ರಾಮನಗರ : ಕಾನೂನಿನಲ್ಲಿ ಎಲ್ಲರಿಗೂ ಹೋರಾಟ ಮಾಡಲು ಅವಕಾಶ ಇದೆ.  ಅದೇ ರೀತಿ ಡಿ.ಕೆ. ಶಿವಕುಮಾರ್ ಅವರಿಗೂ ಅವಕಾಶ ಇದೆ. ಅವರಿಗೆ ಇರುವ ದ್ವೇಷದ ರಾಜಕಾರಣ ಸಮಸ್ಯೆಯನ್ನ  ಕಾನೂನು ಹೋರಾಟದಲ್ಲಿ ಬಗೆ ಹರಿಸಿಕೊಳ್ಳುತ್ತಾರೆ. ಪ್ರಸ್ತುತ  ಡಿಕೆಶಿ ರಾಜೀನಾಮೆ ಅವಶ್ಯಕತೆ ಈಗ ಇಲ್ಲ ಆ ಸಮಯ ಬಂದಾಗ ರಾಜೀನಾಮೆ ವಿಚಾರವಾಗಿ ಹೇಳುತ್ತೇನೆ ಎಂದು ರಾಮನಗರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು. ತಾಲ್ಲೂಕಿನ ಪೇಟೆ ಕುರಬರಹಳ್ಳಿಯ ಉದ್ಭವ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಕಾವೇರಿ ನಿರ್ವಹಣೆ ಮಂಡಳಿ ಆದೇಶ ಬರುವ ವರೆಗು ನಾವು ಕಾಯಲು ಆಗುವುದಿಲ್ಲಾ ನಮ್ಮ ರೈತರಿಗೂ ಅನುಕೂಲವಾಗುವಂತೆ ಕೆರೆ ನಾಲೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದ್ದೇನೆ. ಯಾವುದೇ ಕಾನೂನು ಸಮಸ್ಯೆ ಬಂದರು ನಾನು ನೋಡಿಕೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ ಎಂದರು.

ನಮ್ಮ ರೈತರ ಹಿತ ನನಗೆ ಮುಖ್ಯ  ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ  ಅಧಿಕಾರಿಗಳನ್ನ ಭರ್ತಿ ಮಾಡುತ್ತೇನೆ. ನಾನು ಅಧಿಕಾರ ಪಡೆದು 25 ದಿನ ಮಾತ್ರ ಆಗಿದೆ, ರಾಮನಗರದಲ್ಲಿ ಮಾತ್ರ ಸಮಸ್ಯೆ ಇಲ್ಲಾ ರಾಜ್ಯದ ಎಲ್ಲಾ ಕಡೆ ಹಲವು ಸಮಸ್ಯೆಗಳಿವೆ.

ನನ್ನ ಗಮನ ಈಗ ಬಜೆಟ್ ಮಂಡನೆ ಕಡೆ ಇದೆ. ಮುಂದಿನ ತಿಂಗಳು ಐದನೇ ತಾರೀಖಿನಂದು ಬಜೆಟ್ ಮಂಡನೆ ಮಾಡಬೇಕಿದೆ. ಅದಕ್ಕಾಗಿ ಅಧಿಕಾರಿಗಳ ಸರಣಿ ಸಭೆಗಳನ್ನು ಹಮ್ಮಿಕೊಂಡಿದ್ದೇನೆ. ಬಜೆಟ್ ಮುಗಿದ ನಂತರ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಒಂದೂಂದು ದಿನ ಸಂಪೂರ್ಣವಾಗಿ  ಇದ್ದು, ಕ್ಷೇತ್ರದ ಜನರ ಎಲ್ಲ ಸಮಸ್ಯೆಗಳನ್ನ ಬಗೆಹರಿಸುತ್ತೇನೆ ಎಂದರು.

Please follow and like us:
0
http://bp9news.com/wp-content/uploads/2018/06/WhatsApp-Image-2018-06-21-at-4.05.51-PM-1024x562.jpeghttp://bp9news.com/wp-content/uploads/2018/06/WhatsApp-Image-2018-06-21-at-4.05.51-PM-150x150.jpegBP9 Bureauಪ್ರಮುಖರಾಜಕೀಯರಾಮನಗರರಾಮನಗರ : ಕಾನೂನಿನಲ್ಲಿ ಎಲ್ಲರಿಗೂ ಹೋರಾಟ ಮಾಡಲು ಅವಕಾಶ ಇದೆ.  ಅದೇ ರೀತಿ ಡಿ.ಕೆ. ಶಿವಕುಮಾರ್ ಅವರಿಗೂ ಅವಕಾಶ ಇದೆ. ಅವರಿಗೆ ಇರುವ ದ್ವೇಷದ ರಾಜಕಾರಣ ಸಮಸ್ಯೆಯನ್ನ  ಕಾನೂನು ಹೋರಾಟದಲ್ಲಿ ಬಗೆ ಹರಿಸಿಕೊಳ್ಳುತ್ತಾರೆ. ಪ್ರಸ್ತುತ  ಡಿಕೆಶಿ ರಾಜೀನಾಮೆ ಅವಶ್ಯಕತೆ ಈಗ ಇಲ್ಲ ಆ ಸಮಯ ಬಂದಾಗ ರಾಜೀನಾಮೆ ವಿಚಾರವಾಗಿ ಹೇಳುತ್ತೇನೆ ಎಂದು ರಾಮನಗರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು. ತಾಲ್ಲೂಕಿನ ಪೇಟೆ ಕುರಬರಹಳ್ಳಿಯ ಉದ್ಭವ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ...Kannada News Portal