ಮಂಗಳೂರು:ರಾಜ್ಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಗೋವುಗಳ ಕಳ್ಳತನ ವಿರೋಧಿಸಿ, ಗೋಶಾಲೆಯ ಕಾರ್ಯಕರ್ತರನ್ನು ಹೆದರಿಸಿ, ಬೆದರಿಸಿ, ಹಲ್ಲೆ ಮಾಡಿಗೋವುಗಳನ್ನು ದರೋಡೆ ಮಾಡುವ ಗೋಕಳ್ಳರ ವಿರುದ್ಧ ಆಡಳಿತ ವ್ಯವಸ್ಥೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಯುವಾ ಬ್ರಿಗೇಡ್ ಕರೆಕೊಟ್ಟಿರುವಒಂದು ದಿನದ ಸಾಂಕೇತಿಕ ಉಪವಾಸಕ್ಕೆ ಭಾರತೀಯ ಗೋಪರಿವಾರ ಬೆಂಬಲ ವ್ಯಕ್ತಪಡಿಸಿದೆ.

ಕೆಲ ದಿನಗಳ ಹಿಂದೆ ಮಂಗಳೂರು ಸಮೀಪ ಕೈರಂಗಳದ ಗೋಶಾಲೆಗೆ ನುಗ್ಗಿ ಅಲ್ಲಿನ ಕಾರ್ಯಕರ್ತರಿಗೆ ತಲವಾರು ತೋರಿಸಿ ಬೆದರಿಸಿ ಗೋವನ್ನು ಕದ್ದೊಯ್ದಿದ್ದನ್ನುವಿರೋಧಿಸಿ, ದರೋಡೆಕೋರರನ್ನು ಬಂಧಿಸುವಂತೆ ಆಗ್ರಹಿಸಿ ಗೋಶಾಲೆಯ ಮುಖ್ಯಸ್ಥ ರಾಜಾರಾಮ್ ಭಟ್ ಆಮರಣಾಂತ ಉಪವಾಸ ಕೈಗೊಂಡಿದ್ದರು. ಈಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು, ರೈತರ ಜೀವನಕ್ಕೆ ಧಕ್ಕೆ ತರುತ್ತಿರು  ಗೋಕಳ್ಳರಇಂತಹ ಕ್ರಮದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದರು‌.

ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯದ ಯೋಜಕರೂ ಆಗಿರುವ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದ ಯುವಾ ಬ್ರಿಗೇಡ್ ರಾಜ್ಯಾದ್ಯಂತಕೈಗೊಂಡಿರುವ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸುತ್ತದೆ ಹಾಗೂ ಗೋರಕ್ಷಣೆ ಕುರಿತಾದ ಈ ಹೋರಾಟಕ್ಕಾಗಿ ಅವರನ್ನು ಅಭಿನಂದಿಸುತ್ತದೆಎಂದು ಭಾರತೀಯ ಗೋಪರಿವಾರದ ಕರ್ನಾಟಕ ರಾಜ್ಯಾಧ್ಯಕ್ಷ ಗಂವ್ಹಾರದ ತ್ರಿವಿಕ್ರಾಮನಂದ ಮಠದ ಪೂಜ್ಯ ಪಾಂಡುರಂಗ ಮಹಾರಾಜ್ ಅವರು ಘೋಷಿಸಿದರು.

