ಬೆಂಗಳೂರು : ನಿನಾಸಂ ಸತೀಶ್​ ನಾಯಕನಾಗಿ ನಟಿಸಿರುವ ಅಯೋಗ್ಯ ಸಿನಿಮಾಗೆ ಕಂಟಕವೊಂದು ಎದುರಾಗಿದೆ. ಇನ್ನೇನು ತೆರೆಗೆ ಬರಲು ಸಿದ್ಧವಾಗಿರೋ ಅಯೋಗ್ಯ ಸಿನಿಮಾದ  ಟ್ಯಾಗ್​ಲೈನ್​ ವಿರುದ್ಧ   ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ಯಾಗ್​ಲೈನ್​  ಮೂಲಕವೇ  ಹೆಚ್ಚು ಸುದ್ದಿಯಾಗಿದ್ದ ಸಿನಿಮಾ  ಸದ್ಯಇಕ್ಕಟ್ಟಿಗೆ ಸಿಲುಕಿದೆ.

ಅಸಲಿಗೆ ಅಯೋಗ್ಯ ಸಿನಿಮಾದ ಟ್ಯಾಗ್​ಲೈನ್​  ಗ್ರಾಮ ಪಂಚಾಯಿತಿ ಸದಸ್ಯ ಎಂಬುದಾಗಿತ್ತು. ಇದನ್ನು  ತೆಗೆದುಹಾಕುವ ನಿರ್ಧಾರ ಮಾಡಿದ್ದಾರೆ ಸಿನಿಮಾ ತಂಡ.  ಗ್ರಾಮ ಪಂಚಾಯಿತಿ ಸದಸ್ಯರು  ಸಿನಿಮಾ ನಿರ್ಮಾಪಕರ ಮತ್ತು  ಚಲನಚಿತ್ರ  ಮಂಡಳಿಯ ವಿರುದ್ಧ  ಪ್ರತಿಭಟನೆ ನಡೆಸಿ ಟ್ಯಾಗ್​ ಲೈನ್​ ತೆಗೆದು ಹಾಕುವಂತೆ ಆಗ್ರಹಿಸಿದ್ದರು.

 ಈ ಹಿಂದೆಯೇ ಟ್ಯಾಗ್ ಲೈನ್ ಬದಲಾವಣೆ ಮಾಡಬೇಕು ಎನ್ನುವ ಒತ್ತಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿತ್ತು. ಇದೆ ವಿಚಾರವಾಗಿ ಭಾನುವಾರ ಗ್ರಾಮಪಂಚಾಯಿತಿ ಸದಸ್ಯರಾದ ರೇವತಿ, ಲಕ್ಷ್ಮಿ ಗೌಡ ಎನ್ನುವವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.

ಈ ಕುರಿತು ಸೋಮವಾರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರಾದ ಚಿನ್ನೇಗೌಡ್ರು ಹಾಗೂ ಕರಿಸುಬ್ಬು ಚರ್ಚೆ ಮಾಡಿ ನಂತರ ಸಿನಿಮಾ ಕಲಾವಿದರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಜೊತೆಯಲ್ಲೂ ಮಾತನಾಡಿ ಟ್ಯಾಗ್ ಲೈನ್ ತೆಗೆಯುವಂತೆ ನಿರ್ಧಾರ ಮಾಡಿದ್ದಾರೆ.

ಇಂದಿನಿಂದ ಕೇವಲ ‘ಅಯೋಗ್ಯ’ ಅನ್ನೋ ಟೈಟಲ್ ಮಾತ್ರ ಎಲ್ಲೆಡೆ ಬಳಸಿಕೊಳ್ಳಲು ಚಿತ್ರತಂಡ ಸಮ್ಮತಿ ನೀಡಿದೆ. ಶೀರ್ಷಿಕೆ ಅಡಿ ಇದ್ದ ಗ್ರಾಮ ಪಂಚಾಯಿತಿ ಸದಸ್ಯ ಅನ್ನೋ ಅಡಿ ಬರಹವನ್ನು ತೆಗೆದು ಹಾಕಿದ್ದಾರೆ. ರಾಜ್ಯದಲ್ಲಿರುವ ಪಂಚಾಯಿತಿ ಸದಸ್ಯರಿಗೆ ಗೌರವ ಕೊಡುವ ಉದ್ದೇಶದಿಂದ ಟೈಟಲ್ ಟ್ಯಾಗ್ ಲೈನ್ ಕೈ ಬಿಡಲು ನಿರ್ಮಾಪಕ ಟಿ ಆರ್ ಚಂದ್ರಶೇಖರ್, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಟ ಸತೀಶ್ ನಿರ್ಧಾರ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/07/untitled-07-1502076324.jpghttp://bp9news.com/wp-content/uploads/2018/07/untitled-07-1502076324-150x150.jpgBP9 Bureauಸಿನಿಮಾಬೆಂಗಳೂರು : ನಿನಾಸಂ ಸತೀಶ್​ ನಾಯಕನಾಗಿ ನಟಿಸಿರುವ ಅಯೋಗ್ಯ ಸಿನಿಮಾಗೆ ಕಂಟಕವೊಂದು ಎದುರಾಗಿದೆ. ಇನ್ನೇನು ತೆರೆಗೆ ಬರಲು ಸಿದ್ಧವಾಗಿರೋ ಅಯೋಗ್ಯ ಸಿನಿಮಾದ  ಟ್ಯಾಗ್​ಲೈನ್​ ವಿರುದ್ಧ   ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ಯಾಗ್​ಲೈನ್​  ಮೂಲಕವೇ  ಹೆಚ್ಚು ಸುದ್ದಿಯಾಗಿದ್ದ ಸಿನಿಮಾ  ಸದ್ಯಇಕ್ಕಟ್ಟಿಗೆ ಸಿಲುಕಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random()...Kannada News Portal