ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಶ್ರೀರಾಮದೇವ ಭಾನ್ಕುಳಿ ಮಠದ ಪರಿಸರದಲ್ಲಿ ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ, ಭೂಸ್ವರ್ಗದಲ್ಲಿ “ಗೋಸ್ವರ್ಗ”ದ ಬಗ್ಗೆ  ಶ್ರೀರಾಮಚಂದ್ರಾಪುರಮಠದ ಶಾಖಾಮಠ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಗದ್ಗುರು ಶಂಕರಾಚಾರ್ಯ  ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಮಾಹಿತಿ ನೀಡಿದರು.

ಗೋಸ್ವರ್ಗ ನಿರ್ಮಾಣ ಭರದಿಂದ ನಡೆಯುತ್ತಿದ್ದು, ಮೇ 2ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.  ಮೇ 27ರಂದು ಸಾರ್ವಜನಿಕ ಲೋಕಾರ್ಪಣಾ ಕಾರ್ಯಕ್ರಮ ಜರುಗಲಿದೆ.  ಸುಮಾರು 100 ಎಕರೆ ಸ್ಥಳದಲ್ಲಿ 1.5 ಲಕ್ಷ ಚದರ ಅಡಿ ಸ್ಥಳದಲ್ಲಿ ಗೋಸ್ವರ್ಗ ಸ್ಥಾಪನೆಯಾಗಲಿದ್ದು, ಗೋವುಗಳು ಸ್ವತಂತ್ರವಾಗಿ ಅವುಗಳ ಇಚ್ಛೆಯಂತೆ ಬದುಕಲು ವ್ಯವಸ್ಥೆ ಇರಲಿದೆ. ಎಂದು ಅವರು ವಿವರಿಸಿದರು.

ದೇಶದಲ್ಲೇ ಮೊದಲ ಬಾರಿಗೆ ವಿನೂತನ ಕಲ್ಪನೆಯ ಗೋಧಾಮ ನಿರ್ಮಾಣವಾಗಲಿರುವ ಗೋಸ್ವರ್ಗ ಸಂಪೂರ್ಣ ಗೋಸೌಖ್ಯ ಕೇಂದ್ರವಾಗಲಿದೆ. ಗೋವಿಗೇನು ಬೇಕು ಅದನ್ನು ಗೋವು ಬೇಕಾದಾಗ ಪಡೆಯುವ ವ್ಯವಸ್ಥೆ ಗೋಸ್ವರ್ಗದಲ್ಲಿರಲಿದೆ. ಗೋಸ್ವರ್ಗದಲ್ಲಿ ‘ಗೋತೀರ್ಥ’ ಸರೋವರ, ಸರೋವರದ ಮಧ್ಯೆ ಶಿಲಾಮಂಟಪದಲ್ಲಿ ಜಲರೂಪದಲ್ಲಿ ‘ಸಪ್ತಸನ್ನಿಧಿ’, ಸರೋವರದ ಸುತ್ತಲೂ ನಾಲ್ಕು ‘ಗೋಪದ’ ವೇದಿಕೆಗಳು, ಗೋವುಗಳ ವಿಶ್ರಾಂತಿಗಾಗಿ ‘ಗೋವಿರಾಮ’, ವಿಹರಿಸಲು ‘ಗೋವಿಹಾರ’, ಸದಾಕಾಲ ಮೇವು ಲಭ್ಯವಿರುವ ‘ಸಾದಾತೃಪ್ತಿ’, ಜಲಪಾನಕ್ಕಾಗಿ ‘ ಸುಧಾಸಲಿಲ’, ತೀರ್ಥಪಥ, ಪ್ರೇಕ್ಷಾಪಥ, ರಥಪಥ, ತೀರ್ಥಸ್ನಾನಕ್ಕಾಗಿ ‘ಗೋಗಂಗಾ’ ಸ್ನಾನಘಟ್ಟ, ಗೋಪಲಕರ ವಸತಿಗಾಗಿ ಗೋಪಾಲಭವನ, ಪಶ್ಚಿಮ ಅಂಚಿನಲ್ಲಿ ‘ಗೋಧಾರಾ’ ತೊರೆ, ತೊರೆಯ ತೀರದಲ್ಲಿ ‘ಗೋವರ್ಧನಗಿರಿ’, ಗಿರಿಯಲ್ಲಿ ‘ಗೋನಂದನ’ ಉದ್ಯಾನ, ಗಿರಿಯ ನೆತ್ತಿಯಲ್ಲಿ ‘ವೀಕ್ಷಾಗೋಪುರ’, ಹಸಿ ಮೇವಿಗಾಗಿ ಮೇವು ಬೆಳೆತುವ ‘ಸುಗ್ರಾಸ’ ಯೋಜನೆ ಇರಲಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಗೋಸ್ವರ್ಗ ಮಾಹಿತಿಪತ್ರಕವನ್ನು ಬಿಡುಗಡೆಗೊಳಿಸಿದರು. ಎಪ್ರಿಲ್ 30ರಂದು ಹೊಸನಗರದ ರಾಮಚಂದ್ರಪುರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ವಿಶಿಷ್ಟ ಗಜಪೃಷ್ಠಾಕೃತಿಯ ಚಂದ್ರಮೌಳೀಶ್ವರ ದೇವರ  ಹಾಗೂ ಕೆಕ್ಕಾರಿನ ಶಾಖಾಮಠದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಜರಾಜೇಶ್ವರಿ ದೇವರ  ಅಷ್ಟಬಂಧ ಪ್ರತಿಷ್ಠಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಮದುಘಾ ಟ್ರಸ್ಟ್ ನ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ, ಗೋಫಲ ಟ್ರಸ್ಟ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಷಾ ಎಸ್ ಭಟ್, ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಾಧ್ಯಮ ಕಾರ್ಯದರ್ಶಿ ರಾಮಚಂದ್ರ ಅಜ್ಜಕಾನ, ಗ್ರಾಮರಾಜ್ಯ ಕಾರ್ಯದರ್ಶಿ ಕೃಷ್ಣಪ್ರಸಾದ್ ಅಮ್ಮಂಕಲ್ಲು, ಶ್ರೀನಿರ್ದೇಶ ಕಾರ್ಯದರ್ಶಿ ಗಣೇಶ್ ಜೆಡ್ಡಿನಮನೆ ಉಪಸ್ಥಿತರಿದ್ದರು.

