ಬೆಂಗಳೂರು : ತಂದೆ ಸಾವಿನ ನಡುವೆಯೂ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು ಶೇ.80 ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ತ್ಯಾಗರಾಜು ಎಂಬುವವರ ಮಗಳಾದ ದರ್ಶಿನಿ SSLC ಪರೀಕ್ಷೆಯಲ್ಲಿ 500 ಅಂಕ ಗಳಿಸಿದ್ದಾಳೆ. ಮದ್ದೂರು ತಾಲೂಕಿನ ದೇಶಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿರುವ ದರ್ಶಿನಿ, ವಿಜ್ಞಾನ ವಿಷಯದ ಪರೀಕ್ಷೆಯ ದಿನ ತಂದೆ ತ್ಯಾಗರಾಜು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೂ ಪರೀಕ್ಷೆ ಬರೆಯುವಂತೆ ಸಂಬಂಧಿಕರು ಧೈರ್ಯ ತುಂಬಿ ಪರೀಕ್ಷೆ ಬರೆಯಲು ಕಳಿಸಿದ್ದರು. ಅದೇ ದಿನ ತೀವ್ರ ಹೃದಯಾಘಾತದಿಂದ ತ್ಯಾಗರಾಜು ಮೃತಪಟ್ಟಿದ್ದರು.

ಇನ್ನು ದರ್ಶಿನಿ ಒಟ್ಟು 500 ಅಂಕ ಗಳಿಸಿದ್ದು, ಕನ್ನಡ 123, ಇಂಗ್ಲಿಷ್ 95, ಹಿಂದಿ 82, ಗಣಿತ 54, ವಿಜ್ಞಾನ 71, ಸಮಾಜ ವಿಜ್ಞಾನ 75 ಅಂಕ ಪಡೆದಿರುತ್ತಾಳೆ.

Please follow and like us:
0
http://bp9news.com/wp-content/uploads/2018/05/ಮಂಡ್ಯ.jpghttp://bp9news.com/wp-content/uploads/2018/05/ಮಂಡ್ಯ-150x150.jpgPolitical Bureauಪ್ರಮುಖಮಂಡ್ಯResult: The father's death day is a 500-point student who wrote the test !!!ಬೆಂಗಳೂರು : ತಂದೆ ಸಾವಿನ ನಡುವೆಯೂ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು ಶೇ.80 ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ತ್ಯಾಗರಾಜು ಎಂಬುವವರ ಮಗಳಾದ ದರ್ಶಿನಿ SSLC ಪರೀಕ್ಷೆಯಲ್ಲಿ 500 ಅಂಕ ಗಳಿಸಿದ್ದಾಳೆ. ಮದ್ದೂರು ತಾಲೂಕಿನ ದೇಶಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿರುವ ದರ್ಶಿನಿ, ವಿಜ್ಞಾನ ವಿಷಯದ ಪರೀಕ್ಷೆಯ ದಿನ ತಂದೆ ತ್ಯಾಗರಾಜು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೂ ಪರೀಕ್ಷೆ ಬರೆಯುವಂತೆ ಸಂಬಂಧಿಕರು ಧೈರ್ಯ...Kannada News Portal