ರಾಯಚೂರು : ಡಾ.ಅಂಬೇಡ್ಕರ ಸಂವಿಧಾನ ಬರೆದಿದ್ದರಿಂದ ನಾನು ಪ್ರಧಾನಿಯಾಗಿದ್ದೇನೆ. ದೇಶದ ಸಂವಿಧಾನ ಉತ್ತಮವಾಗಿದೆ ಎಂದು ಹೇಳುವ ಪ್ರಧಾನಿ ಮೋದಿಗೆ ತಾಕತ್ತು, ಬದ್ದತೆ ಇದ್ದರೆ,  ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯನ್ನು ಸಚಿವ ಸಂಪುಟದಿಂದ ಹೊರ ಹಾಕಲಿ ಎಂದು ಮಲ್ಲಿಕಾರ್ಜುನ ಖರ್ಗೆ ಸವಾಲ್​​ ಹಾಕಿದ್ದಾರೆ.

ಪವಿತ್ರವಾದ ಸಂವಿಧಾನಕ್ಕೆ ಅನಂತಕುಮಾರ್​​​ ಹೆಗಡೆ ಅವಮಾನ ಮಾಡಿದ್ದಾರೆ. ಅವರಿಗೆ ಸಚಿವರಾಗಿ ಇರಲು ಅರ್ಹತೆ ಇಲ್ಲ. ಅವರನ್ನ ಮೋದಿ ಸಚಿವ ಸಂಪುಟದಿಂದ  ಕೈ ಬಿಡುವ ಬದಲು ಬೆಂಬಲಿಸುತ್ತಿದ್ದಾರೆ. ಇದರಿಂದ ಮೋದಿ ಕೂಡಾ ಪರೋಕ್ಷವಾಗಿ ಸಂವಿಧಾನ ವಿರೋಧಿಸಿದಂತೆ ಎಂದು ವಾಗ್ದಾಳಿ ನಡೆಸಿದರು.

ಆದರೆ ಹೆಗಡೆಯನ್ನು ಸಚಿವ ಸಂಪುಟದಿಂದ ಕಿತ್ತು ಹಾಕಲು ಮೋದಿಗೆ ಸಾಧ್ಯವಿಲ್ಲ ಏಕೆಂದರೆ ಅವರ ಹಿಂದೆ RSS ಇದೆ. ಬಿಜೆಪಿ ಮತ್ತು ಮೋದಿ ದೇಶದ ಅಲ್ಪಸಂಖ್ಯಾತ ಸಮುದಾಯಗಳನ್ನು ಭಯದಲ್ಲಿ ಬದುಕುವಂತೆ ಮಾಡಿದೆ.ದೇಶದ ಏಕತೆಗೆ ಮೋದಿ ಆಡಳಿತ  ಮಾರಕವಾಗಿದೆ ಎಂದರು. ಕಾರ್ಪೊರೇಟ್​​​​ ಕಂಪನಿಗಳ 2.60 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಬಿಜೆಪಿಗೆ ರಾಜ್ಯದ ರೈತರ ಸಾಲ ಮನ್ನಾ ಮಾಡಲು ಏಕೆ ಸಾಧ್ಯವಿಲ್ಲ ಎಂದು ಮೋದಿಗೆ ಪ್ರಶ್ನಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/kharge1.jpghttp://bp9news.com/wp-content/uploads/2018/05/kharge1-150x150.jpgBP9 Bureauಪ್ರಮುಖರಾಜಕೀಯರಾಯಚೂರುರಾಯಚೂರು : ಡಾ.ಅಂಬೇಡ್ಕರ ಸಂವಿಧಾನ ಬರೆದಿದ್ದರಿಂದ ನಾನು ಪ್ರಧಾನಿಯಾಗಿದ್ದೇನೆ. ದೇಶದ ಸಂವಿಧಾನ ಉತ್ತಮವಾಗಿದೆ ಎಂದು ಹೇಳುವ ಪ್ರಧಾನಿ ಮೋದಿಗೆ ತಾಕತ್ತು, ಬದ್ದತೆ ಇದ್ದರೆ,  ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯನ್ನು ಸಚಿವ ಸಂಪುಟದಿಂದ ಹೊರ ಹಾಕಲಿ ಎಂದು ಮಲ್ಲಿಕಾರ್ಜುನ ಖರ್ಗೆ ಸವಾಲ್​​ ಹಾಕಿದ್ದಾರೆ. ಪವಿತ್ರವಾದ ಸಂವಿಧಾನಕ್ಕೆ ಅನಂತಕುಮಾರ್​​​ ಹೆಗಡೆ ಅವಮಾನ ಮಾಡಿದ್ದಾರೆ. ಅವರಿಗೆ ಸಚಿವರಾಗಿ ಇರಲು ಅರ್ಹತೆ ಇಲ್ಲ. ಅವರನ್ನ ಮೋದಿ ಸಚಿವ...Kannada News Portal