ರಾಮನಗರ :  ಜಿಲ್ಲೆಯ ಮಾವು ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಮಾವು ಮೆಗಾಮಂಡಿ ತೆರೆಯಲು ಕುಮಾರಸ್ವಾಮಿ ಭರವಸೆಯ ಮರೆಗೆ ಸ್ಥಳ ಗುರುತಿಸುವ ಕೆಲಸ ಮಾಡಲಾಗಿದ್ದು, ಬಜೆಟ್ ಮಂಡನೆಯಲ್ಲಿ ಅನುಮೋದನೆ ಸಿಗಲಿದೆ ಎಂದು ಎಪಿಎಂಸಿ ನಿರ್ದೇಶಕ ದೊರೆಸ್ವಾಮಿ ತಿಳಿಸಿದರು.

ನಗರದ ಎಪಿಎಂಸಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಮನಗರ ಚನ್ನಪಟ್ಟಣ ಭಾಗದ ಮಾವುಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹೊಸ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವ ಸರ್ಕಾರ ಈಗಾಗಲೇ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿದ್ದು, ಈಗಾಗಲೇ ಅವಳಿ ನಗರದ ಮಧ್ಯೆ ಜಾಗ ಗುರುತಿಸಿದ್ದು, ಸದ್ಯದಲ್ಲಿ ಕಾಮಗಾರಿ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಎಂ.ಪುಟ್ಟರಾಮಯ್ಯ ಮಾತನಾಡಿ ಎಪಿಎಂಸಿಯಲ್ಲಿ ಯಾವುದೇ ಬಿಳಿ ಚೀಟಿ ನೀಡುವ ಪದ್ದತಿಯಿಲ್ಲ, ಕೆಲವು ರೈತ ಸಂಘಟನೆಯ ಮುಖಂಡರು ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲಾರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ವರ್ತಕ ರೈತರಿಗೆ ಬಿಳಿ ಚೀಟಿ ನೀಡಿದರೆ ಸಮಿತಿಗೆ ದೂರು ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಎಪಿಎಂಸಿ ವತಿಯಿಂದ ಈಗಾಗಲೇ ಹಲವು ಅನುಕೂಲ ಮಾಡಿಕೊಡಲಾಗಿದೆ. ರೈತರು ಮತ್ತು ವರ್ತಕರ ಮಧ್ಯೆ ತೂಕದ ವಿಚಾರವಾಗಿ ಘರ್ಷಣೆ ತಪ್ಪಿಸಲು ಏಳು ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಸ್ಥಾಪಿಸಲಾಗಿದೆ.

ಸುಸಜ್ಜಿತ ರೈತಭವನ ನಿರ್ಮಿಸಲಾಗಿದ್ದು, ಸಿಸಿ ಟಿವಿ ಅಳವಡಿಸಲಾಗಿದೆ. ರೈತರಿಗೆ ಯಾವುದೇ ಅನಾನುಕೂಲವಾಗದಂತೆ ಎಚ್ಚರ ವಹಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ವೆಂಕಟರಂಗಯ್ಯ, ಶಿವಕುಮಾರ್ ಹಾಜರಿದ್ದರು.

Please follow and like us:
0
http://bp9news.com/wp-content/uploads/2018/06/Karnatakada-Miditha-23.jpeghttp://bp9news.com/wp-content/uploads/2018/06/Karnatakada-Miditha-23-150x150.jpegBP9 Bureauಪ್ರಮುಖರಾಮನಗರರಾಮನಗರ :  ಜಿಲ್ಲೆಯ ಮಾವು ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಮಾವು ಮೆಗಾಮಂಡಿ ತೆರೆಯಲು ಕುಮಾರಸ್ವಾಮಿ ಭರವಸೆಯ ಮರೆಗೆ ಸ್ಥಳ ಗುರುತಿಸುವ ಕೆಲಸ ಮಾಡಲಾಗಿದ್ದು, ಬಜೆಟ್ ಮಂಡನೆಯಲ್ಲಿ ಅನುಮೋದನೆ ಸಿಗಲಿದೆ ಎಂದು ಎಪಿಎಂಸಿ ನಿರ್ದೇಶಕ ದೊರೆಸ್ವಾಮಿ ತಿಳಿಸಿದರು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ನಗರದ ಎಪಿಎಂಸಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...Kannada News Portal