ರಾಮನಗರ : ಕಾಂಗ್ರೆಸ್​ ಅಭ್ಯರ್ಥಿ ಎಚ್ ಎಂ ರೇವಣ್ಣಗೆ ಮತ ಹಾಕುವಂತೆ ಮುಸ್ಲಿಂ ಮತದಾರರಿಗೆ ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ.  ಮುಸ್ಲಿಂ ಧರ್ಮ ಗುರು ಫಾರುಕ್ ಮುಲ್ಲಾ ಎಂಬುವವರು  ಫತ್ವಾದಲ್ಲಿ ಕಾಂಗ್ರೆಸ್​ ಕ್ರಮ ಸಂಖ್ಯೆ 3 ಇರುವ ರೇವಣ್ಣಗೆ  ನೀವು ಮತ ಹಾಕುವಂತೆ ಆದೇಶ ಹೊರಡಿಸಿದ್ದಾರೆ.  ಚುನಾವಣೆ ಹತ್ತಿರ ಬರುತ್ತಿದ್ದಂತೆ  ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಸಹ ಒಂದೇ ಆಗಿವೆ. ಕೋಮುವಾದಿ ಬಿಜೆಪಿಯನ್ನ ಬೆಂಬಲಿಸದಂತೆ ಸೂಚಿಸಲಾಗಿದೆ.

ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ನಂತರ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಕ್ಷೇತ್ರದಲ್ಲಿ ಇದೀಗ ಒಕ್ಕಲಿಗ ಮತದಾರರನ್ನು ಬಿಟ್ರೆ ಮುಸ್ಲಿಂರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ.

ರೇವಣ್ಣನಿಗೆ ಮತ ಹಾಕುವಂತೆ ಮುಸ್ಲಿಂ ಸಮುದಾಯಕ್ಕೆ  ಮೌಲ್ವಿಯಿಂದ  ಆದೇಶ ಹೊರಡಿಸಿ  ಆ ಮೂಲಕ   ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ  ಮೌಲ್ವಿ  ಹೇಳಿರುವ ವಿಡಿಯೋ ಇದೀಗ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.

 

Please follow and like us:
0
http://bp9news.com/wp-content/uploads/2018/05/Karnatakada-Miditha-26-1024x576.jpeghttp://bp9news.com/wp-content/uploads/2018/05/Karnatakada-Miditha-26-150x150.jpegBP9 Bureauರಾಮನಗರರಾಮನಗರ : ಕಾಂಗ್ರೆಸ್​ ಅಭ್ಯರ್ಥಿ ಎಚ್ ಎಂ ರೇವಣ್ಣಗೆ ಮತ ಹಾಕುವಂತೆ ಮುಸ್ಲಿಂ ಮತದಾರರಿಗೆ ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ.  ಮುಸ್ಲಿಂ ಧರ್ಮ ಗುರು ಫಾರುಕ್ ಮುಲ್ಲಾ ಎಂಬುವವರು  ಫತ್ವಾದಲ್ಲಿ ಕಾಂಗ್ರೆಸ್​ ಕ್ರಮ ಸಂಖ್ಯೆ 3 ಇರುವ ರೇವಣ್ಣಗೆ  ನೀವು ಮತ ಹಾಕುವಂತೆ ಆದೇಶ ಹೊರಡಿಸಿದ್ದಾರೆ.  ಚುನಾವಣೆ ಹತ್ತಿರ ಬರುತ್ತಿದ್ದಂತೆ  ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಸಹ ಒಂದೇ ಆಗಿವೆ. ಕೋಮುವಾದಿ ಬಿಜೆಪಿಯನ್ನ ಬೆಂಬಲಿಸದಂತೆ ಸೂಚಿಸಲಾಗಿದೆ. ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ...Kannada News Portal