ಚನ್ನಪಟ್ಟಣ : ಸಾಮಾಜಿಕ ಕಳಕಳಿಯುಳ್ಳ ಸಂಘ ಸಂಸ್ಥೆಗಳು ತಮ್ಮ ಲಾಭದ ಹಣದಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ನಗರಸಭಾ ಅಧ್ಯಕ್ಷೆ ಅಧ್ಯಕ್ಷೆ ನಜ್ಮುನ್ನೀಸಾ ಅಭಿಪ್ರಾಯಪಟ್ಟರು.

ನಗರಸಭೆ ಆವರಣದಲ್ಲಿ ಉಜ್ಜೀವನ್ ಫೈನಾನ್ಷಿಯಲ್ ಸರ್ವೀಸಸ್‌ ಲಿಮಿಟೆಡ್ ಪರಿಣಾಮ್ ಫೌಂಡೇಶನ್ ಸಹಯೋಗದಲ್ಲಿ ಚನ್ನಪಟ್ಟಣದ ನಗರಸಭೆಗೆ ಮೊಬೈಲ್ ವಾಟರ್ ಟ್ಯಾಂಕರ್ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ಮಾಡುತ್ತಿರುವ  ಉಜ್ಜೀವನ್ ತಾಲ್ಲೂಕಿನ ಹಲವು ಕಡೆ ಬ್ಯಾಂಕ್ಗಳನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಇಂತಹ ಉಜ್ಜೀವನ್ ಫೈನಾನ್ಷಿಯಲ್ ಸರ್ವೀಸಸ್‌ ಲಿಮಿಟೆಡ್ ನ ಸಮುದಾಯ ಸಂಪರ್ಕ ಕಾರ್ಯಕ್ರಮವಾದ ಉಜ್ಜೀವನ್ ಚೋಟೆ ಕದಂ ಅಡಿ ಸಾರ್ವಜನಿಕರ ಕುಡಿಯುವ ನೀರಿನ ದಾಹವನ್ನು ತಣಿಸುವ ನಿಟ್ಟಿನಲ್ಲಿ ಟ್ಯಾಂಕರ್ ಅನ್ನು ನೀಡಿರುವುದು ಉತ್ತಮವಾದ ಕೆಲಸ ಎಂದರು.

ಚನ್ನಪಟ್ಟಣ ನಗರದಲ್ಲಿ 31 ವಾರ್ಡ್ ಗಳಿದ್ದು, ಒಟ್ಟು 79,000 ಜನಸಂಖ್ಯೆಯನ್ನು ಹೊಂದಿದೆ. ಈ ಪೈಕಿ ಬೇಸಿಗೆ ಸಂದರ್ಭದಲ್ಲಿ ಸುಮಾರು 6 ವಾರ್ಡ ಗಳು ಶುದ್ಧ ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಈ ವಾರ್ಡ್ ಗಳು ಕಲ್ಲುಬಂಡೆಗಳಿಂದ ಕೂಡಿರುವ ಪ್ರದೇಶದಲ್ಲಿರುವುದರಿಂದ ಕೊಳವೆಬಾವಿ ಕೊರೆಯಲು ಹಾಗೂ ಪೈಪ್ಲೈನ್ ಅಳವಡಿಸಲು ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳಿಗೆ ಮೊಬೈಲ್ ವಾಟರ್ ಟ್ಯಾಂಕರ್ ಮೂಲಕವೇ ಕುಡಿಯುವ ನೀರು ಪೂರೈಸಬೇಕಿದೆ. ಈ ಮೊಬೈಲ್ ವಾಟರ್ ಟ್ಯಾಂಕರ್ ಗಳೇ ಇಲ್ಲಿನ ಜನರಿಗೆ ಕುಡಿಯುವ ನೀರಿನ ಮೂಲಗಳಾಗಿವೆ. ಈ ಆರು ವಾರ್ಡ್ ಗಳಲ್ಲಿರುವ ಸುಮಾರು 16,000 ಕುಟುಂಬಗಳಿಗೆ ಮೊಬೈಲ್ ವಾಟರ್ ಟ್ಯಾಂಕರ್ನಿಂದ ಶುದ್ಧ ಕುಡಿಯುವ ನೀರು ದೊರೆತಂತಾಗುತ್ತದೆ ಎಂದು ತಿಳಿಸಿದರು.

ಉಜ್ಜೀವನ್ ಫೈನಾನ್ಷಿಯಲ್ ಸರ್ವಿಸಸ್ ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾ ಸುರೇಶ್ ಈ ಸಂದರ್ಭದಲ್ಲಿ ಮಾತನಾಡಿ “ನಗರಸಭೆಗೆ ನಮ್ಮ ಸಂಸ್ಥೆಯ ವತಿಯಿಂದ ಕುಡಿಯುವ ನೀರು ಪೂರೈಕೆ ಟ್ಯಾಂಕರ್ ಅನ್ನು ಹಸ್ತಾಂತರ ಮಾಡುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸಮಾಜದ ಕಠಿಣವಾದ ಸಮಸ್ಯೆಗಳ ನಿವಾರಣೆಗೆಂದು ನಾವು 2010 ರಲ್ಲಿ ಆರಂಭಿಸಿರುವ ಸಮುದಾಯ ಅಭಿವೃದ್ಧಿ ಯೋಜನೆಯಡಿ ಈ ಸೌಲಭ್ಯವನ್ನು ನೀಡುತ್ತಿದ್ದೇವೆ. ಉಜ್ಜೀವನ್ ಬ್ಯಾಂಕಿನ ಸ್ಥಳೀಯ ಶಾಖೆಗಳ ತಂಡಗಳು ಇಂತಹ ಸಮಾಜ ಸೇವಾ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುತ್ತಿವೆ. ನಾವು ಬ್ಯಾಂಕಿನ ವ್ಯವಹಾರಗಳನ್ನು ನಡೆಸುತ್ತಿರುವ ದೇಶದ 24 ರಾಜ್ಯಗಳಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ” ಎಂದು ತಿಳಿಸಿದರು.