ಗೋಸ್ವರ್ಗ ಮಾಹಿತಿಪತ್ರಕ PDF ಇಲ್ಲಿದೆ..

GouSwarga-Brochure

Please follow and like us:
0
http://bp9news.com/wp-content/uploads/2018/04/collage-2-10.jpghttp://bp9news.com/wp-content/uploads/2018/04/collage-2-10-150x150.jpgBP9 Bureauಉತ್ತರ ಕನ್ನಡಪ್ರಮುಖಬೆಂಗಳೂರುಶ್ರೀ ರಾಮಚಂದ್ರಾಪುರ ಮಠಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಶ್ರೀರಾಮದೇವ ಭಾನ್ಕುಳಿ ಮಠದ ಪರಿಸರದಲ್ಲಿ ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ, ಭೂಸ್ವರ್ಗದಲ್ಲಿ 'ಗೋಸ್ವರ್ಗ'ದ ಬಗ್ಗೆ  ಶ್ರೀರಾಮಚಂದ್ರಾಪುರಮಠದ ಶಾಖಾಮಠ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಗದ್ಗುರು ಶಂಕರಾಚಾರ್ಯ  ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಮಾಹಿತಿ ನೀಡಿದರು. ಗೋಸ್ವರ್ಗ ನಿರ್ಮಾಣ ಭರದಿಂದ ನಡೆಯುತ್ತಿದ್ದು, ಮೇ 2ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.  ಮೇ 27ರಂದು ಸಾರ್ವಜನಿಕ ಲೋಕಾರ್ಪಣಾ ಕಾರ್ಯಕ್ರಮ ಜರುಗಲಿದೆ.  ಸುಮಾರು 100 ಎಕರೆ ಸ್ಥಳದಲ್ಲಿ 1.5 ಲಕ್ಷ ಚದರ...Kannada News Portal