.

ಇಂದು ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸ್ಥಳೀಯ ಜಿಲ್ಲಾ ಪಂಚಾಯತ ಮಟ್ಟದ ಕಾರ್ಯಕರ್ತರ, ಹಾಗೂ ಮುಖಂಡ ಸಭೆಯನ್ನು ನಡೆಸಿದ್ದಾರೆ. ಬಹುತೇಕ ಕಾಂಗ್ರೆಸ್ ನಿಂದ ಸಂಸದ ಬಿ.ವಿ.ನಾಯಕರ ಅಳಿಯ ಕಾಂಗ್ರೆಸ್ ನ ರಾಜ್ಯ ಯುವ ಪ್ರಧಾನ‌ಕಾರ್ಯದರ್ಶಿ ಸಂದೀಪ ನಾಯಕ ರನ್ನು ಕಣಕ್ಕಿಳಿಸಬಹುದು ಎಂದು ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಹೊಸ ಜಿಲ್ಲಾ ಪಂಚಾಯತ ಕ್ಷೇತ್ರವಾಗಿ ರಚನೆಗೊಂಡ ಬೆನ್ನಲ್ಲೇ ಈ ಕ್ಷೇತ್ರಕ್ಕೆ ಉಪಚುನಾವಣೆಯ ಕಾವು ತಟ್ಟಿದೆ,ಕ್ಯಾದಿಗ್ಗೇರಾ ಎಸ್ಟಿ ಮೀಸಲು ಕ್ಷೇತ್ರವಾಗಿರುವುದರಿಂದ ವಿವಿಧ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಒಟ್ಟಾರೆಯಾಗಿ ಕೊನೆ ಗಳಿಗೆಯಲ್ಲಿ ಯಾರಿಗೆ ಯಾವ ಪಕ್ಷದಿಂದ ಟಿಕೆಟ್‌ ಸಿಗುತ್ತದೆ ಎಂಬುದು ಕ್ಷೇತ್ರದ ಜನತೆಯಲ್ಲಿ ಕುತೂಹಲ ಮೂಡಿಸಿದೆ.

Please follow and like us:
0
http://bp9news.com/wp-content/uploads/2018/05/WhatsApp-Image-2018-05-30-at-11.27.08-AM.jpeghttp://bp9news.com/wp-content/uploads/2018/05/WhatsApp-Image-2018-05-30-at-11.27.08-AM-150x150.jpegBP9 Bureauರಾಯಚೂರುರಾಯಚೂರು : ರಾಯಚೂರಿನ ಕ್ಯಾದಿಗ್ಗೇರಾ ಜಿಲ್ಲಾ ಪಂಚಾಯತ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಉಳಿದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕ್ಯಾದಿಗ್ಗೇರಾ ಜಿಲ್ಲಾ ಪಂಚಾಯತ ಕ್ಷೇತ್ರವು ಉಪಚುನಾವಣೆಗೆ ಸಜ್ಜಾಗಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಿರುಸುಗೊಂಡಿದೆ. ಈಗಾಗಲೇ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನಾಮ ಪತ್ರ ಸಲ್ಲಿಸಲು ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ, ಹೀಗಿರುವಾಗ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳು ಯಾರೆಂಬುದು ಇನ್ನೂ ನಿಗೂಢವಾಗಿ ಉಳಿದಿದೆ. ಇಂದು ಕಾಂಗ್ರೆಸ್ ಪಕ್ಷದಿಂದ...Kannada News Portal