ಬೆಂಗಳೂರು:  ಕಾಂಚಿ ಕಾಮಕೋಟಿ ಶಂಕರ ಪೀಠದ ಬ್ರಹ್ಮೈಕ್ಯ ಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಗಳ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಗೋಕರ್ಣ ಮಂಡಲಾಧೀಶ್ವರ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು ಕಾಂಚಿ ಕಾಮಕೋಟಿಗೆ ಭೇಟಿ ನೀಡಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಂತರ ಕಾಂಚಿ ಕಾಮಕೋಟಿ ಶಂಕರ ಪೀಠದ ಶ್ರೀ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬ್ರಹ್ಮಲೀನ ಹಿರಿಯ ಶ್ರೀಗಳ ಜೊತೆಗಿನ ಒಡನಾಟವನ್ನು ರಾಘವೇಶ್ವರಶ್ರೀಗಳು ನೆನಪಿಸಿದರು.

ಈ ಸಂದರ್ಭದಲ್ಲಿ ‘ಎರಡೂ ಮಠಗಳ ಬಾಂಧವ್ಯ, ಹಿಂದೂಗಳ ಸಂಘಟನೆ, ಸನಾತನ ಸಂಸ್ಕೃತಿಗಳ ರಕ್ಷಣೆ, ಸಂತರ ಸಂಘಟನೆ ಹಾಗೂ ಗೋವಂಶ ರಕ್ಷಣೆ ಹಾಗೂ ಗೋಸ್ವರ್ಗ ಯೋಜನೆ’ಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಿದರು. ಎರಡೂ ಮಠಗಳ ಸಹಯೋಗದಲ್ಲಿ ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಧನಾತ್ಮಕ ಚಿಂತನೆ ನಡೆಸಿದರು.

 

Please follow and like us:
0
http://bp9news.com/wp-content/uploads/2018/03/20180312165911_IMG_7508.jpghttp://bp9news.com/wp-content/uploads/2018/03/20180312165911_IMG_7508-150x150.jpgBP9 Bureauಬೆಂಗಳೂರುಶ್ರೀ ರಾಮಚಂದ್ರಾಪುರ ಮಠಬೆಂಗಳೂರು:  ಕಾಂಚಿ ಕಾಮಕೋಟಿ ಶಂಕರ ಪೀಠದ ಬ್ರಹ್ಮೈಕ್ಯ ಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಗಳ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಗೋಕರ್ಣ ಮಂಡಲಾಧೀಶ್ವರ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು ಕಾಂಚಿ ಕಾಮಕೋಟಿಗೆ ಭೇಟಿ ನೀಡಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಕಾಂಚಿ ಕಾಮಕೋಟಿ ಶಂಕರ ಪೀಠದ ಶ್ರೀ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬ್ರಹ್ಮಲೀನ ಹಿರಿಯ ಶ್ರೀಗಳ ಜೊತೆಗಿನ ಒಡನಾಟವನ್ನು ರಾಘವೇಶ್ವರಶ್ರೀಗಳು ನೆನಪಿಸಿದರು. ಈ...Kannada News Portal