ರಾಮನಗರ: ಸರ್ಕಾರ ಬೀಳಿಸ್ತಾರೆ ಅನ್ನೋದೆಲ್ಲಾ ಗಾಳಿ ಸುದ್ದಿ ಅಷ್ಟೇ. ಸರ್ಕಾರ ಬೀಳಿಸುವಂತಹದರಲ್ಲಿ ನಮ್ಮ ತಂದೆ ಸಿದ್ದರಾಮಯ್ಯನವರದ್ದು ಯಾವುದೇ ಪಾತ್ರವಿಲ್ಲ, ಈಗಾಗಲೇ  ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ರಾಮನಗರದಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ಕಾರ ಬೀಳುತ್ತೆ ಅನ್ನೋ ಪ್ರಶ್ನೆಯೇ ಇಲ್ಲ. ಆದರೆ ಬಿಜೆಪಿಯವರು ಆಪರೇಷನ್ ಕಮಲಕ್ಕೆ ಕೈ ಹಾಕಿರುವುದಂತೂ ನಿಜ.ಈಗಾಗಲೇ ಹಲವು ಶಾಸಕರಿಗೆ ಆಮೀಷ ಒಡ್ಡಿರುವುದು ಬಹಿರಂಗವಾಗಿದೆ.ಆದರೆ ನಮ್ಮ ಪಕ್ಷದ ಯಾವುದೇ ಶಾಸಕರು ಬಿಜೆಪಿಯ ಆಮೀಷಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದ್ದಾರೆ.

ಸರ್ಕಾರ ಸುಭದ್ರವಾಗಿಯೇ ನಡೆಯುತ್ತದೆ.ಪ್ರತಿ ಪಕ್ಷದಲ್ಲೂ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಅಸಮಾಧಾನ ಇರುತ್ತದೆ.ಅದರರ್ಥ ಸರ್ಕಾರ ಸ್ಥಿರವಾಗಿಲ್ಲ ಅಂತಲ್ಲ ನಮ್ಮ ನಾಯಕರು ಅವರನ್ನ ಸಮಾಧಾನ ಪಡಿಸಿ ಸರ್ಕಾರ ನಡೆದುಕೊಂಡು ಹೋಗುವಂತೆ ನೋಡಿಕೊಳ್ತಾರೆ ಎಂದು ಹೇಳಿದರು.

ನಾನು ಖಂಡಿತ ಸಚಿವ ಸ್ಥಾನದ ಆಕಾಂಕ್ಷಿಯಲ್ಲ.ನನಗಿಂತ ಬಹಳಷ್ಟು ಹಿರಿಯ ನಾಯಕರಿದ್ದಾರೆ, ನಾನು ಮೊದಲ ಬಾರಿಯ ಶಾಸಕ.ನಮ್ಮ ತಂದೆಯವರು ಕೂಡಾ ಬೇಡ ಎಂದಿದ್ದಾರೆ, ಹಾಗಾಗಿ ನಾನು ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಕರ್ನಾಟಕ ಕಾಂಗ್ರೆಸ್ ಎಟಿಎಂ ಆರೋಪ ವಿಚಾರ, ಸುಮ್ನೆ ಯಾವುದೋ ಒಂದು ಕಾಗದ ಪತ್ರ ತಂದು ಪತ್ರಿಕೆಯವರ ಮುಂದೆ ಹೇಳಿದ್ದಾರೆ ಅಷ್ಟೇ. ಹಿಟ್ ಅಂಡ್ ರನ್ ಆರೋಪಗಳು ಬಿಜೆಪಿಯದ್ದು ಅಷ್ಟೇ. ಈ ರೀತಿ ಸಾಕಷ್ಟು ಬಾರಿ ಆರೋಪಗಳನ್ನ ಮಾಡಿದ್ದಾರೆ. ನಮಗೆ ಆರೋಪಗಳನ್ನ ಮಾಡುವ ಬದಲು ಅವರ ಪಕ್ಷದಲ್ಲಿ ಎಷ್ಟು ಜನ ಎಟಿಎಂಗಳಂತಿದ್ದಾರೆ,ಅವರನ್ನ ಹೇಗೆ ಬಳಸಿಕೊಳ್ತಿದ್ದಾರೆ ಎಂಬುದನ್ನ ಅವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

 

Please follow and like us:
0
http://bp9news.com/wp-content/uploads/2018/09/ce85bb06b0af494700e1ed304eeec828.jpghttp://bp9news.com/wp-content/uploads/2018/09/ce85bb06b0af494700e1ed304eeec828-150x150.jpgBP9 Bureauಪ್ರಮುಖರಾಜಕೀಯರಾಮನಗರರಾಮನಗರ: ಸರ್ಕಾರ ಬೀಳಿಸ್ತಾರೆ ಅನ್ನೋದೆಲ್ಲಾ ಗಾಳಿ ಸುದ್ದಿ ಅಷ್ಟೇ. ಸರ್ಕಾರ ಬೀಳಿಸುವಂತಹದರಲ್ಲಿ ನಮ್ಮ ತಂದೆ ಸಿದ್ದರಾಮಯ್ಯನವರದ್ದು ಯಾವುದೇ ಪಾತ್ರವಿಲ್ಲ, ಈಗಾಗಲೇ  ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ರಾಮನಗರದಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180903135112'); document.getElementById('div_3320180903135112').appendChild(scpt); ಸರ್ಕಾರ ಬೀಳುತ್ತೆ ಅನ್ನೋ...Kannada News Portal