ರಾಮನಗರ : ರಾಮನಗರ ಚನ್ನಪಟ್ಟಣ ಅವಳಿ ನಗರ ಅಭಿವೃದ್ಧಿಗೆ ನಾನು ಬದ್ದ. ಚುನಾವಣೆ ವೇಳೆ ನಾನು ಕ್ಷೇತ್ರಕ್ಕೆ ಬರದಿದ್ದರೂ ನನ್ನನ್ನ ಗೆಲ್ಲಿಸಿದ್ದಾರೆ. ಎರಡು ಕ್ಷೇತ್ರಗಳ ಜನರ ಋಣ ನನ್ನ ಮೇಲೆ ಇದೆ. ರಾಮನಗರಕ್ಕೂ ನನಗೂ ತಾಯಿ ಮಗನ ಸಂಬಂಧ. ರಾಜಕೀಯವಾಗಿ ನನ್ನನ್ನ ಈ ಕ್ಷೇತ್ರದ ಜನತೆ ಬೆಳೆಸಿದ್ದಾರೆ ಎಂದು ನಿಯೋಜಿತ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ತಿಳಿಸಿದರು.

ರಾಮನಗರದಲ್ಲಿ  ಮಾತನಾಡಿದ ಅವರು, ಮುಖ್ಯಮಂತ್ರಿ ಯಾಗುವ ವೇಳೆ ಇದೆ ಪ್ರಥಮ ಭಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಅವರು ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು. ನಂತರ ಚರ್ಚ್ ಹಾಗೂ ದರ್ಗಾಗೆ ಭೇಟಿ ನೀಡಿದರು.


ಇದಕ್ಕೂ ಮೊದಲು ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರ ನೂಕುನುಗ್ಗಲು ಕಂಡು ಬಂತು. ಹೆಲಿಪ್ಯಾಡ್ ಆವರಣದಲ್ಲಿ ಹೆಚ್ಡಿಕೆಗೆ ಮುತ್ತಿಗೆ ಹಾಕಿದ್ರು. ಈವೇಳೆ ಮಾತನಾಡಿದ ಅವರು, ಸಮಯದ ಅಭಾವದಿಂದ ಕ್ಷೇತ್ರದ ಜನತೆ ಜೊತೆ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಮತ್ತೊಂದು ದಿನ ಕ್ಷೇತ್ರಕ್ಕೆ ಆಗಮಿಸಿ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲಾಗುವುದು ಎಂದರು.


ಹಾಗೆಯೇ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಸಂಪರ್ಕಕ್ಕೆ ಸಿಗದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ ಡಿಕೆ, ಈ ಬಗ್ಗೆ ನನಗೆಗೂ ಗೊತ್ತಿಲ್ಲ. ಊಹಾಪೋಹಗಳ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದರು.

 

 

Please follow and like us:
0
http://bp9news.com/wp-content/uploads/2018/05/Karnatakada-Miditha-76.jpeghttp://bp9news.com/wp-content/uploads/2018/05/Karnatakada-Miditha-76-150x150.jpegBP9 Bureauಪ್ರಮುಖರಾಜಕೀಯರಾಮನಗರರಾಮನಗರ : ರಾಮನಗರ ಚನ್ನಪಟ್ಟಣ ಅವಳಿ ನಗರ ಅಭಿವೃದ್ಧಿಗೆ ನಾನು ಬದ್ದ. ಚುನಾವಣೆ ವೇಳೆ ನಾನು ಕ್ಷೇತ್ರಕ್ಕೆ ಬರದಿದ್ದರೂ ನನ್ನನ್ನ ಗೆಲ್ಲಿಸಿದ್ದಾರೆ. ಎರಡು ಕ್ಷೇತ್ರಗಳ ಜನರ ಋಣ ನನ್ನ ಮೇಲೆ ಇದೆ. ರಾಮನಗರಕ್ಕೂ ನನಗೂ ತಾಯಿ ಮಗನ ಸಂಬಂಧ. ರಾಜಕೀಯವಾಗಿ ನನ್ನನ್ನ ಈ ಕ್ಷೇತ್ರದ ಜನತೆ ಬೆಳೆಸಿದ್ದಾರೆ ಎಂದು ನಿಯೋಜಿತ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ತಿಳಿಸಿದರು. ರಾಮನಗರದಲ್ಲಿ  ಮಾತನಾಡಿದ ಅವರು, ಮುಖ್ಯಮಂತ್ರಿ ಯಾಗುವ ವೇಳೆ ಇದೆ ಪ್ರಥಮ ಭಾರಿಗೆ ಕ್ಷೇತ್ರಕ್ಕೆ ಆಗಮಿಸಿದ...Kannada News Portal