ಬೆಂಗಳೂರು:  ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀಅಖಿಲ ಹವ್ಯಕ ಮಹಾಸಭೆ 75ನೇ ವರ್ಷದ ಸಂಸ್ಥಾಪನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ದಿನಾಂಕ 15/04/2018 ಭಾನುವಾರ ಸಂಜೆ ೪.೦೦ ಗಂಟೆಗೆ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಸಂಸ್ಥಾಪನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವಾರ್ಷಿಕ ವಿಶೇಷ ಹವ್ಯಕ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಹವ್ಯಕ ವಿಶೇಷ ಪ್ರಶಸ್ತಿ – 2018ರ ಭಾಜನರು:

ಹವ್ಯಕ ವಿಭೂಷಣ;

೧. ಶ್ರೀ ಹೊಸ್ತೋಟ ಮಂಜುನಾಥ ಭಾಗವತ – ಯಕ್ಷಗಾನಕ್ಷೇತ್ರದ ಅಸಾಧಾರಣ ಸಾಧಕರು.

ಮೂಲತಃ ಉತ್ತರಕನ್ನಡದ ಸಿರಸಿ ತಾಲ್ಲೂಕಿನ ಹೊಸ್ತೋಟದವರಾದ ಇವರು ಯಕ್ಷಗಾನ ಕ್ಷೇತ್ರಕ್ಕೆ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಮಹಾನ್ ಕಲಾವಿದರಾಗಿದ್ದಾರೆ. ಭಾಗವತರಾಗಿ ಯಕ್ಷಗಾನದ ತಾಳ ಹಿಡಿದ ಕೈಯಲ್ಲೇ, ಅಷ್ಟೇ ಸಮರ್ಥವಾಗಿ ಲೇಖನಿಯನ್ನು ಹಿಡಿದವರು ಹೊಸ್ತೋಟ ಭಾಗವತರು. ಕನ್ನಡ ಸಾಹಿತ್ಯ ಛಂದಸ್ಸುಗಳ ಆಳ ಅಧ್ಯಯನದಿಂದ ’ಯಕ್ಷಗಾನ ಲಕ್ಷಣಸೂತ್ರ’  ಬರೆದು ಯಕ್ಷ ಸಾಹಿತ್ಯಕ್ಕೆ ಹೊಸಪುಟ ಸೇರಿಸಿದ ಸ್ರುಜನಶೀಲರು ಇವರು. ರಾಮಾಯಣ – ಮಹಾಭಾರತ – ಗೋಮಹಿಮಾಯಾನ – ರಾಮಕ್ರುಷ್ಣ ಚರಿತೆಯನ್ನಾಧರಿಸಿದ ೨೭ ಯಕ್ಷ ಪ್ರಸಂಗಗಳನ್ನು ರಚಿಸಿದ ಕೀರ್ತಿ ಇವರದ್ಧು.

೭೫ಕ್ಕೂ ಹೆಚ್ಚು ಶಿಬಿರಗಳನ್ನು ಮಾಡಿ ೧೫೦೦ಕ್ಕೂ ಹೆಚ್ಚಿನ ವಿಧ್ಯಾರ್ಥಿಗಳಿಗೆ ಯಕ್ಷಕಲೆ ಕಲಿಸಿದ ಇವರು, ಶಿವಮೋಗ್ಗದಲ್ಲಿ ಅಂಧ ಮಕ್ಕಳಿಗೂ ಯಕ್ಷಗಾನ ಕಲಿಸಿದ ಮಹಾನ್ ಸಾಧಕರಾಗಿದ್ದಾರೆ. ಹಲವಾರು ಯಕ್ಷಗಾನ ಸಮ್ಮೇಳನಗಳ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿರುವ ಇವರು, ಸಾಮಾಜಿಕವಾಗಿ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹವ್ಯಕ ಭೂಷಣ:

೧. ಡಾ. ಬಿ ಜಿ ಗೋಪಿನಾಥ್ – ಆಯುರ್ವೇಧ ಪರಿಣಿತರು – ಮಾರ್ಗದರ್ಶಕರು

ಅಧ್ಯಯನಶೀಲ ಆಯುರ್ವೇದ ವೈದ್ಯ , ಶ್ರೀಶ್ರೀ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ನಿವ್ರುತ್ತ ಡೀನ್  ಆಗಿರುವ ಪ್ರೋ. ಬಿ.ಜಿ ಗೋಪಿನಾಥ್ ಅವರದ್ದು ಆದರ್ಶಮಯ ಬದುಕು.ಶಿವಮೋಗ್ಗ ಜಿಲ್ಲೆಯ ಸೊರಬದವರಾದ ಇವರು, ಆಯುರ್ವೇದ ಪ್ರಾಧ್ಯಾಪನದ ಜೊತೆಗೆ ಸಾಕಷ್ಟು ವೈಧ್ಯಕೀಯ ಗ್ರಂಥಗಳನ್ನು ಹಾಗೂ ಲೇಖನಗಳನ್ನು ಬರೆದಿದ್ದಾರೆ. “ಆಯುರ್ವೇದ ಮಿಥ್ಸ್ ಆಂಡ್ ಫ್ಯಾಕ್ಟ್ಸ್” ಇವರ ಪ್ರಮುಖ ಕ್ರುತಿ. ಅನೇಕ ರಾಷ್ಟೀಯ – ಅಂತಾರಾಷ್ಟೀಯ ಸಮ್ಮೇಳನಗಳಲ್ಲಿ ಆಯುರ್ವೇದದ ಕುರಿತಾಗಿ ಬೆಳಕು ಚೆಲ್ಲಿದ ಕೀರ್ತಿ ಇವರದ್ದು.

೨. ವೇ. ಮೂ. ಶಂಕರನಾರಾಯಣ ಘನಪಾಠಿಗಳು – ವೇದ ಹಾಗೂ ಆಗಮ ಶಾಸ್ತ್ರದ ಸಾಧಕರು

ವೇದಗಳ ಸಾರವನ್ನು ತಾವು ಅರೆದು ಕುಡಿದಿರುವುದಲ್ಲದೇ, ಲೋಕ ಹಿತಕ್ಕಾಗಿಯೂ, ಜ್ಞಾನಪರಸರಣಕ್ಕಾಗಿಯೂ ಎಲ್ಲಲಡೆಗೆ ಹಂಚುತ್ತಿರುವವರು ಪಳ್ಳತ್ತಡ್ಕ ಶಂಕರನಾರಾಯಣ ಘನಪಾಠಿಗಳು. ದಕ್ಷಿಣಕನ್ನಡ ಮೂಲದವರಾದ ಇವರು ಕುಂಭಕೋಣಂ, ಕಾಂಚಿಪುರಂನಲ್ಲಿ ವಿಸಿೃತ ವೇದಾಧ್ಯಯನವನ್ನು ಮಾಡಿದರು. ಮೂಲದಿಂದಲೇ ವೇದಗಳ ಅಧ್ಯಯನ ಮಾಡಿ ಘನಪಾಠಗಳಾದ ಭಟ್ಟರು, ವೇದಾಧ್ಯಯನಕ್ಕೆ ತಮ್ಮ ಜೀವಿತವನ್ನು ಮುಡಿಪಾಗಿಟ್ಟಟದ್ದಾರೆ.

೩. ಶ್ಯಾಮಸುಂದರ ಬಡೆಕ್ಕಿಲ್ಲ – ಸಾಂಪ್ರದಾಯಿಕ ಶಿಲ್ಪಕಲಾ ಪರಿಣಿತರು.

