ರಾಮನಗರ : ತಾಲೂಕಿನ  ಬಿಡದಿ ಹೋಬಳಿ ಹೆಚ್.ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ರಾಮಕೃಷ್ಣರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ಚನ್ನಿಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ – ಉಪಾಧ್ಯಕ್ಷ  ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಡಿ.ರಾಮಕೃಷ್ಣರೆಡ್ಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚನ್ನಿಗಪ್ಪ ಅವರನ್ನು  ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ  ಚುನಾವಣಾಧಿಕಾರಿ ವೈ ವೆಂಕಟೇಶ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷ ಡಿ. ರಾಮಕೃಷ್ಣಯ್ಯ ಮಾತನಾಡಿ, ಎಲ್ಲಾ ಸದಸ್ಯರ ಸಹಕಾರದಿಂದ ನನ್ನನ್ನು ಅವಿರೋಧ ಆಯ್ಕೆ ಮಾಡಿದ್ದಾರೆ. ಸದಸ್ಯರ ವಿಶ್ವಾಸ ಗಳಿಸಿ ಸಂಘಕ್ಕೆ ಮತ್ತು ಸದಸ್ಯರ ವಿಶ್ವಾಸಕ್ಕೆ ಧಕ್ಕೆಯಾಗದ ರೀತಿ ಕರ್ತವ್ಯ ನಿರ್ವಹಿಸುತ್ತೇನೆ. ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ನಿದರ್ೇಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸದಸ್ಯರ ಸಹಕಾರ ಪಡೆದು ಸಂಘದ ಅಭಿವೃದ್ದಿ ಮತ್ತು ಸದಸ್ಯರ ಆರ್ಥಿಕ ಬೆಳವಣಿಗೆಗೆ ಶ್ರಮಿಸುತ್ತೇನೆ. ಸಂಘವನ್ನು ಮಾದರಿಯನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.

ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ 1000 ಲೀಟರ್ ಹಾಲು ಶೇಖರಿಸಲಾಗುತ್ತಿದ್ದು, 12 ಲಕ್ಷ ನಿವ್ವಳ ಲಾಭದಲ್ಲಿದೆ. 76 ಜನ ಷೇರುದಾರರಿರುವ ಈ ಸಂಘದಲ್ಲಿ ಕಾಲಕಾಲಕ್ಕೆ ಬೋನಸ್, ಸೇರಿದಂತೆ ಇನ್ನಿತರ ಸೌಲಭ್ಯ ದೊರಕಿಸಿಕೊಡಲು ಶ್ರಮಿಸುವುದಾಗಿ ಹೇಳಿದರು. 2018-2023ರ ಅವಧಿಯ ಐದು ವರ್ಷದ ಅವಧಿಯ ಆಡಳಿತ ಮಂಡಳಿಗೆ ಸೆ-6 ರಂದು ಚುನಾವಣೆ ನಡೆದಿತ್ತು.  ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಶುಕ್ರವಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ನೂತನ ಅಧ್ಯಕ್ಷ – ಉಪಾಧ್ಯಕ್ಷರನ್ನು ಸಂಘದ  ನಿರ್ದೇಶಕರಾದ ನರಸಿಂಹರೆಡ್ಡಿ, ದೇವರಾಜು, ರಾಜಣ್ಣ, ಜಯಮ್ಮ, ಚೌಡಮ್ಮ, ಚಂದ್ರಶೇಖರ್, ಪ್ರಕಾಶ್ರೆಡ್ಡಿ, ಶಿವಲಿಂಗಯ್ಯ, ಮುನಿರಾಜು, ಗ್ರಾಮದ ಮುಖಂಡರಾದ ಚಂದ್ರಶೇಖರ್, ರಾಮಾಂಜನಿ, ನಾಗೇಶ್, ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗೋಪಿ ಮತ್ತಿತ್ತರರು ಅಭಿನಂದಿಸಿದರು.

Please follow and like us:
0
http://bp9news.com/wp-content/uploads/2018/09/WhatsApp-Image-2018-09-14-at-2.39.54-PM-1024x768.jpeghttp://bp9news.com/wp-content/uploads/2018/09/WhatsApp-Image-2018-09-14-at-2.39.54-PM-150x150.jpegBP9 Bureauರಾಮನಗರರಾಮನಗರ : ತಾಲೂಕಿನ  ಬಿಡದಿ ಹೋಬಳಿ ಹೆಚ್.ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ರಾಮಕೃಷ್ಣರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ಚನ್ನಿಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ - ಉಪಾಧ್ಯಕ್ಷ  ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಡಿ.ರಾಮಕೃಷ್ಣರೆಡ್ಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚನ್ನಿಗಪ್ಪ ಅವರನ್ನು  ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ  ಚುನಾವಣಾಧಿಕಾರಿ ವೈ ವೆಂಕಟೇಶ್ ಅವಿರೋಧ ಆಯ್ಕೆಯನ್ನು ಘೋಷಿಸಿದರು. var domain = (window.location...Kannada News Portal