ರಾಯಚೂರು: ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಪುಟ್ಟರಂಗಶೆಟ್ಟಿ ರಾಯಚೂರಿನಲ್ಲಿ  ಒಂದು ಬಾಂಬ್​​ ಸಿಡಿಸಿದ್ದಾರೆ. ಸಿ.ಪಿ.ಯೋಗಿಶ್ವರ್​​​​​​​​​, ಬಿಜೆಪಿ ಸೇರುವಂತೆ ಆಮಿಷ ಒಡ್ಡಿದ್ದರು.ಅವರ ಆಮಿಷಕ್ಕೆ ನಾನು ಒಳಗಾಗಿಲ್ಲ. ಬಿಜೆಪಿ ಸೇರಲ್ಲ ಅಂತ ನಾನು ಅವರಿಗೆ ಬೈದಿದ್ದೇನೆ ಎಂದು ಹೇಳಿದ್ದಾರೆ. ಚುನಾವಣೆಗೆ ಮುನ್ನವೇ ನನಗೆ ಒತ್ತಾಯಿಸಿದ್ದರು.ಸಚಿವ ಸ್ಥಾನ ಕೊಡುವುದಾಗಿ ಆಮಿಷ ಒಡ್ಡಿದ್ದರು. ಆಗ ಬೈದಿದ್ದಕ್ಕೆ ಈಗ ಯೋಗಿಶ್ವರ ನನ್ನನ್ನ ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿಯವರು ಸರ್ಕಾರ ಅತಂತ್ರಗೊಳಿಸುವ ಕೆಲಸ ಮಾಡಬಾರದು. ಬಿಜೆಪಿಯಿಂದ ನಮಗೆ ಯಾವುದೇ ಭಯವಿಲ್ಲ.ಜಾರಕಿಹೊಳಿ ಸಹೋದರರು ಪಕ್ಷ ಬಿಟ್ಟು ಹೋಗಲ್ಲ. ಗೊಂದಲ ಸೃಷ್ಠಿಯಲ್ಲಿ ಸಿದ್ದರಾಮಯ್ಯನವರ ಪಾತ್ರವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಹಿಂದೆ ತುರುವೆಕೆರೆ ಶಾಸಕರಾಗಿದ್ದ ಜಗ್ಗೇಶ್ ರಾಜಕೀಯ ಭವಿಷ್ಯ ಹಾಳಾಗಿದೆ.ಅದಕ್ಕೆ  ಆಪರೇಷನ್ ಕಮಲವೇ ಕಾರಣ ಎಂದು ದೂರಿದ್ದಾರೆ.

Please follow and like us:
0
http://bp9news.com/wp-content/uploads/2018/09/141520.jpghttp://bp9news.com/wp-content/uploads/2018/09/141520-150x150.jpgBP9 Bureauಪ್ರಮುಖರಾಜಕೀಯರಾಯಚೂರುರಾಯಚೂರು: ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಪುಟ್ಟರಂಗಶೆಟ್ಟಿ ರಾಯಚೂರಿನಲ್ಲಿ  ಒಂದು ಬಾಂಬ್​​ ಸಿಡಿಸಿದ್ದಾರೆ. ಸಿ.ಪಿ.ಯೋಗಿಶ್ವರ್​​​​​​​​​, ಬಿಜೆಪಿ ಸೇರುವಂತೆ ಆಮಿಷ ಒಡ್ಡಿದ್ದರು.ಅವರ ಆಮಿಷಕ್ಕೆ ನಾನು ಒಳಗಾಗಿಲ್ಲ. ಬಿಜೆಪಿ ಸೇರಲ್ಲ ಅಂತ ನಾನು ಅವರಿಗೆ ಬೈದಿದ್ದೇನೆ ಎಂದು ಹೇಳಿದ್ದಾರೆ. ಚುನಾವಣೆಗೆ ಮುನ್ನವೇ ನನಗೆ ಒತ್ತಾಯಿಸಿದ್ದರು.ಸಚಿವ ಸ್ಥಾನ ಕೊಡುವುದಾಗಿ ಆಮಿಷ ಒಡ್ಡಿದ್ದರು. ಆಗ ಬೈದಿದ್ದಕ್ಕೆ ಈಗ ಯೋಗಿಶ್ವರ ನನ್ನನ್ನ ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ. var domain = (window.location != window.parent.location)? document.referrer :...Kannada News Portal