 ಅದೆಂತಹ ಕಠಿಣ ಶಿಲೆಯೇ ಆದರೂ ಇವರ ಕೈಯಲ್ಲಿ ಹೂವಂತೆ ಅರಳುತತದ. ಬರಿಯ ಕಲ್ಲಿ ಶಿಲ್ಪವಾಗಿ ಒಡಮೂಡಿ ಬೆರಗೆಂಟು ಮಾಡುತತದ. ಶ್ಯಾಮಸೆಂದರ ಭಟ್ಟರ ಸೆಂದರ ಕಲ್ಪನೆಯ ಕುಸರಿಯ ಕೆತತನೆಯಲ್ಲಿ ಮೂಡಿ ನೆಂತಿರುವ ವಿಗ್ರಹಗ್ಳ ಸಂಖ್ಯಾ ಅಪಾರ. ಬಡೆಕ್ಕಿಲ್ದ ಶ್ಯಾಮಸೆಂದರ ಭಟ್ಟರು ೧೯೬೩ರಲ್ಲಿ, ಡಾ.ಕೃಷ್ಣ ಭಟ್ ದಂಪತಿಗ್ಳಿಗೆ ಜನಸಿದರು. ಎರಡನೇ ವಯಸಿಿಗೇ ಪೊಲ್ಲೀಯೀದೆಂದಾಗಿ ಕಾಲ್ಲನ ಬಲ್ ಕಳೆದುಕೆಂಡ ಭಟ್ಟರು, ಎಲ್ಿರಂತೆ ಶ್ಯಲೆಯ ವಿದಾಾಭ್ಯಾಸ ಮಾಡದೇ, ಮನೆಯಲ್ಲಿಯೇ ಅಕ್ಷರಾಭ್ಯಾಸ ಮಾಡಿದರು. ಪೂರ್ವಿಕರ ಬಳುವಳಿ, ಸವಯಂ ಆಸಕ್ಕತ ಎರಡೂ ಬೆರೆತು, ಏಳನೇ ವಯಸಿಿನಲ್ಲಿಯೇ ಕರಕುಶಲ್ ಕಲೆಗ್ಳಲ್ಲಿ ಆಸಕ್ಕತ ಮೂಡಿ, ಆಕೃತಿಗ್ಳನ್ನು ತಯಾರಿಸಲ್ಲ ಆರಂಭಿಸಿದರು.

ಇಲ್ಲಿಯವರೆಗೆ ಸಾವಿರಾರು ಶಿಲ್ಪ ಕಲಾಕೃತಿಗ್ಳನ್ನು ರಚಿಸಿರುವ ಶ್ಯಾಮಸೆಂದರ ಭಟ್ಟರ ವಿಗ್ರಹಗ್ಳು ಜಗ್ತಿತನ ವಿವಿಧ್ ಭ್ಯಗ್ಗ್ಳಲ್ಲಿ ಪರತಿಷ್ಠಾಪಿಸಲ್ಪಟ್ಟಟವೆ. ಆಸ್ಟಟರೀಲ್ಲಯಾದೆಂದ ಮೊದಲ್ಲಗೆಂಡು ಭ್ಯರತದ ಹಲ್ವುಕಡೆಗ್ಳಲ್ಲಿ ಶ್ಯಾಮಸೆಂದರರ ಕೈಚಳಕದೆಂದ ಮೂಡಿಬಂದ ಪರತಿಮೆಗ್ಳು ಜನಮನ ಸ್ಟಳೆಯುತಿತವೆ.

