ಬೆಂಗಳೂರು : ಬೆಂಗಳೂರಿನ ಅಖಿಲ ಹವ್ಯಕ ಮಹಾಸಭೆಯ 75ನೇ ವರ್ಷದ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಹವ್ಯಕ ವಿಭೂಷಣ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಂಜುನಾಥ ಭಾಗವತರು, ಪ್ರಶಸ್ತಿ ಬಂದಾಗ ಹಮ್ಮು ಪಡಬಾರದು, ಎಂದೆಂದಿಗೂ ಕೊಡುವ ಕೈ ತೆಗೆದುಕೊಳ್ಳುವ ಕೈಗಿಂತಲೂ ಮೇಲಿರುತ್ತದೆ. 75 ವರ್ಷಗಳ ಹಿಂದೆ ಸಂಸ್ಥಾಪಿತವಾದ ಹವ್ಯಕ ಮಹಾಸಭೆಯಿಂದ ಈ ಗೌರವ ಸಿಕ್ಕಿರುವುದು ಸಂತಸದ ವಿಚಾರ. ನಾನು ಬಾಲ್ಯದಿಂದಲೂ ಹವ್ಯಕರ ಆಶ್ರಯದಲ್ಲಿ ಬೆಳೆದವನು, ಕಳೆದ ೭-೮ ವರ್ಷಗಳ ವರೆಗೂ ನನಗೆ ಯಾವುದೇ ನೆಲೆ ಇರಲಿಲ್ಲ. ಹವ್ಯಕರ ಮನೆಗಳಲ್ಲೇ ಇದ್ದುಕೊಂಡು ಯಕ್ಷಕಲೆಯಲ್ಲಿ ತೊಡಗಿಸಿಕೊಂಡವನು ಎಂದು ತಮ್ಮ ಬಾಲ್ಯ ಹಾಗೂ ಯಕ್ಷಗಾನದೊಂದಿಗೆ ತಮ್ಮ ಒಡನಾಟವನ್ನು ಸ್ಮರಿಸಿದರು‌.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಇಂಡಗುಂಜಿ ಕ್ಷೇತ್ರದ ಧರ್ಮದರ್ಶಿಗಳಾದ ಜಿ ಜಿ ಸಭಾಹಿತ್ ಅವರು ಮಾತನಾಡಿ, 75 ವರ್ಷಗಳ ಹಿಂದೆ ಸಮಾಜದ ಸಂಘಟನೆಯನ್ನು ಹುಟ್ಟುಹಾಕಿದ ಎಲ್ಲಾ ಮಹನೀಯರನ್ನು ನಾವಿಂದು ಸ್ಮರಿಸಲೇಬೇಕು.75 ವರ್ಷಗಳ ಹಿಂದಿನ ನಮ್ಮ ಸಮಾಜದ ಸ್ಥಿತಿಗತಿ, ಸಾಮಾಜಿಕ ಪರಿಸ್ಥಿತಿಯನ್ನು ನಾವು ಅವಲೋಕನ ಮಾಡಿಕೊಳ್ಳಬೇಕಿದ್ದು, ಇತಿಹಾಸದಿಂದ ಪಾಠಕಲಿಯಬೇಕು ಎಂದು ಅಭಿಪ್ರಾಯಪಟ್ಟರು.

ನಿವೃತ್ತ IPS ಪೋಲಿಸ್ ಅಧಿಕಾರಿ ಟಿ ಜಿ ಕೃಷ್ಣಭಟ್ ವಿಶೇಷ ಆಹ್ವಾನಿತರಾಗಿ ಮಾತನಾಡಿ, ಇಂದು ಪುರಸ್ಕಾರಕ್ಕೆ ಭಾಜನರಾದವರ ಜೀವನವನ್ನು ಗಮನಿಸಿದರೆ ಅವರ ಪರಿಶ್ರಮ – ಪ್ರತಿಭೆಗಳನ್ನು ನಾವು ಕಾಣಬಹುದಾಗಿದೆ. ಹಾಗೆಯೇ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಇಂದು ಪಲ್ಲವ ಪ್ರಶಸ್ತಿ ಪಡೆದಿದ್ದು,   ಮೀಸಲಾತಿ ಹಾಗೂ ಆಡಳಿತಶಾಹಿ ವ್ಯವಸ್ಥೆಯಲ್ಲಿ ನಾವು ಯಶಸ್ಸನ್ನು ಸಾಧಿಸಲು ಅಡೆತಡೆಯಾಗುತ್ತದೆ. ಆದರೆ ನಮ್ಮ ಸಾಮರ್ಥ್ಯದಿಂದ ನಾವು ಸಾಧನೆ ಮಾಡಬಹುದಾಗಿದೆ. ಕೇವಲ ಇಂಜನಿಯರಿಂಗ್ – ಮೆಡಿಕಲ್ ಹೊರತಾಗಿ IAS IPS ನಂತಹವುಗಳ ಕುರಿತು ನಾವು ಚಿಂತಿಸಬೇಕಿದ್ದು, ಸಮಾಜಕ್ಕೆ ಸೇವೆಸಲ್ಲಿಸಯವ ಅವಕಾಶವನ್ನು ಪಡೆಯಬಹುದಾಗಿದೆ ಎಂದು ಕಿವಿಮಾತು ಹೇಳಿದರು.

