ರಾಯಚೂರು : ಜಿಲ್ಲೆಯ ಲಿಂಗಸಗೂರು ತಾಲೂಕಿನ ಬಿ.ಇ.ಓ ಕಛೇರಿಯ ಪಕ್ಕದಲ್ಲಿರುವ  ಅಂಗಡಿಯಲ್ಲಿ ಕುಡಿಯುವ ನೀರಲ್ಲಿ  ಹುಳುಗಳು ಪತ್ತೆಯಾಗಿವೆ.  ‌‌ಅಕ್ವಾಲೈಫ್ ಫಿಲ್ಟರ್ ಕುಡಿಯುವ ನೀರಿನ ವ್ಯಾಪಾರಸ್ಥರಾಗಿರುವ ಮಾಲೀಕ ಸಾಧಿರ , ಬಾಟಲಿ ಮಾರುವಾಗ  ನೀರಿನಲ್ಲಿ ದೀಪದ ಹುಳುಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ.

ಅಕ್ವಾಲೈಫ್ ನೀರಿನ ಬಾಟಲಿಯಲ್ಲಿ ದೀಪದ ಹುಳಗಳು ಕಂಡು ಬಂದಿದ್ದು ಅದನ್ನು ನೋಡಿ ಗಾಬರಿಯಾಗಿದ್ದಾರೆ ಅಂಗಡಿ ಮಾಲಿಕ ಸಾಧಿರ. ಇದು ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿರವ ‌‌ಅಕ್ವಾಲೈಫ್ ಫಿಲ್ಟರ್   ಶುದ್ಧ ನೀರಿನ ಘಟಕದಿಂದ ಮಾರಾಟವಾದ ನೀರಿನ ಬಾಟಲಿಯ ಕರ್ಮಕಾಂಡ ಈಗ ಬೆಳಕಿಗೆ ಬಂದಿದೆ.

ಸಾಕಷ್ಟು ಜನರು ಈ ಖಾಸಗಿ ಕಂಪನಿಯಿಂದ ಮಾರಾಟವಾಗುವ ನೀರನ ಬಾಟ್ಲಿಯನ್ನ ಕಾಸು ಕೊಟ್ಟು ಖರೀದಿಸಿ ಉಪಯೋಗಿಸುತ್ತಿದ್ದರು. ಆದರೆ ಈ ರೀತಿ ನೀರಿನಲ್ಲಿಯೇ ಹುಳುಗಳು ಪತ್ತೆಯಾಗಿದ್ದರಿಂದ ಜನ ಬೆಚ್ಚಿ ಬಿದ್ದಿದ್ದಾರೆ. ಕಾಸು ಕೊಟ್ಟು ರೋಗ ತಂದುಕೊಂಡ ಹಾಗೇ..ನಾವೇ  ನೀರಿಗೆ ಬೆಲೆ ಕೊಟ್ಟು ಹುಳ ಸೇವನೆ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮೇಲ್ನೋಟಕ್ಕೆ ಶುದ್ಧ   ಅಂತಾ ಕಂಡರೂ ಒಳಗಡೆ ಮಾತ್ರ ವಿಷಯುಕ್ತ ನೀರು. ಸದ್ಯ ಈ ಬಾಟಲಿಯಲ್ಲಿ ನೀರಿನ ಮಲಿನತೆ ಕಂಡ ಜನ ಕಂಪನಿಯ ವಿರುದ್ಧ  ಆರೋಪ ಮಾಡುತ್ತಿದ್ದಾರೆ.

ಬಾಟಲಿಯಲ್ಲಿ ಕಸವನ್ನು ಮತ್ತು ಹುಳುಗಳನ್ನು ಕಂಡ ಕೂಡಲೆ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಅಂಗಡಿ ಮಾಲೀಕ ಸಾಧಿರ  ದೂರು ನೀಡಿದ್ದಾರೆ. ವಿಷಯ ಮುಟ್ಟಿಸಿದರೂ  ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಮಾಲಿಕ ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2018/08/Karnatakada-Miditha-15.jpeghttp://bp9news.com/wp-content/uploads/2018/08/Karnatakada-Miditha-15-150x150.jpegBP9 Bureauಪ್ರಮುಖರಾಯಚೂರುಸಂಘಟನೆರಾಯಚೂರು : ಜಿಲ್ಲೆಯ ಲಿಂಗಸಗೂರು ತಾಲೂಕಿನ ಬಿ.ಇ.ಓ ಕಛೇರಿಯ ಪಕ್ಕದಲ್ಲಿರುವ  ಅಂಗಡಿಯಲ್ಲಿ ಕುಡಿಯುವ ನೀರಲ್ಲಿ  ಹುಳುಗಳು ಪತ್ತೆಯಾಗಿವೆ.  ‌‌ಅಕ್ವಾಲೈಫ್ ಫಿಲ್ಟರ್ ಕುಡಿಯುವ ನೀರಿನ ವ್ಯಾಪಾರಸ್ಥರಾಗಿರುವ ಮಾಲೀಕ ಸಾಧಿರ , ಬಾಟಲಿ ಮಾರುವಾಗ  ನೀರಿನಲ್ಲಿ ದೀಪದ ಹುಳುಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ. ಅಕ್ವಾಲೈಫ್ ನೀರಿನ ಬಾಟಲಿಯಲ್ಲಿ ದೀಪದ ಹುಳಗಳು ಕಂಡು ಬಂದಿದ್ದು ಅದನ್ನು ನೋಡಿ ಗಾಬರಿಯಾಗಿದ್ದಾರೆ ಅಂಗಡಿ ಮಾಲಿಕ ಸಾಧಿರ. ಇದು ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿರವ ‌‌ಅಕ್ವಾಲೈಫ್ ಫಿಲ್ಟರ್   ಶುದ್ಧ ನೀರಿನ ಘಟಕದಿಂದ...Kannada News Portal