ಹವ್ಯಕ ಶ್ರೀ

 ೧. ಶ್ರೀ ನರಹರು ದೀಕ್ಷಿತ್ – ಸಂಗೀತ ಸಾಧಕರು

ಉದ್ಯೋಗವನ್ನು ಬಿಟ್ಟು ತಮ್ಮ ಹವ್ಯಾಸವಾಗಿದ್ದ ಸುಗಮ ಸಂಗೀತ ಕ್ಷೇತ್ರಕ್ಕೆ ತಮ್ಮನ್ನು ತಾವೇ ತೊಡಗಿಸಿಕೊಂಡರು. ಸುಗಮ ಸಂಗೀತದ ಶಿಕ್ಷಣವನ್ನೇ ಜೀವನದ ಗುರಿಯಾಗಿರಿಸಿಕೊಂಡು, ಅದನ್ನೇ ವೃತ್ತಿಯಾಗಿ ಸ್ವೀಕರಿಸಿ ‘ಸೃಜನ ಸಾಂಸ್ಕøತಿಕ ಸಮೂಹ’ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕಳೆದ 23 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೇವಲ ನಾಲ್ಕೈದು ವಿದ್ಯಾರ್ಥಿಗಳಿಂದ ಆರಂಭವಾದ ಸೃಜನ ಸಾಂಸ್ಕøತಿಕ ಸಮೂಹ ಇಂದು 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಗಮ ಸಂಗೀತದ ತರಗತಿಯನ್ನು ನಡೆಸುತ್ತಿದೆ. ಇದೇ ಬೆಂಗಳೂರಿನಲ್ಲಿ 16ಕ್ಕೂ ಹೆಚ್ಚು ಶಾಖೆಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ಸುಗಮ ಸಂಗೀತದ ಪಾಠವನ್ನು ಸ್ವತಃ ಹೇಳಿಕೊಟ್ಟು ನಾಡಿಗೆ ಹಲವು ಪ್ರತಿಭೆಗಳನ್ನು ಪರಿಚಯಿಸುತ್ತಿರುವ ಕೀರ್ತಿ ನರಹರಿ ದೀಕ್ಷಿತ್ ಅವರದ್ದು. ಇವರ ಬಳಿ ಸಂಗೀತ ಕಲಿತ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಟಿವಿ ಕನ್ನಡ ವಾಹಿನಿಯ ಎಸ್.ಪಿ. ಬಾಲಸುಬ್ರಹ್ಮಣ್ಯಂ ನೇತೃತ್ವದ ‘ಎದೆ ತುಂಬಿ ಹಾಡುವೆನು’ ಮತ್ತು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೀ ಕನ್ನಡ ವಾಹಿನಿಯ ‘ಸರೆಗಮಪ’ ಕಾರ್ಯಕ್ರಮದಲ್ಲಿ ಭಾಗವಹಿಸಿ ನರಹರಿ ದೀಕ್ಷಿತರ ಭೋದನಾ ಕೌಶಲಕ್ಕೆ ಹಿಡಿದ ಕೈಗನ್ನಡಿ.

೨. ವಿದುಷಿ ಅರುಣಾಕುಮಾರಿ – ಅಂಧಕಲಾವಿದೆ , ವೀಣಾವಾದಕಿ

ಜ್ಞಾನಾಕಾಂಕ್ಷೆಯ ದಾಹ ಮತ್ತು ಸಾಧನೆಗಳಿಗೆ ಅಾಂಗ ನ್ಯೂನತೆಗಳು ಎಾಂದೂ ಅಡ್ಡಿಯಾಗದು ಎನ್ನುವುದಕ್ಷೆ ವೀಣಾ ವದುಷಿ ಅರುಣಕುಮಾರಿಯವರೇ ಸಾಕ್ಷಿ. ೬ನೇ ವಯಸ್ಸಿನಲ್ಲಿಯೇ ದ್ರುಷ್ಟಿಕಳೆದುಕೊಂಡರೂ ವೀಣಾವದನದಲ್ಲಿ ಹೆಸರುವಾಸಿಯಾದ ಇವರು, Divine Veena Science ಎಂಬಕ್ರುತಿಯನ್ನು ರಚಿಸಿದ್ದಾರೆ.

