ಶಿವಮೊಗ್ಗ : ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ರಾಘವೇಶ್ವರ ಶ್ರೀಗಳನ್ನು ಭೇಟಿ ಮಾಡಿ ಚರ್ಚೆನಡೆಸಿದರು.

ಚುನಾವಣಾ ಪ್ರಚಾರಕ್ಕೆ ಇಂದು ರಾಜ್ಯಕ್ಕೆ ಬಂದಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​​ ಸಾಗರದಲ್ಲಿರುವ ಶ್ರೀಮಠದ ರಾಘವೇಶ್ವರ ಸಭಾಭವನದಲ್ಲಿ ಭೇಟಿ  ನೀಡಿ ರಾಘವೇಶ್ವರ ಶ್ರೀಗಳ ಜೊತೆ  ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ನಿರ್ಮಾಣ ಆಗುತ್ತಿರುವ ಗೋ ಸ್ವರ್ಗದ ಬಗ್ಗೆ, ಗೋ ಸಂರಕ್ಷಣೆಯಬಗ್ಗೆ ಹಾಗು ಅಭಯಾಕ್ಷರ ಅಭಿಯಾನದ ಕುರಿತು ಮಾಹಿತಿಯನ್ನ ಆದಿತ್ಯನಾಥ್​​​ ಪಡೆದುಕೊಂಡರು. ಅಲ್ಲದೆ ಗೋ ಸ್ವರ್ಗದ ಬಗ್ಗೆ ಶ್ರೀಗಳು ಸಂಪೂರ್ಣ ವಿವರವನ್ನ ತಿಳಿಸಿದ್ದು, ಅದನ್ನ ಕೇಳಿದ ಯೋಗಿ ಬಹಳ ಸಂತೋಷವನ್ನ ವ್ಯಕ್ತಪಡಿಸಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.


ಮಠದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಯೋಗಿ, ರಾಮಚಂದ್ರಾಪುರ ಮಠದ ಕಾರ್ಯ ಎಲ್ಲರಿಗೂ ಮಾದರಿಯಾಗಿದ್ದು, ಕೆಲಸ ಕಾರ್ಯಗಳು ಶ್ಲಾಘನೀಯವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.  ಈ ಸಂದರ್ಭದಲ್ಲಿ ಆರ್​​.ಎಸ್.​​ ಹೆಗಡೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 

 

Please follow and like us:
0
http://bp9news.com/wp-content/uploads/2018/05/WhatsApp-Image-2018-05-03-at-2.02.15-PM-1.jpeghttp://bp9news.com/wp-content/uploads/2018/05/WhatsApp-Image-2018-05-03-at-2.02.15-PM-1-150x150.jpegBP9 Bureauಶಿವಮೊಗ್ಗಶ್ರೀ ರಾಮಚಂದ್ರಾಪುರ ಮಠಶಿವಮೊಗ್ಗ : ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ರಾಘವೇಶ್ವರ ಶ್ರೀಗಳನ್ನು ಭೇಟಿ ಮಾಡಿ ಚರ್ಚೆನಡೆಸಿದರು. ಚುನಾವಣಾ ಪ್ರಚಾರಕ್ಕೆ ಇಂದು ರಾಜ್ಯಕ್ಕೆ ಬಂದಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​​ ಸಾಗರದಲ್ಲಿರುವ ಶ್ರೀಮಠದ ರಾಘವೇಶ್ವರ ಸಭಾಭವನದಲ್ಲಿ ಭೇಟಿ  ನೀಡಿ ರಾಘವೇಶ್ವರ ಶ್ರೀಗಳ ಜೊತೆ  ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ನಿರ್ಮಾಣ ಆಗುತ್ತಿರುವ ಗೋ ಸ್ವರ್ಗದ ಬಗ್ಗೆ, ಗೋ ಸಂರಕ್ಷಣೆಯಬಗ್ಗೆ ಹಾಗು ಅಭಯಾಕ್ಷರ ಅಭಿಯಾನದ ಕುರಿತು ಮಾಹಿತಿಯನ್ನ...Kannada News Portal