ರಾಮನಗರ : ಎಲ್ಲಾ ಮಾಯಾ, ಇಲ್ಲಿ ಸೀಟು ಮಾಯಾ….! ಹೌದು ಇಂತಹದೊಂದು ಮಾತು ರಾಮನಗರ ಕೆಎಸ್ ಆರ್​ಟಿಸಿಗೆ ಸಖತ್ ಸೂಟ್ ಆಗುತ್ತೆ…!

ರಾಮನಗರ ಸಾರಿಗೆ ಸಂಸ್ಥೆಯ ಘಟಕದ ಬಸ್ ಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳನ್ನು ತೆಗೆಯುವ ಮೂಲಕ  ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ದಿನನಿತ್ಯ   ಸೀಟ್ ಇಲ್ಲದ್ದನ್ನು ನೋಡಿದ ಸಾರ್ವಜನಿಕರು ರಾಮನಗರ ಘಟಕದ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ದ ಕಿಡಿ ಕಾರಿದ್ದಾರೆ.


ನೋಡಲು ಹೊಸ ಬಸ್ : ರಾಮನಗರ ಘಟಕಕ್ಕೆ ಜೆ ನರ್ಮ್ ಯೋಜನೆಯಡಿ ಕಳೆದ ವರ್ಷ ನೀಡಲಾಗಿರುವ ಹೊಸ ಬಸ್ ಗಳಲ್ಲಿ ಸೀಟ್ ಬಿಚ್ಚಲಾಗಿದೆ. ಲಕ್ಷಾಂತರ ರೂ ಗಳನ್ನು ಖರ್ಚುಮಾಡಿ KSRTC ಹೈಟೆಕ್ ಬಸ್ ಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಲು ನೀಡಿದ್ದರೆ ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಇಲ್ಲಿನ ಅಧಿಕಾರಿಗಳಿಂದ ಆಗುತ್ತಿಲ್ಲ, ನೋಡಲು ಹೊಸ ಬಸ್ ತರಹ ಕಾಣುವ ಈ ಬಸ್ ಗಳು ಒಳಗೆಲ್ಲಾ ಹುಳುಕಿನಿಂದ ಕೂಡಿವೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸನಗಳ ಬೋಲ್ಟ್ ಸರಿಮಾಡಲ್ಲ :ಇಂತಹದೊಂದು ಆರೋಪವನ್ನು ರಾಮನಗರ ಘಟಕದ ಚಾಲನ ಸಿಬ್ಬಂದಿ ಬಹಿರಂಗವಾಗಿ ಹೇಳುತ್ತಾರೆ.ಘಟಕದಲ್ಲಿನ ತಾಂತ್ರಿಕ ಸಿಬ್ಬಂದಿ ಆಸನಗಳ ಬೋಲ್ಟ್ ಸರಿಪಡಿಸುವ ಬದಲು ಆಸನವನ್ನೇ ಕಳಚುತ್ತಾರೆ, ಈ ಬಗ್ಗೆ ಘಟಕ ವ್ಯವಸ್ಥಾಪಕರ ಗಮನಕ್ಕೆ ತಂದರೆ ಉಢಾಪೆಯ ಉತ್ತರ ನೀಡುತ್ತಾರೆ. ಈಗಾಗಲೇ ಜೆ ನರ್ಮ್ ಯೋಜನೆಯಡಿ ಮಂಜೂರಾಗಿರುವ ಬಹುತೇಕ ಬಸ್ ಗಳ ಸೀಟುಗಳನ್ನು ಕಾರಣವಿಲ್ಲದೇ ಮೂಲೆ ಸೇರಿಸಿದ್ದಾರೆ, ಎಂದು ಹೆಸರು ಹೇಳಲು ಇಚ್ಚಿಸದ ಸಾರಿಗೆ ಸಿಬ್ಬಂದಿ ಬಿಪಿ9 ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರೇ ಪ್ರಭುಗಳು ಎಂದು ಹೇಳುವ ಸಾರಿಗೆ ಸಂಸ್ಥೆಯಲ್ಲಿ ಹಣ ನೀಡಿದರೂ ಕುಳಿತುಕೊಳ್ಳಲು ಸೀಟುಗಳು ಇಲ್ಲದೇ ನಿಂತು ಪ್ರಯಾಣಿಸುವ ದೌರ್ಭಾಗ್ಯ ಮಾತ್ರ ಪ್ರಯಾಣಿಕನದ್ದು.

Please follow and like us:
0
http://bp9news.com/wp-content/uploads/2018/04/WhatsApp-Image-2018-04-29-at-11.26.03-AM-1024x768.jpeghttp://bp9news.com/wp-content/uploads/2018/04/WhatsApp-Image-2018-04-29-at-11.26.03-AM-150x150.jpegBP9 Bureauರಾಮನಗರರಾಮನಗರ : ಎಲ್ಲಾ ಮಾಯಾ, ಇಲ್ಲಿ ಸೀಟು ಮಾಯಾ....! ಹೌದು ಇಂತಹದೊಂದು ಮಾತು ರಾಮನಗರ ಕೆಎಸ್ ಆರ್​ಟಿಸಿಗೆ ಸಖತ್ ಸೂಟ್ ಆಗುತ್ತೆ...! ರಾಮನಗರ ಸಾರಿಗೆ ಸಂಸ್ಥೆಯ ಘಟಕದ ಬಸ್ ಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳನ್ನು ತೆಗೆಯುವ ಮೂಲಕ  ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ದಿನನಿತ್ಯ   ಸೀಟ್ ಇಲ್ಲದ್ದನ್ನು ನೋಡಿದ ಸಾರ್ವಜನಿಕರು ರಾಮನಗರ ಘಟಕದ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ದ ಕಿಡಿ ಕಾರಿದ್ದಾರೆ. ನೋಡಲು ಹೊಸ ಬಸ್ : ರಾಮನಗರ ಘಟಕಕ್ಕೆ ಜೆ ನರ್ಮ್...Kannada News Portal