ಅವರು ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭಾನ್ಕುಳಿಯಲ್ಲಿನ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಮಾತನಾಡುತ್ತಾ, ಗೋವುಗಳುನಮಗೆಲ್ಲರಿಗೂ ಪೂಜನೀಯ ಸ್ಥಾನದಲ್ಲಿದೆ ಮಾತ್ರವಲ್ಲ, ಅದು ರೈತನ ಬದುಕು, ಗೋವುಗಳ ಕೊಡುವ ಹಾಲು, ಗೋಮೂತ್ರ ಸಗಣಿಗಳಿಂದ ರೈತ ಜೀವನಕಟ್ಟಿಕೊಳ್ಳುತ್ತಾನೆ. ಗೋಶಾಲೆಗಳಿಂದ ಗೋವುಗಳನ್ನು ಕಳ್ಳತನ ಮಾಡುವ ಮೂಲಕ ರೈತನ ಜೀವನವನ್ನು ಕಿತ್ತುಕೊಳ್ಳುವ ಕೆಲಸಕ್ಕೆ ಮುಂದಾಗಬಾರದು ಎಂದರು.ಕಣ್ಮುಂದೆ ಅವ್ಯಾಹತವಾಗಿ ಗೋಹತ್ಯೆ, ಗೋದರೋಡೆ, ಗೋಕಳ್ಳರ ಅಟ್ಟಹಾಸ ನಡೆಯುತ್ತಿದ್ದರೂ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ,ಉದ್ದೇಶಪೂರ್ವಕವಾಗಿ ಅಪರಾಧಿಗಳನ್ನು ಬಂಧಿಸದೆ, ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಸರ್ಕಾರದ ಈ ಕ್ರಮವನ್ನು ಭಾರತೀಯಗೋಪರಿವಾರ ಖಂಡಿಸುತ್ತದೆ. ಸರ್ಕಾರ ಗೋಕಳ್ಳರ ವಿರುದ್ಧ ಕಠಿಣ‌ ಕ್ರಮ ಜರುಗಿಸಿ ಅಮಾಯಕ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಭಾರತೀಯ ಗೋಪರಿವಾರದ ಕಾರ್ಯದರ್ಶಿ ಮಧು ಗೋಮತಿ, ಸಹಕಾರ್ಯದರ್ಶಿ ಶಿಶಿರ ಹೆಗಡೆ, ಸಂಯೋಜಕರಾದ ವಿದ್ವಾನ್ ಜಗದೀಶ್ ಶರ್ಮ,ಕರ್ನಾಟಕ ರಾಜ್ಯ ಗೋಪರಿವಾರದ ಪ್ರಧಾನ ಕಾರ್ಯದರ್ಶಿ ಡಾ|| ವೈ.ವಿ.ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಕಾರ್ಯಾಲಯಕಾರ್ಯದರ್ಶಿ ಡಾ|| ರವಿ ಉಪಸ್ಥಿತಿರಿದ್ದರು.

ಶ್ರೀ ರಾಮಚಂದ್ರಾಪುರ ಮಠದ ಕಗ್ಗಲಿಪುರ, ಮಾಲೂರು, ಮುಳಿಯ, ಬಜಕೂಡ್ಲು, ಮಾಣಿಮಠ ಗೋಶಾಲೆಗಳಲ್ಲಿ ಕೂಡಾ ಉಪವಾಸ ಸತ್ಯಾಗ್ರಹ ನಡೆಸಲಾಯಿತು.  ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಉಪವಾಸ ನಡೆಸಲಾಯಿತು.

 