 ೩.  ನಾಗರಾಜ್ ಹೆಗಡೆ – ಅಂತಾರಾಷ್ಟೀಯ ವಾಲಿಬಾಲ್ ಕ್ರೀಡಾಪಟು

ವಾಲ್ಲಬಾಲ್ ಕ್ಕಷೀತ್ಾದಲ್ಲಿ ಹೆಸ್ರು ಮಾಡುವ ಉದೆುೀಶ ಹೊತುತ ನಾಗರಾಜ ಹೆಗಡೆಯವರು ಹೊರಟಾಗ ಅವರನನ ಮೂದಲ್ಲಸಿದವರು, ಇದೇನಿದು ಎಂದು ಆಶೆಯವ ಪ್ಟ್ಟವರೇ ಹೆಚ್ಚೆ.ಆದರೆ ಎಳವೆಯಲ್ಲಿೀ ವಾಲ್ಲಬಾಲ್ ಬಗೆೆ ಆಸ್ಕ್ತ ಬೆಳೆಸಿಕಂಡಿದು ನಾಗರಾಜ್, ಹಂತಿರುಗಿ ನೀಡಲ್ಲಲ್ಿ. ತ್ಮಮ ಅದಿಿತಿೀಯ ಶಾಮ ಮತುತ ಪ್ಾತಿಭೆಯಂದ 1990ರಲ್ಲಿ ಕನಾವಟ್ಕ ವಾಲ್ಲಬಾಲ್ ತಂಡಕ್ಕೆ ಆಯ್ಕೆಯಾದ ನಾಗರಾಜ ಹೆಗಡೆ ಅಲ್ಲಿಂದ ಮಂದೆ ಹದಿನಾರು ವರ್ವಗಳ ಕಾಲ್ ಕನಾವಟ್ಕ ತಂಡದ ಅವಿಭಾಜಯ ಅಂಗವಾಗಿ ಮಂದುವರಿಯುತ್ತತರೆ. ಆನಂತರ ರಾಷ್ಟ್ರ – ಅಂತಾರಾಷ್ಟ್ರಮಟ್ಟದ ತಂಡಗಳಲ್ಲೂ ಭಾಗವಹಿಸಿ ಭಾರತದ ಕೀರ್ತಿಯನ್ನು ಸಾರಿದ ಸಾಧಕರು ಇವರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ “ಪಲ್ಲವ ಪುರಸ್ಕಾರ” ನೀಡಲಾಗುವುದು.ಈ ಕಾರ್ಯಕ್ರಮಕ್ಕೆ ಇಡಗುಂಜಿ ಕ್ಷೇತ್ರದ ಧರ್ಮದರ್ಶಿಗಳಾದ ಜಿ ಜಿ ಸಭಾಹಿತ್ , ನಿವ್ರುತ್ತ ಪೋಲಿಸ್ ಅಧಿಕಾರಿಗಳಾದ ಶ್ರೀ ಎಂ ಕ್ರುಷ್ಣಭಟ್ ಹಾಗೂ ಕ್ರುಷಿತಜ್ಜ ಎಂ ಆರ್ ಹೆಗಡೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಡಾ. ಕಜೆ ಅಧ್ಯಕ್ಷತೆ ವಹಿಸಲಿದ್ದಾರೆ.

Please follow and like us:
0
http://bp9news.com/wp-content/uploads/2018/04/collage-23.jpghttp://bp9news.com/wp-content/uploads/2018/04/collage-23-150x150.jpgBP9 Bureauಉತ್ತರ ಕನ್ನಡಬೆಂಗಳೂರುಶ್ರೀ ರಾಮಚಂದ್ರಾಪುರ ಮಠಬೆಂಗಳೂರು:  ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀಅಖಿಲ ಹವ್ಯಕ ಮಹಾಸಭೆ 75ನೇ ವರ್ಷದ ಸಂಸ್ಥಾಪನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ದಿನಾಂಕ 15/04/2018 ಭಾನುವಾರ ಸಂಜೆ ೪.೦೦ ಗಂಟೆಗೆ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಸಂಸ್ಥಾಪನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವಾರ್ಷಿಕ ವಿಶೇಷ ಹವ್ಯಕ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹವ್ಯಕ ವಿಶೇಷ ಪ್ರಶಸ್ತಿ – 2018ರ ಭಾಜನರು: ಹವ್ಯಕ ವಿಭೂಷಣ; ೧. ಶ್ರೀ ಹೊಸ್ತೋಟ ಮಂಜುನಾಥ ಭಾಗವತ – ಯಕ್ಷಗಾನಕ್ಷೇತ್ರದ...Kannada News Portal