ಬೆಂಗಳೂರು: ಕರ್ನಾಟಕ ರಾಜಕೀಯದ ಹೈಡ್ರಾಮಾ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ಈಗ ಬಿಡದಿ ಈಗಲ್ಟನ್‌ ರೆಸಾರ್ಟ್‌ನಲ್ಲಿರುವ ಕಾಂಗ್ರೆಸ್‌ ಶಾಸಕರು ಮತ್ತು ಶಾಂಗ್ರೀಲಾ ಹೋಟೆಲ್‌ನಲ್ಲಿದ್ದ ಜೆಡಿಎಸ್‌ ಶಾಸಕರು ಹೊರ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ.

ಈ ವಿಷಯವನ್ನು ಕಾಂಗ್ರೆಸ್‌ ಮುಖಂಡ ಮತ್ತು ಶಾಸಕರ ನೇತೃತ್ವ ವಹಿಸಿರುವ ಡಿಕೆ ಶಿವಕುಮಾರ್‌ ಮಾಧ್ಯಮದವರಿಗೆ ತಿಳಿಸಿದರು. ನಮಗೆ ತಮಿಳುನಾಡು, ಕೇರಳ, ಗೋವಾ, ಆಂಧ್ರದಿಂದ ಆಹ್ವಾನ ಬಂದಿದೆ.  ವಿಮಾನದಲ್ಲಿ ಸ್ಥಳಾವಕಾಶ, ಟಿಕೆಟ್‌ ಲಭ್ಯತೆ ಎಲ್ಲವನ್ನೂ ನೋಡಿಕೊಂಡು ಯಾವ ಸ್ಥಳಕ್ಕೆ ಅವಕಾಶವಿದೆಯೋ, ಆ ಸ್ಥಳಕ್ಕೆ ತೆರಳುವುದಾಗಿ ತಿಳಿಸಿದ್ರು. ವಿಶೇಷ ವಿಮಾನಕ್ಕೆ ಅರ್ಜಿ ಕೂಡ ಸಲ್ಲಿಸಿದ್ದೇವೆ. ವಿಮಾನದ ವ್ಯವಸ್ಥೆಯಾದ್ರೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಜೊತೆಯಾಗಿಯೇ ಬೇರೆ ಸ್ಥಳದಲ್ಲಿ ವಾಸ್ತವ್ಯ ಹೂಡುವುದಾಗಿ ಹೇಳಿದ್ರು.

ಯಡಿಯೂರಪ್ಪನವರಿಗೆ ಮಾನಸಿಕ ಒತ್ತಡ ಶುರುವಾಗಿದೆ. ಆ ಒತ್ತಡದಲ್ಲಿ ಅವರು ಏನೇನೋ ಹೇಳುತ್ತಿದ್ದಾರೆ. ಅತಿ ಅವಸದಲ್ಲಿದ್ದಾರೆ ಯಡಿಯೂರಪ್ಪ. ನಮಗೇನು ಅವಸರವಿಲ್ಲ ಎಂದು ಡಿಕೆ ಶಿವಕುಮಾರ  ಹೇಳಿದ್ದಾರೆ. ಅಧಿಕಾರದ ಆಸೆಯಿಂದ ಏನೆಲ್ಲಾ ಮಾಡಿದ್ದಾರೆ ಅನ್ನೋದು ನಿಮಗೇ ಗೊತ್ತಿದೆ. ನಾವು ಪೊಲೀಸ್‌ ಭದ್ರತೆಯನ್ನು ಕೇಳಿರಲಿಲ್ಲ. ಅಧಿಕಾರ ವಹಿಸಿಕೊಂಡ  ಬೆನ್ನಲ್ಲೆ ಯಡಿಯೂರಪ್ಪ ಪೊಲೀಸ್‌ ಭದ್ರತೆಯನ್ನು ತೆಗೆದುಬಿಟ್ಟಿದ್ದಾರೆ. ನಾವು ಜನಪ್ರತಿನಿಧಿಗಳು ಎಂಬುದನ್ನ ಅವರು ಮರೆಯಬಾರದು ಎಂದರು. ಅಲ್ಲದೆ, ನಮಗೇನು ಹೆದರಿಕೆ ಇಲ್ಲ ಎಂದು ಖಡಕ್ ಆಗಿಯೇ ಹೇಳಿ ಬಸ್ಸಿನತ್ತ ತೆರಳಿದ್ರು.

 

Please follow and like us:
0
http://bp9news.com/wp-content/uploads/2018/05/b787dreamliner-AI.jpghttp://bp9news.com/wp-content/uploads/2018/05/b787dreamliner-AI-150x150.jpgBP9 Bureauಪ್ರಮುಖಬೆಂಗಳೂರು: ಕರ್ನಾಟಕ ರಾಜಕೀಯದ ಹೈಡ್ರಾಮಾ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ಈಗ ಬಿಡದಿ ಈಗಲ್ಟನ್‌ ರೆಸಾರ್ಟ್‌ನಲ್ಲಿರುವ ಕಾಂಗ್ರೆಸ್‌ ಶಾಸಕರು ಮತ್ತು ಶಾಂಗ್ರೀಲಾ ಹೋಟೆಲ್‌ನಲ್ಲಿದ್ದ ಜೆಡಿಎಸ್‌ ಶಾಸಕರು ಹೊರ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ. ಈ ವಿಷಯವನ್ನು ಕಾಂಗ್ರೆಸ್‌ ಮುಖಂಡ ಮತ್ತು ಶಾಸಕರ ನೇತೃತ್ವ ವಹಿಸಿರುವ ಡಿಕೆ ಶಿವಕುಮಾರ್‌ ಮಾಧ್ಯಮದವರಿಗೆ ತಿಳಿಸಿದರು. ನಮಗೆ ತಮಿಳುನಾಡು, ಕೇರಳ, ಗೋವಾ, ಆಂಧ್ರದಿಂದ ಆಹ್ವಾನ ಬಂದಿದೆ.  ವಿಮಾನದಲ್ಲಿ ಸ್ಥಳಾವಕಾಶ, ಟಿಕೆಟ್‌ ಲಭ್ಯತೆ ಎಲ್ಲವನ್ನೂ ನೋಡಿಕೊಂಡು ಯಾವ ಸ್ಥಳಕ್ಕೆ...Kannada News Portal