ಬೆಂಗಳೂರು: ದೇಶದ ಶೇ.48 ರಷ್ಟು ಮಹಿಳೆಯರು ದುಬಾರಿ ದರ ಎನ್ನುವ ಕಾರಣಕ್ಕೆ ಉತ್ತಮ ಸ್ಯಾನಿಟರಿ ನ್ಯಾಪ್ ಕಿನ್ ಬಳಕೆಯಿಂದ ವಂಚಿತರಾಗಿದ್ದವರನ್ನು ಉದ್ದೇಶವಾಗಿಟ್ಟುಕೊಂಡು ಕಡಿಮೆ ದರದ ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ದೇಶದ ಮೊದಲ ಬಯೋ ಡಿಗ್ರೇಡಬಲ್‌ ಸ್ಯಾನಿಡರಿ ನ್ಯಾಪ್ ಕಿನ್ ಅನ್ನು ಬಿಡುಗಡೆ ಮಾಡಲಾಯಿತು.‌ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಯೋಜನೆಯಡಿ ಜನೌಷಧಿ ಸುವಿಧಾ ಸ್ಯಾನಿಟರಿ ನ್ಯಾಪ್ ಕಿನ್ ಅನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ದೇಶದ ಶೇ.58‌ರಷ್ಟು‌ ಹೆಣ್ಣು ಮಕ್ಕಳು ಮಾತ್ರ ಉತ್ತಮ ಸ್ಯಾನಿಟರಿ ನ್ಯಾಪ್ ಕಿನ್ ಬಳಸುತ್ತಿದ್ದಾರೆ, ಮುಂಬೈ,ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ಶೇ.72 ಉತ್ತಮ ಗುಣಮಟ್ಟದ ನ್ಯಾಪ್ ಕಿನ್ ಬಳಕೆ ಮಾಡುತ್ತಿದ್ದಾರೆ ಎಂದು ರಾಷ್ಟೀಯ ಕುಟುಂಬ ಸರ್ವೆ ವರದಿ‌ ಹೇಳಿದೆ,ಬಾಕ ಶೇ.48 ಮಹಿಳೆಯರು ಆರ್ಥಿಕ ದುರ್ಬಲತೆ,ಬಡತನದಿಂದ ಈ ಸೌಲಭ್ಯದಿಂದ‌ ವಂಚಿತರಾಗಿದ್ದಾರೆ,ಪರಿಣಾಮ ಸ್ವಾಸ್ಥ್ಯ, ಸ್ವಚ್ಚತೆ,ಸುವಿಧಾ ಸಮಸ್ಯೆ ಎದುರಾಗುತ್ತಿತ್ತು.ಹಾಗಾಗಿ ನಾವು ಸುವಿಧಾ ಹೆಸರಿನಲ್ಲಿಯೇ ನ್ಯಾಪ್ ಕಿನ್ ಬಿಡುಗಡೆ ಮಾಡಿದ್ದೇವೆ ಎಂದರು.

ಕಟ್ಟಡ ಕಾರ್ಮಿಕರು,ಸಫಾಯಿ ಕರ್ಮಚಾರಿಗಳು, ಗಾರ್ಮೆಂಟ್ಸ್ ನೌಕರರು,ಕೂಲಿ ಕಾರ್ಮಿಕರಿಗೆ ಇದು ಸಿಗುತ್ತಿಲ್ಲ,ದುಬಾರಿ ದರ ಕಾರಣ, ಹಾಗಾಗಿ ನಾವು ಕಡಿಮೆ ದರಕ್ಕೆ ಈ ನ್ಯಾಪ್ ಕಿನ್ ಬಿಡುಗಡೆ ಮಾಡಿದ್ದೇವೆ ಎಂದರು.

