ರಾಮನಗರ : ಡಿಸೇಲ್ ದರ ಏರಿಕೆ ಹಿನ್ನೆಲೆಯಲ್ಲಿ ವಾಹನದ ಬಿಡಿಭಾಗಗಳು ಸೇರಿದಂತೆ ನಷ್ಠದಲ್ಲಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಪ್ರಯಾಣ ದರ ಏರಿಕೆ ಮಾಡಲು ಕಸರತ್ತು ನಡೆಸಿ ವಿಫಲವಾಗಿದ್ದ ಹಿನ್ನಲೆಯಲ್ಲಿ ಈಗ ಹೊಸದೊಂದು ರೀತಿಯಲ್ಲಿ ದರ ಏರಿಕೆ ಮಾಡಿದೆ.

ಮದುವೆ, ಪ್ರವಾಸ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ನಿಗಮದ ಬಸ್ ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ನೀಡುವ ಬಸ್ ಗಳಿಗೆ ಪ್ರತಿ ಕಿ.ಮೀ ಗೆ ಎರಡು ರೂ ಗಳಂತೆ ಏರಿಕೆ ಮಾಡಿದೆ.ವಿವಿಧ ಮಾದರಿಯ ಬಸ್ ಗಳಿಗೆ ವಿವಿಧ ರಿತಿಯ ದರ ನಿಗಧಿಗೊಳಿಸಿ ಆದೇಶ ಹೊರಡಿಸಿದೆ.

ದೀಪಾವಳಿ ಹಬ್ಬದ ದಿನ ಹೊರಡಿಸಿರುವ ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 795/2018 ರಂತೆ ರಾಜ್ಯದೊಳಗೆ  55 ಆಸನಗಳ ಕರ್ನಾಟಕ ಸಾರಿಗೆ ವಾಹನಕ್ಕೆ ಪ್ರತಿ ಕಿ.ಮೀ ಗೆ ಈ ಹಿಂದೆ ಇದ್ದ 35 ರೂಗೆ ಬದಲಾಗಿ 37 ರೂ ನಿಗಧಿಗೊಳಿಸಿದೆ. ಅಂತರ್ ರಾಜ್ಯ ಪ್ರವಾಸಕ್ಕೆ 39 ರೂ ನಿಗಧಿಗೊಳಿಸಿದೆ.

ಈ ಆದೇಶ ನ-11 ರಿಂದ ಜಾರಿಗೆ ಬರಲಿದ್ದು, ನ-7 ಕ್ಕೆ ಮೊದಲು ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದರೆ ಅದಕ್ಕೆ ಅನ್ವಯಿಸುವುದಿಲ್ಲ ಎಂದು ನಿಗಮದ ಆದೇಶದಲ್ಲಿ ತಿಳಿಸಲಾಗಿದೆ.

Please follow and like us:
0
http://bp9news.com/wp-content/uploads/2018/11/ksrtc-1.jpghttp://bp9news.com/wp-content/uploads/2018/11/ksrtc-1-150x150.jpgBP9 Bureauಪ್ರಮುಖರಾಮನಗರರಾಮನಗರ : ಡಿಸೇಲ್ ದರ ಏರಿಕೆ ಹಿನ್ನೆಲೆಯಲ್ಲಿ ವಾಹನದ ಬಿಡಿಭಾಗಗಳು ಸೇರಿದಂತೆ ನಷ್ಠದಲ್ಲಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಪ್ರಯಾಣ ದರ ಏರಿಕೆ ಮಾಡಲು ಕಸರತ್ತು ನಡೆಸಿ ವಿಫಲವಾಗಿದ್ದ ಹಿನ್ನಲೆಯಲ್ಲಿ ಈಗ ಹೊಸದೊಂದು ರೀತಿಯಲ್ಲಿ ದರ ಏರಿಕೆ ಮಾಡಿದೆ. ಮದುವೆ, ಪ್ರವಾಸ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ನಿಗಮದ ಬಸ್ ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ನೀಡುವ ಬಸ್ ಗಳಿಗೆ ಪ್ರತಿ ಕಿ.ಮೀ ಗೆ ಎರಡು ರೂ ಗಳಂತೆ ಏರಿಕೆ ಮಾಡಿದೆ.ವಿವಿಧ ಮಾದರಿಯ ಬಸ್...Kannada News Portal