ಪರಿಣಾಮ್ ಫೌಂಡೇಶನ್‌ ನ ಕಾರ್ಯಕಾರಿ ನಿರ್ದೇಶಕಿ ಮಲ್ಲಿಕಾ ಘೋಷ್ ಮಾತನಾಡಿ, ನಮ್ಮ ಈ ಮೌಲ್ಯಾಧಾರಿತವಾದ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅವಕಾಶ ಮಾಡಿಕೊಟ್ಟ ಚನ್ನಪಟ್ಟಣ ನಗರಸಭೆಗೆ ನಾವು ಆಭಾರಿಯಾಗಿದ್ದೇವೆ. ಇಲ್ಲಿನ ಜನರು ಇನ್ನು ಮುಂದೆ ಪ್ರತಿದಿನ ಶುದ್ಧ ಕುಡಿಯುವ ನೀರು ಪಡೆಯಬಹುದಾಗಿದೆ. ಮೂಲಸೌಕರ್ಯ ಮತ್ತು ಸಮಾಜ ಸೇವೆಗಳ ಮೂಲಕ ಜನ ಜೀವನದಲ್ಲಿ ಬದಲಾವಣೆ ತರುವುದರಲ್ಲಿ ಪರಿಣಾಮ್ ನಂಬಿಕೆ ಇಟ್ಟುಕೊಂಡಿದೆ. ಉಜ್ಜೀವನ್ನೊಂದಿಗೆ ಸೇರಿ ಇಂತಹ ಯೋಜನೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವ ಮೂಲಕ ಸಾರ್ವಜನಿಕರಿಗೆ ಸುಸ್ಥಿರವಾದ ಸೌಲಭ್ಯಗಳು ದೊರೆಯುವಂತೆ ಮಾಡಲಿದ್ದೇವೆ” ಎಂದು ತಿಳಿಸಿದರು.

ಉಜ್ಜೀವನ್ ಬ್ಯಾಂಕ್ ಸಮುದಾಯಗಳ ಅಗತ್ಯತೆಗಳನ್ನು ಪೂರೈಸಲೆಂದೇ ಆರಂಭಿಸಲಾಗಿರುವ ಸಮುದಾಯ ಅಭಿವೃದ್ಧಿ ಕಾರ್ಯಕ್ರಮವೇ ಉಜ್ಜೀವನ್ ಚೋಟೆ ಕದಂ. ಇದರ ಮೂಲಕ ಕೈಗೊಳ್ಳುವ ಯೋಜನೆಗಳಲ್ಲಿ ಪ್ರಮುಖವಾಗಿ ಸಾರ್ವಜನಿಕ ಮೂಲಸೌಕರ್ಯ, ಶಿಕ್ಷಣ, ಪರಿಸರ, ಆರೋಗ್ಯ ಮತ್ತು ಸ್ಯಾನಿಟೇಶನ್ ಪ್ರಮುಖವಾಗಿವೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಡಾ.ಆನಂದ ಸಿ. ಕಲ್ಲೋಳಿಕರ್, ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೆ.ಎಂ.ಚೈತನ್ಯ, ನಗರಸಭಾ ಉಪಾಧ್ಯಕ್ಷೆ ಸರಳಾ ಸೋಮಶೇಖರ್ ಮತ್ತು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಮು, ನಗರಸಭಾ ಸದಸ್ಯ ಉಮಾಶಂಕರ್, ಉಜ್ಜೀವನ್ ಬ್ಯಾಂಕ್ ಸಿಬ್ಬಂದಿ ಹಾಗೂ ನಗರಸಭಾ ಸಿಬ್ಬಂದಿ ಮತ್ತಿತರು ಹಾಜರಿದ್ದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-28-at-1.06.13-PM-1024x680.jpeghttp://bp9news.com/wp-content/uploads/2018/05/WhatsApp-Image-2018-05-28-at-1.06.13-PM-150x150.jpegBP9 Bureauರಾಮನಗರಚನ್ನಪಟ್ಟಣ : ಸಾಮಾಜಿಕ ಕಳಕಳಿಯುಳ್ಳ ಸಂಘ ಸಂಸ್ಥೆಗಳು ತಮ್ಮ ಲಾಭದ ಹಣದಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ನಗರಸಭಾ ಅಧ್ಯಕ್ಷೆ ಅಧ್ಯಕ್ಷೆ ನಜ್ಮುನ್ನೀಸಾ ಅಭಿಪ್ರಾಯಪಟ್ಟರು. ನಗರಸಭೆ ಆವರಣದಲ್ಲಿ ಉಜ್ಜೀವನ್ ಫೈನಾನ್ಷಿಯಲ್ ಸರ್ವೀಸಸ್‌ ಲಿಮಿಟೆಡ್ ಪರಿಣಾಮ್ ಫೌಂಡೇಶನ್ ಸಹಯೋಗದಲ್ಲಿ ಚನ್ನಪಟ್ಟಣದ ನಗರಸಭೆಗೆ ಮೊಬೈಲ್ ವಾಟರ್ ಟ್ಯಾಂಕರ್ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ಮಾಡುತ್ತಿರುವ  ಉಜ್ಜೀವನ್ ತಾಲ್ಲೂಕಿನ ಹಲವು ಕಡೆ ಬ್ಯಾಂಕ್ಗಳನ್ನು ತೆರೆದು ಗ್ರಾಹಕರಿಗೆ...Kannada News Portal