ರಾಮನಗರ : ಜೆಡಿಎಸ್ ಪಕ್ಷದ ಸ್ಟಾರ್ ಪ್ರಚಾರಕಿ, ಮಳೆ ಹುಡುಗಿ ಪೂಜಾಗಾಂಧಿ ಇಂದು ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಮಾಗಡಿ ಕ್ಷೇತ್ರದ ಬಿಡದಿ ಬಳಿಯ ಕೋತಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ ಅವರು ಬಿಸಿಲನ್ನು ಲೆಕ್ಕಿಸದೇ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಇಂದು ದಿನವಿಡಿ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪರ ಮತ ಯಾಚನೆ ಮಾಡಲಿರುವ ಪೂಜಾಗಾಂಧಿಯವರಿಗೆ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್, ಪತ್ನಿ ಲಕ್ಷ್ಮಿ ಮಂಜುನಾಥ್, ಜೆಡಿಎಸ್ ಮೈಸೂರು ಭಾಗದ ಯುವ ಘಟಕದ ಕಾರ್ಯಧ್ಯಕ್ಷ ವಿ.ನರಸಿಂಹಮೂರ್ತಿ, ಸೇರಿದಂತೆ ಸ್ಥಳಿಯ ಜೆಡಿಎಸ್ ಮುಖಂಡರು ಪೂಜಾಗಾಂಧಿಗೆ ಸಾಥ್ ನೀಡಿಲಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ಪೂಜಾಗಾಂಧಿ, ರಾಜ್ಯದಲ್ಲಿ ಜೆಡಿಎಸ್ ಪರವಾದ ಅಲೆಯಿದ್ದು, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ  ಎಂದರು.ಈಗಾಗಲೇ ಕೊಡಗು, ಬೀದರ್, ಬಸವ ಕಲ್ಯಾಣ, ಹುಬ್ಬಳ್ಳಿ, ಸೇರಿದಂತೆ ರಾಜ್ಯಾದ್ಯಂತ ಪ್ರಚಾರ ಮಾಡುತ್ತೇನೆ. ನೆರೆಯ ಆಂದ್ರ, ತೆಲಂಗಾಣ, ತಮಿಳನಾಡಿನಂತೆ ಇಲ್ಲಿಯೂ ಪ್ರಾದೇಶಿಕ ಪಕ್ಷಕ್ಕೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಇನ್ನು ಪ್ರಚಾರದ ವೇಳೆ ಪೂಜಾಗಾಂಧಿಯೊಂದಿಗೆ ಸೆಲ್ಪಿಗಾಗಿ ಮುಗಿಬಿದ್ದರೂ ಸಹ ಸೆಲ್ಫಿತೆಗೆದುಕೊಳ್ಳುವ ಯುವಕ ಯುವತಿಯರಿಗೆ ಜೆಡಿಎಸ್​​ಗೆ ಮತ ಹಾಕುವಂತೆ ಮನವಿ ಮಾಡಿದರು.


Please follow and like us:
0
http://bp9news.com/wp-content/uploads/2018/05/Karnatakada-Miditha-3.jpeghttp://bp9news.com/wp-content/uploads/2018/05/Karnatakada-Miditha-3-150x150.jpegBP9 Bureauರಾಜಕೀಯರಾಮನಗರರಾಮನಗರ : ಜೆಡಿಎಸ್ ಪಕ್ಷದ ಸ್ಟಾರ್ ಪ್ರಚಾರಕಿ, ಮಳೆ ಹುಡುಗಿ ಪೂಜಾಗಾಂಧಿ ಇಂದು ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಮಾಗಡಿ ಕ್ಷೇತ್ರದ ಬಿಡದಿ ಬಳಿಯ ಕೋತಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ ಅವರು ಬಿಸಿಲನ್ನು ಲೆಕ್ಕಿಸದೇ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಇಂದು ದಿನವಿಡಿ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪರ ಮತ ಯಾಚನೆ ಮಾಡಲಿರುವ...Kannada News Portal