Please follow and like us:
0
http://bp9news.com/wp-content/uploads/2018/04/collage-3-15.jpghttp://bp9news.com/wp-content/uploads/2018/04/collage-3-15-150x150.jpgBP9 Bureauಪ್ರಮುಖಬೆಂಗಳೂರುಮಂಗಳೂರುಶ್ರೀ ರಾಮಚಂದ್ರಾಪುರ ಮಠಮಂಗಳೂರು:ರಾಜ್ಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಗೋವುಗಳ ಕಳ್ಳತನ ವಿರೋಧಿಸಿ, ಗೋಶಾಲೆಯ ಕಾರ್ಯಕರ್ತರನ್ನು ಹೆದರಿಸಿ, ಬೆದರಿಸಿ, ಹಲ್ಲೆ ಮಾಡಿಗೋವುಗಳನ್ನು ದರೋಡೆ ಮಾಡುವ ಗೋಕಳ್ಳರ ವಿರುದ್ಧ ಆಡಳಿತ ವ್ಯವಸ್ಥೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಯುವಾ ಬ್ರಿಗೇಡ್ ಕರೆಕೊಟ್ಟಿರುವಒಂದು ದಿನದ ಸಾಂಕೇತಿಕ ಉಪವಾಸಕ್ಕೆ ಭಾರತೀಯ ಗೋಪರಿವಾರ ಬೆಂಬಲ ವ್ಯಕ್ತಪಡಿಸಿದೆ. ಕೆಲ ದಿನಗಳ ಹಿಂದೆ ಮಂಗಳೂರು ಸಮೀಪ ಕೈರಂಗಳದ ಗೋಶಾಲೆಗೆ ನುಗ್ಗಿ ಅಲ್ಲಿನ ಕಾರ್ಯಕರ್ತರಿಗೆ ತಲವಾರು ತೋರಿಸಿ ಬೆದರಿಸಿ ಗೋವನ್ನು ಕದ್ದೊಯ್ದಿದ್ದನ್ನುವಿರೋಧಿಸಿ, ದರೋಡೆಕೋರರನ್ನು ಬಂಧಿಸುವಂತೆ ಆಗ್ರಹಿಸಿ ಗೋಶಾಲೆಯ ಮುಖ್ಯಸ್ಥ ರಾಜಾರಾಮ್ ಭಟ್ ಆಮರಣಾಂತ ಉಪವಾಸ ಕೈಗೊಂಡಿದ್ದರು. ಈಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು, ರೈತರ ಜೀವನಕ್ಕೆ ಧಕ್ಕೆ ತರುತ್ತಿರು  ಗೋಕಳ್ಳರಇಂತಹ ಕ್ರಮದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದರು‌. ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯದ ಯೋಜಕರೂ ಆಗಿರುವ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದ ಯುವಾ ಬ್ರಿಗೇಡ್ ರಾಜ್ಯಾದ್ಯಂತಕೈಗೊಂಡಿರುವ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸುತ್ತದೆ ಹಾಗೂ ಗೋರಕ್ಷಣೆ ಕುರಿತಾದ ಈ ಹೋರಾಟಕ್ಕಾಗಿ ಅವರನ್ನು ಅಭಿನಂದಿಸುತ್ತದೆಎಂದು ಭಾರತೀಯ ಗೋಪರಿವಾರದ ಕರ್ನಾಟಕ ರಾಜ್ಯಾಧ್ಯಕ್ಷ ಗಂವ್ಹಾರದ ತ್ರಿವಿಕ್ರಾಮನಂದ ಮಠದ ಪೂಜ್ಯ ಪಾಂಡುರಂಗ ಮಹಾರಾಜ್ ಅವರು ಘೋಷಿಸಿದರು. ಅವರು ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭಾನ್ಕುಳಿಯಲ್ಲಿನ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಮಾತನಾಡುತ್ತಾ, ಗೋವುಗಳುನಮಗೆಲ್ಲರಿಗೂ ಪೂಜನೀಯ ಸ್ಥಾನದಲ್ಲಿದೆ ಮಾತ್ರವಲ್ಲ, ಅದು ರೈತನ ಬದುಕು, ಗೋವುಗಳ ಕೊಡುವ ಹಾಲು, ಗೋಮೂತ್ರ ಸಗಣಿಗಳಿಂದ ರೈತ ಜೀವನಕಟ್ಟಿಕೊಳ್ಳುತ್ತಾನೆ. ಗೋಶಾಲೆಗಳಿಂದ ಗೋವುಗಳನ್ನು ಕಳ್ಳತನ ಮಾಡುವ ಮೂಲಕ ರೈತನ ಜೀವನವನ್ನು ಕಿತ್ತುಕೊಳ್ಳುವ ಕೆಲಸಕ್ಕೆ ಮುಂದಾಗಬಾರದು ಎಂದರು.ಕಣ್ಮುಂದೆ ಅವ್ಯಾಹತವಾಗಿ ಗೋಹತ್ಯೆ, ಗೋದರೋಡೆ, ಗೋಕಳ್ಳರ ಅಟ್ಟಹಾಸ ನಡೆಯುತ್ತಿದ್ದರೂ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ,ಉದ್ದೇಶಪೂರ್ವಕವಾಗಿ ಅಪರಾಧಿಗಳನ್ನು ಬಂಧಿಸದೆ, ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಸರ್ಕಾರದ ಈ ಕ್ರಮವನ್ನು ಭಾರತೀಯಗೋಪರಿವಾರ ಖಂಡಿಸುತ್ತದೆ. ಸರ್ಕಾರ ಗೋಕಳ್ಳರ ವಿರುದ್ಧ ಕಠಿಣ‌ ಕ್ರಮ ಜರುಗಿಸಿ ಅಮಾಯಕ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಭಾರತೀಯ ಗೋಪರಿವಾರದ ಕಾರ್ಯದರ್ಶಿ ಮಧು ಗೋಮತಿ, ಸಹಕಾರ್ಯದರ್ಶಿ ಶಿಶಿರ ಹೆಗಡೆ, ಸಂಯೋಜಕರಾದ ವಿದ್ವಾನ್ ಜಗದೀಶ್ ಶರ್ಮ,ಕರ್ನಾಟಕ ರಾಜ್ಯ ಗೋಪರಿವಾರದ ಪ್ರಧಾನ ಕಾರ್ಯದರ್ಶಿ ಡಾ|| ವೈ.ವಿ.ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಕಾರ್ಯಾಲಯಕಾರ್ಯದರ್ಶಿ ಡಾ|| ರವಿ ಉಪಸ್ಥಿತಿರಿದ್ದರು. ಶ್ರೀ ರಾಮಚಂದ್ರಾಪುರ ಮಠದ ಕಗ್ಗಲಿಪುರ, ಮಾಲೂರು, ಮುಳಿಯ, ಬಜಕೂಡ್ಲು, ಮಾಣಿಮಠ ಗೋಶಾಲೆಗಳಲ್ಲಿ ಕೂಡಾ ಉಪವಾಸ ಸತ್ಯಾಗ್ರಹ ನಡೆಸಲಾಯಿತು.  ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಉಪವಾಸ ನಡೆಸಲಾಯಿತು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','42'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_4220180301164730'); document.getElementById('div_4220180301164730').appendChild(scpt);  Kannada News Portal