ಇದೇ ಸಂಧರ್ಭದಲ್ಲಿ “ಅಡಿಕೆ ಸಂಸ್ಕೃತಿ” ಪುಸ್ತಕ ಲೋಕಾರ್ಪಣೆ ಮಾಡಲಾಯಿತು, ಪುಸ್ತಕದ ಕುರಿತು ಮಾತನಾಡಿದ ಕೃಷಿ ತಜ್ಞ ಎಂ ಆರ್ ಹೆಗಡೆ, ಅಡಿಕೆ ಶ್ರೇಷ್ಠ ಬೆಳೆಯಾಗಿದ್ದು, ಸುಮಾರು ಎಂಟು ಸಾವಿರ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಕೊಳೆ ರೋಗದ ಹೊರತಾಗಿ ಬೇರೆ ವಿಶೇಷವಾದ ಸಮಸ್ಯೆ ಅಡಿಕೆಗೆ ಇಲ್ಲ. ವೈಜ್ಞಾನಿಕತೆಯನ್ನು ಅಳವಡಿಸಿಕೊಂಡು ಕೃಷಿಕರು ಲಾಭ ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ, ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ, ಮಕ್ಕಳು ಬೆಳದು ದೊಡ್ಡವರಾಗಿ, ಸಾಧಿಸಿದಾಗ ಆಗುವ ಆನಂದ ಈ ಸಾಧಕರಿಗೆ ಗೌರವ ಸಲ್ಲಿಸುವಾಗ ಹವ್ಯಕ ಮಹಾಸಭೆಗೆ ಆಗುತ್ತಿದೆ. ಇಷ್ಟಾರು ಸಾಧಕರು ನಮ್ಮ ಸಮಾಜದಲ್ಲಿ ಇರುವುದು ಸಮಾಜಕ್ಕೆ ಹೆಮ್ಮೆಯ ಸಂಗತಿ.ಹವ್ಯಕರ ಮನೆಮನೆಯಲ್ಲಿ ಸಾಧಕರಿದ್ದು, ಪ್ರತಿ ಮನೆಮನೆಗೆ ಪ್ರಶಸ್ತಿ ಕೊಡಬೇಕಾಗುತ್ತದೆ. ಆದರೆ ಅಂತಹ ಸಾಧಕರಲ್ಲಿಯೂ ಶ್ರೇಷ್ಠ ರತ್ನಗಳನ್ನು ಆರಿಸಿ ಇಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.

ಬ್ರಾಹ್ಮಣ ಮಹಾಸಭೆ ರೂಪಿತವಾಗುವ ದಶಕಗಳ ಮೊದಲೇ ಹವ್ಯಕ ಸಮಾಜ ಸಂಘಟಿತವಾಗಿತ್ತು ಎನ್ನಲು ಹೆಮ್ಮ ಆಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ 75 ವರ್ಷಗಳ ಹಿಂದೆ ಸಮಾಜದ ಸಂಘಟನೆಯನ್ನು ಹುಟ್ಟುಹಾಕಿದ ಎಲ್ಲಾ ಮಹನೀಯರನ್ನು ನಾವಿಂದು ಸ್ಮರಿಸಲೇಬೇಕು.

ಅಡಿಕೆ ಕೃಷಿಗೂ ಹವ್ಯಕ ಸಮಾಜಕ್ಕೂ ಅವಿನಾಭಾವ ಸಂಬಂಧವಿದ್ದು, ಅಡಿಕೆ ಕ್ಯಾನ್ಸರ್ ಕಾರಕ ಎಂಬ ಗುಲ್ಲೆಬ್ಬಿಸುತ್ತಿರುವುದು ಖಂಡನೀಯ. ಸರಿಯಾದ ಸಂಶೋಧನೆಯ ಮೂಲಕ ಅಡಿಕೆ ಹಾನಿಕಾರಕವಲ್ಲ ಎಂದು ಸರ್ಕಾರ ದೃಢೀಕರಿಸಬೇಕು. ಇಲ್ಲವಾದರೆ ಮಹಾಸಭೆಯೇ ಸಂಶೋಧನೆ ಮಾಡಿ ಅಡಕೆಯ ಗುಣಗಳನ್ನು ಜಗತ್ತಿನ ಮುಂದೆ ಇಡಲು ಹಿಂಜರಿಯುವುದಿಲ್ಲ ಎಂದು ತಿಳಿಸಿದರು.

