ರಾಮನಗರ : ಚನ್ನಪಟ್ಟಣ ಕ್ಷೇತ್ರದಲ್ಲಿ ನನ್ನ ಸೋಲಿಗೆ ಡಿ.ಕೆ.ಶಿವಕುಮಾರ್ ಹಣದ ಹೊಳೆ ಹರಿಸಿದ್ದಾರೆ, ಆ ಹಣದ ಹೊಳೆ ನನ್ನ ಸೋಲಿಗೆ ಕಾರಣವಾಗಬಹುದು. ಹಾಗೆ ಹೆಚ್.ಎಂ.ರೇವಣ್ಣ ಸುಪಾರಿ ಕಿಲ್ಲರ್ ಆದ್ರೆ ಸುಪಾರಿ ಕೊಟ್ಟವರು ಡಿಕೆಶಿ ಬ್ರದರ್ಸ್ ಎಂದು ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಸಿ.ಪಿ.ಯೋಗೀಶ್ವರ್ ಗಂಭೀರ ಆರೋಪ ಮಾಡಿದ್ದಾರೆ.

ರಾಮನಗರದ ಜನಪದ ಲೋಕದ ಬಳಿ ಇರುವ ಖಾಸಗಿ ಹೋಟೆಲ್​​​ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಪಿವೈ ವಿರೋಧ ಪಕ್ಷಗಳು ನನ್ನ ಸೋಲಿಗೆ ಬಹಳ ತಂತ್ರಗಾರಿಕೆ ನಡೆಸಿದ್ದಾರೆ, ಕ್ಷೇತ್ರದಲ್ಲಿ ನನಗೆ ಹೆಚ್.ಡಿ.ಕೆಗೆ   ನೇರ ಸ್ಪರ್ಧೆಯಾದ್ರು ಅವರ ಬೆನ್ನಿಗೆ ಡಿ.ಕೆ.ಶಿವಕುಮಾರ್ ನಿಂತು ಹಣದ ಹೊಳೆ ಹರಿಸಿದ್ದಾರೆ ಎಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ  ಹೆಚ್.ಎಂ.ರೇವಣ್ಣ ಸುಪಾರಿ ಕಿಲ್ಲರ್ ಆದ್ರೆ ಸುಪಾರಿ ಕೊಟ್ಟವರು ಡಿಕೆಶಿ ಬ್ರದರ್ಸ್ ಎಂದು ಲೇವಡಿ ಮಾಡಿದರು.

ಈ ಚುನಾವಣೆಯಲ್ಲಿ ಲಕ್ಷಾಂತರ ಹಣ ಕೊಟ್ಟು ನನ್ನ ಜತೆಗೆ ಇದ್ದ ಹಲವು ಮುಖಂಡರನ್ನ ಡಿಕೆಶಿ ಖರೀದಿ ಮಾಡಿದ್ದಾರೆ, ಇಷ್ಟೆ ಅಲ್ಲಾ ಕೆಪಿಎಸ್ಸಿ ಸದಸ್ಯ ರಘುನಂದನ್, ರಾಮಣ್ಣ ಅವರು ಕೂಡ ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡಿದ್ದಾರೆ, ಇವರ ಬಗ್ಗೆ ದಾಖಲೆ ಸಮೇತ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು. ಡಿಕೆಶಿ ರಾಜಕೀಯ ತಂತ್ರಗಾರಿಕೆಗೆ ನಾನು ಬಲಿಯಾಗಿದ್ದೇನೆ, ಅಭಿವೃದ್ಧಿ ವಿಚಾರದಲ್ಲಿ ಡಿಕೆಶಿಗೆ ಸವಾಲು ಕೊಡುತ್ತೇನೆ, ಆದ್ರೆ ಹಣದಲ್ಲಿ ನನಗೆ ಸವಾಲು ಕೊಡಲು ಸಾಧ್ಯವಿಲ್ಲ ಎಂದರು. ನಾನು ಅಲ್ಪ ಮತಗಳಿಂದ  ಗೆಲ್ಲಬಹುದು ಇಲ್ಲ ಸೋಲಲು ಬಹುದು ಎಂದು ತಮ್ಮ ಗೆಲವು ಸೋಲಿನ ಬಗ್ಗೆ ತಿಳಿಸಿದರು. ರಾಜ್ಯದಲ್ಲಿ ಬಿಜೆಪಿ ಪಕ್ಷ ಎಷ್ಟು ಸ್ಥಾನಗಳು ಬರಬಹುದು ಎನ್ನುವ ಪ್ರಶ್ನೆಗೆ, ‘ನನಗೆ ಇಲ್ಲಿ ಬೆವರು ಬರುತ್ತಿದೆ ಇನ್ನು ರಾಜ್ಯದ ಬಗ್ಗೆ ನಾನು ಹೇಗೆ ಹೇಳಲಿ’ ಎಂದಿದ್ದಾರೆ.

Please follow and like us:
0
http://bp9news.com/wp-content/uploads/2018/05/Karnatakada-Miditha-55.jpeghttp://bp9news.com/wp-content/uploads/2018/05/Karnatakada-Miditha-55-150x150.jpegBP9 Bureauಪ್ರಮುಖರಾಜಕೀಯರಾಮನಗರರಾಮನಗರ : ಚನ್ನಪಟ್ಟಣ ಕ್ಷೇತ್ರದಲ್ಲಿ ನನ್ನ ಸೋಲಿಗೆ ಡಿ.ಕೆ.ಶಿವಕುಮಾರ್ ಹಣದ ಹೊಳೆ ಹರಿಸಿದ್ದಾರೆ, ಆ ಹಣದ ಹೊಳೆ ನನ್ನ ಸೋಲಿಗೆ ಕಾರಣವಾಗಬಹುದು. ಹಾಗೆ ಹೆಚ್.ಎಂ.ರೇವಣ್ಣ ಸುಪಾರಿ ಕಿಲ್ಲರ್ ಆದ್ರೆ ಸುಪಾರಿ ಕೊಟ್ಟವರು ಡಿಕೆಶಿ ಬ್ರದರ್ಸ್ ಎಂದು ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಸಿ.ಪಿ.ಯೋಗೀಶ್ವರ್ ಗಂಭೀರ ಆರೋಪ ಮಾಡಿದ್ದಾರೆ. ರಾಮನಗರದ ಜನಪದ ಲೋಕದ ಬಳಿ ಇರುವ ಖಾಸಗಿ ಹೋಟೆಲ್​​​ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಪಿವೈ ವಿರೋಧ ಪಕ್ಷಗಳು ನನ್ನ ಸೋಲಿಗೆ ಬಹಳ ತಂತ್ರಗಾರಿಕೆ...Kannada News Portal