ಸಧ್ಯ ದೇಶದ ಮಾರುಕಟ್ಟೆಯಲ್ಲಿರುವ ಗುಣಮಟ್ಟದ ಸ್ಯಾನಿಟರಿ ನ್ಯಾಪ್‌ಕಿನ್ ಬೆಲೆ 38 ರೂ. ಇದೆ, ಪ್ರತಿ ನ್ಯಾಪ್ ಕಿನ್ ಗೆ 10 ರೂ.ಆಗಲಿದೆ. ಅಲ್ಲದೇ ಬಯೋ ಡಿಗ್ರೇಡಬಲ್ ನ್ಯಾಪ್ ಕಿನ್ ಯಾವುದೂ ಇಲ್ಲ, ಹಾಗಾಗಿ ನಾವು ದೇಶದಲ್ಲೇ ಮೊದಲ ಬಯೋ ಡಿಗ್ರೆಡಬಲ್ ಸ್ಯಾನಿಟರಿ ನ್ಯಾಪ್ ಕಿನ್ ಅನ್ನು ಇಂದು ಬಿಡುಗಡೆ ಮಾಡಿದ್ದೇವೆ.ಕೇವಲ 10 ರೂ.ಗೆ ನಾಲ್ಕು ನ್ಯಾಪ್ ಕಿನ್ ಸಿಗಲಿದೆ,ಡಬ್ಲ್ಯಹೆಚ್ಒಜಿಎಂಪಿಗೆ ಅನುಸಾರವಾಗಿ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ ಎಂದರು.

ನಮ್ಮದೇಶದಲ್ಲಿ ಪ್ರತಿ ವರ್ಷ 1.13 ಲಕ್ಷ ಟನ್ 12.3 ಬಿಲಿಯನ್ ನ್ಯಾಪ್ ಕಿನ್ ಬಳಕೆ ಮಾಡಲಾಗುತ್ತಿದೆ ಇದು 500 ವರ್ಷ ಆದರೂ ಡಿ ಕಂಪೋಸ್ ಆಗಲ್ಲ, ಹಾಗಾಗಿ ನಾವು ಹೊಸ  ಆಕ್ಸೋ ಬಯೋ ಡಿಗ್ರೆಡಬಲ್ ತಂತ್ರಜ್ಞಾನದಿಂದ ನ್ಯಾಪ್ ಕಿನ್ ತಯಾರಿ ಮಾಡಿದ್ದೇವೆ, ಇದು ಕೇವಲ 3-6 ತಿಂಗಳಿನಲ್ಲಿ ಬಯೋ ಡಿಗ್ರೆಡಬಲ್ ಆಗಲಿದೆ ಎಂದರು.

ಜುಲೈ 19 ರೊಳಗಿನ ದೇಶಾದ್ಯಂತ ಎಲ್ಲಾ ಮೂಲೆ ಮೂಲೆಗಳಲ್ಲಿಯೂ ಈ ಸುವಿಧಾ ನ್ಯಾಪ್ ಕಿನ್ ಲಭ್ಯವಾಗಲಿದೆ ಎನ್ನುವ ಭರವಸೆ ನಮ್ಮ ಅಧಿಕಾರಿಗಳಿಂದ‌ ಸಿಕ್ಕಿದೆ.ಈಗಾಗಲೇ ನ್ಯಾಪ್ ಕಿನ್ ಮಾರುಕಟ್ಟೆಯಲ್ಲಿದೆ, ಆದರೆ ಎಲ್ಲಾ ಕಡೆ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Please follow and like us:
0
http://bp9news.com/wp-content/uploads/2018/06/WhatsApp-Image-2018-06-05-at-1.18.48-PM-1-1024x682.jpeghttp://bp9news.com/wp-content/uploads/2018/06/WhatsApp-Image-2018-06-05-at-1.18.48-PM-1-150x150.jpegBP9 Bureauಪ್ರಮುಖರಾಮನಗರಬೆಂಗಳೂರು: ದೇಶದ ಶೇ.48 ರಷ್ಟು ಮಹಿಳೆಯರು ದುಬಾರಿ ದರ ಎನ್ನುವ ಕಾರಣಕ್ಕೆ ಉತ್ತಮ ಸ್ಯಾನಿಟರಿ ನ್ಯಾಪ್ ಕಿನ್ ಬಳಕೆಯಿಂದ ವಂಚಿತರಾಗಿದ್ದವರನ್ನು ಉದ್ದೇಶವಾಗಿಟ್ಟುಕೊಂಡು ಕಡಿಮೆ ದರದ ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ. ದೇಶದ ಮೊದಲ ಬಯೋ ಡಿಗ್ರೇಡಬಲ್‌ ಸ್ಯಾನಿಡರಿ ನ್ಯಾಪ್ ಕಿನ್ ಅನ್ನು ಬಿಡುಗಡೆ ಮಾಡಲಾಯಿತು.‌ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ...Kannada News Portal