ಇದಕ್ಕು ಮೊದಲು, ಹವ್ಯಕ ವಿಶೇಷ ಪ್ರಶಸ್ತಿಯಾದ ಹವ್ಯಕ ವಿಭೂಷಣ ಹೊಸ್ತೋಟ ಮಂಜುನಾಥ ಭಾಗವತರು, *ಹವ್ಯಕ ಭೂಷಣ* ಡಾ. ಬಿ.ಜಿ. ಗೋಪಿನಾಥ್, ವೇ|ಮೂ| ಶಂಕರನಾರಾಯಣ ಘನಪಾಠಿಗಳು, ಶ್ಯಾಮಸುಂದರ ಬಡಕ್ಕಿಲ. *ಹವ್ಯಕ ಶ್ರೀ* ನರಹರಿ ದೀಕ್ಷಿತ್, ವಿದುಷಿ ಅರುಣಾಕುಮಾರಿ, ನಾಗರಾಜ ಹೆಗಡೆ ಇವರಿಗೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ನರಹರಿ ದೀಕ್ಷಿತ್ ಹಾಗೂ ತಂಡದವರ ಸಂಗೀತ ಸಭಾಸದರನ್ನು ರಂಜಿಸಿತು. ಈ ಸಂಗೀತ ಕಾರ್ಯಕ್ರಮಕ್ಕೆ ಹವ್ಯಕ ಶ್ರೀ ಪುರಸ್ಕೃತ ಅಂಧಕಲಾವಿಧೆ ಅರುಣಾಕುಮಾರಿ ವೀಣೆಯಲ್ಲಿ ಸಾಥ್ ನೀಡಿದ್ದು ವಿಶೇಷವಾಗಿತ್ತು.

ಮಹಾಸಭೆಯ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಮುಗಲೋಡಿ ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ರಾಘವೇಂದ್ರ ಹೆಗಡೆ ಕಡ್ನಮನೆ ಕಾರ್ಯಕ್ರಮವನ್ನು ಚಂದಗಾಣಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.  ಪ್ರಧಾನ ಕಾರ್ಯದರ್ಸಿಗಳಾದ ಸಿಎ. ವೇಣುವಿಘ್ನೇಶ ಸಂಪ, ಉಪಾಧ್ಯಕ್ಷರಾದ ಆರ್.ಎಂ. ಹೆಗಡೆ ಬಾಳೇಸರ, ಕಾರ್ತದರ್ಶಿಗಳಾದ ಪ್ರಶಾಂತಕುಮಾರ ಭಟ್ ಮಲವಳ್ಳಿ ಮತ್ತು ಶ್ರೀಧರ ಭಟ್ ಸಾಲೇಕೊಪ್ಪ, ಕೋಶಾಧಿಕಾರಿಯಾದ ಕೃಷ್ಣಮೂರ್ತಿ ಭಟ್ ಯಲಹಂಕ ಮತ್ತು ಮಹಾಸಭೆಯ ನಿರ್ದೇಶಕರು, ಸಂಚಾಲಕರು, ಸಿಬ್ಬಂದಿಗಳು, ಹಲವಾರು ಗಣ್ಯರು, ನೂರಾರು ಸಭಿಕರು  ಉಪಸ್ಥಿತರಿದ್ದರು.

 

Please follow and like us:
0
http://bp9news.com/wp-content/uploads/2018/04/ATK_3009.jpghttp://bp9news.com/wp-content/uploads/2018/04/ATK_3009-150x150.jpgBP9 Bureauಬೆಂಗಳೂರುಶ್ರೀ ರಾಮಚಂದ್ರಾಪುರ ಮಠಬೆಂಗಳೂರು : ಬೆಂಗಳೂರಿನ ಅಖಿಲ ಹವ್ಯಕ ಮಹಾಸಭೆಯ 75ನೇ ವರ್ಷದ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ಹವ್ಯಕ ವಿಭೂಷಣ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಂಜುನಾಥ ಭಾಗವತರು, ಪ್ರಶಸ್ತಿ ಬಂದಾಗ ಹಮ್ಮು ಪಡಬಾರದು, ಎಂದೆಂದಿಗೂ ಕೊಡುವ ಕೈ ತೆಗೆದುಕೊಳ್ಳುವ ಕೈಗಿಂತಲೂ ಮೇಲಿರುತ್ತದೆ. 75 ವರ್ಷಗಳ ಹಿಂದೆ ಸಂಸ್ಥಾಪಿತವಾದ ಹವ್ಯಕ ಮಹಾಸಭೆಯಿಂದ ಈ ಗೌರವ ಸಿಕ್ಕಿರುವುದು ಸಂತಸದ ವಿಚಾರ. ನಾನು ಬಾಲ್ಯದಿಂದಲೂ ಹವ್ಯಕರ ಆಶ್ರಯದಲ್ಲಿ ಬೆಳೆದವನು, ಕಳೆದ...Kannada News Portal