ನಾಗಪುರ:  ಗೋವಿಜ್ಞಾನ ಅನುಸಂಧಾನ ಕೇಂದ್ರದಲ್ಲಿ ಎರಡು ದಿನಗಳ ರಾಷ್ಟ್ರೀಯ ಚಿಂತನಾ ಬೈಠಕ್ ಇಂದು ಹಾಗೂ ನಾಳೆ ( ಏ. 8-9) ನಡೆಯುತ್ತಿದ್ದು,  ರಾಷ್ಟ್ರೀಯ ಚಿಂತನಾ ಬೈಠಕ್’ಅನ್ನು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿದರು.

ರಾಷ್ಟ್ರೀಯ ಚಿಂತನಾ ಬೈಠಕ್’ನಲ್ಲಿ ಮೊದಲದಿನವಾದ ಇಂದು; ಪಂಚಗವ್ಯದ ಸಂಗ್ರಹದ ಸಮಯ, ತಯಾರಿ ವಿಧಾನ ಹಾಗೂ ಬಳಸುವ ವಿಧಾನಗಳ ಕುರಿತಾಗಿ ಸವಿಸ್ತಾರವಾದ ಚರ್ಚೆಯ ಜೊತೆಗೆ, ಪಂಚಗವ್ಯದ ಉಪಯೋಗಗಳು – ಔಷಧಿ ತಯಾರಿ – ಚಿಕಿತ್ಸೆ – ಸಂಶೋಧನೆ ಹಾಗೂ ಗ್ರಾಮೋದ್ಯೋಗ ಮುಂತಾದ ಗೋಸಂಬಂಧಿ ವಿಷಯಗಳ ಚಿಂತನ-ಮಂಥನ ನಡೆಯಿತು.

ರಾಷ್ಟ್ರೀಯ ಗೋಆಯೋಗದ ಸದಸ್ಯರು ಹಾಗೂ ಗೋವಿಜ್ಞಾನ ಅನುಸಂಧಾನ ಕೇಂದ್ರದ ಕಾರ್ಯದರ್ಶಿಗಳಾದ ಸುನಿಲ್ ಮಾನ್’ಸಿಂಗ್ ಕಾ, NEERI ನ ಮಾಜಿ ಮುಖ್ಯಸ್ಥರಾದ ಡಾ. ತಪನ್ ಚಕ್ರವರ್ತಿ( ಗೋಮೂತ್ರದ ಕುರಿತಾಗಿ ಮೊದಲ ಪೇಟೆಂಟ್ ಪಡೆದವರು), ಮಧ್ಯಪ್ರದೇಶದ ಮಾಜಿ ಗೋಸೇವಾ ಅಧ್ಯಕ್ಷರಾದ ಮೇಘರಾಜ್ ಜೈನ್, ಮಹಾರಾಷ್ಟ್ರದ ಮಾಜಿ ನ್ಯಾಯಾಧೀಶರಾದ ಅಂಬಾದಸ್ ಜೋಶಿ  ಹಾಗೂ NEERI ನ ಮಾಜಿ ನಿರ್ದೇಶಕರಾದ ಡಾ. ನಾನೋಟಿ ಸೇರಿದಂತೆ ಅನೇಕ ಪರಿಣಿತರು ಮತ್ತು ಮಧ್ಯಪ್ರದೇಶ – ಗುಜರಾತ್ – ಹರ್ಯಾಣ – ಛತ್ತೀಸ್ಗಡ- ಆಂಧ್ರಪ್ರದೇಶ – ತಮಿಳುನಾಡು – ಮಹಾರಾಷ್ಟ್ರ- ಒಡಿಸ್ಸಾ ಹಾಗೂ ದೆಹಲಿ ರಾಜ್ಯಗಳ ಗೋಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗೋಸಂಬಂಧಿ ಚಟುವಟಿಕೆಗಳಿಗಾಗಿ ರಾಷ್ಟ್ರಮಟ್ಟದ ಸಂಯೋಜನಾ ಸಮಿತಿಯನ್ನು  ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ರಚಿಸಲು  ಚಿಂತನಾ ಬೈಠಕ್ನಲ್ಲಿ ತೀರ್ಮಾನಿಸಲಾಯಿತು.

 

Please follow and like us:
0
http://bp9news.com/wp-content/uploads/2018/04/collage-5-4.jpghttp://bp9news.com/wp-content/uploads/2018/04/collage-5-4-150x150.jpgBP9 Bureauಬೆಂಗಳೂರುರಾಷ್ಟ್ರೀಯಶ್ರೀ ರಾಮಚಂದ್ರಾಪುರ ಮಠನಾಗಪುರ:  ಗೋವಿಜ್ಞಾನ ಅನುಸಂಧಾನ ಕೇಂದ್ರದಲ್ಲಿ ಎರಡು ದಿನಗಳ ರಾಷ್ಟ್ರೀಯ ಚಿಂತನಾ ಬೈಠಕ್ ಇಂದು ಹಾಗೂ ನಾಳೆ ( ಏ. 8-9) ನಡೆಯುತ್ತಿದ್ದು,  ರಾಷ್ಟ್ರೀಯ ಚಿಂತನಾ ಬೈಠಕ್'ಅನ್ನು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿದರು. ರಾಷ್ಟ್ರೀಯ ಚಿಂತನಾ ಬೈಠಕ್'ನಲ್ಲಿ ಮೊದಲದಿನವಾದ ಇಂದು; ಪಂಚಗವ್ಯದ ಸಂಗ್ರಹದ ಸಮಯ, ತಯಾರಿ ವಿಧಾನ ಹಾಗೂ ಬಳಸುವ ವಿಧಾನಗಳ ಕುರಿತಾಗಿ ಸವಿಸ್ತಾರವಾದ ಚರ್ಚೆಯ ಜೊತೆಗೆ, ಪಂಚಗವ್ಯದ ಉಪಯೋಗಗಳು - ಔಷಧಿ ತಯಾರಿ - ಚಿಕಿತ್ಸೆ - ಸಂಶೋಧನೆ ಹಾಗೂ ಗ್ರಾಮೋದ್ಯೋಗ ಮುಂತಾದ ಗೋಸಂಬಂಧಿ...Kannada News Portal