ರಾಮನಗರ : ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳವಣಿಗೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಸುಳ್ಳು ಆರೋಪಗಳನ್ನು ಮಾಡಿ ಸಂಘಕ್ಕೆ ಮತ್ತು ನನ್ನ ಮೇಲೆ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಎಚ್.ಎಸ್.ಸಿದ್ದರಾಜು ದೂರಿದರು.

ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘದಲ್ಲಿ ರೈತರಿಗೆ ಸಾಲ ನೀಡಲು ಲಂಚ ಪಡೆಯಲಾಗುತ್ತಿದೆ ಎಂದು ಕಿಡಿಗೇಡಿಗಳು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಅಂತಹವರ ವಿರುದ್ಧ ದೂರು ದಾಖಲಿಸಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಹಕಾರಿ ಸಂಘಗಳಲ್ಲಿ ರೈತರು ಸಾಲ ಪಡೆಯಲು ಸಾಲ ದಾಖಲಾತಿ ಒದಗಿಸುವ ಅಗತ್ಯವಿದ್ದು, ಅದಕ್ಕಾಗಿ ರೈತರು ಪಹಣಿ, ಪಾನ್ ಕಾರ್ಡ್, ಮತ್ತು ಆರ್ ಟಿಸಿ ಸೇರಿದಂತೆ ಮತ್ತಿತರ ದಾಖಲಾತಿಯನ್ನು ಸಂಭಂಧಿಸಿದ ಕಚೇರಿಗಳಿಂದ ಪಡೆದು ಸಂಘಕ್ಕೆ ಸಕಾಲದಲ್ಲಿ ಸಲ್ಲಿಸಲು ಸಂಘದ ಆಡಳಿತ ಮಂಡಳಿ ತೀರ್ಮಾನದಂತೆ ಸಿಬ್ಬಂದಿ ಒಬ್ಬರನ್ನು ನೇಮಕ ಮಾಡಿದ್ದೆವು. ಇದು ರೈತರ ನೆರವಿಗಾಗಿ ಮಾಡಿದ್ದ ಜನೋಪಯೋಗಿ ಕೆಲಸವಾಗಿದ್ದು, ಅದನ್ನೇ ಮುಂದಿಟ್ಟುಕೊಂಡು ಕೆಲವರು ಸಂಘದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಾಲ ಪಡೆಯಲು ರೈತರು ಒದಗಿಸಬೇಕಾದ ಅಗತ್ಯ ದಾಖಲೆಗಳನ್ನು ಆ ಗುಮಾಸ್ತ ಸಿದ್ದಪಡಿಸಿ ಕೊಡುತ್ತಿದ್ದನು. ಇದಕ್ಕೆ  ತಗಲುವ ಖರ್ಚು ವೆಚ್ಚಗಳನ್ನು ರೈತರೇ ಗುಮಾಸ್ತನಿಗೆ ನೀಡುತ್ತಿದ್ದರು. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಸಂಘದಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಜು ಸ್ಪಷ್ಟಪಡಿಸಿದರು.

ಹಿಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 50 ಸಾವಿರ ರುಪಾಯಿ ಸಾಲ ಮನ್ನಾ ಮಾಡಿದಾಗ ಸಂಘದಿಂದ 786 ರೈತರಿಗೆ 3 ಕೋಟಿ 20 ಲಕ್ಷ ರುಪಾಯಿ ಸಾಲ ನೀಡಲಾಗಿತ್ತು. 50 ಸಾವಿರ ಸಾಲ ಮನ್ನಾವಾಗಲು ಕೆಲ ರೈತರು ಸುಸ್ತಿ ಹಣ ಪಾವತಿಸಬೇಕಾಗಿತ್ತು. ಅಷ್ಟೂ  ಹಣವನ್ನು ಭರಿಸಲಾಗದೆ ರೈತರು ಆರ್ಥಿಕ ಸಂಕಷ್ಟದಲ್ಲಿದ್ದರು. ಆಗ ಸಂಘದಿಂದಲೇ ಸುಸ್ತಿ ಹಣ ಪಾವತಿಸಿ ಕೆಲ ರೈತರ ನೆರವಿಗೆ ಬಂದಿದ್ದೇವೆ. ಇದರಿಂದಲೇ ಸಂಘದ ಆಡಳಿತ ಮಂಡಳಿಯ ರೈತಪರ ಕಾಳಜಿ ತಿಳಿಯುತ್ತದೆ ಎಂದರು.

ಸಂಘದಲ್ಲಿ 590 ರೈತರಿಗೆ 2 ಕೋಟಿ 66 ಲಕ್ಷ ಸಾಲ ನೀಡಲಾಗಿದ್ದು, 198 ರೈತರಿಗೆ 54 ಲಕ್ಷ ರುಪಾಯಿ ಸಾಲದ ಹಣ ಬಿಡಿಸಿಸಿ ಬ್ಯಾಂಕಿನಿಂದ ಬರಬೇಕಾಗಿದೆ. ಉಳಿದಂತೆ 230 ರೈತರು ಹಾಗೂ 20 ಸ್ತ್ರೀ ಶಕ್ತಿ ಸಂಘಗಳು ಹೊಸದಾಗಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.

ಸಂಘದ ವಿರುದ್ಧ  ಸುಳ್ಳು ಆರೋಪ ಮಾಡುವ ವ್ಯಕ್ತಿಗಳಿಗೆ ಕೃಷಿ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ರೈತರಿಗೆ ಸಹಕಾರಿಯಾಗಿರುವ ಸಂಘದ ಉನ್ನತಿಯನ್ನು ಸಹಿಸದೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ದೂರು ದಾಖಲಿಸಿ ಕಾನೂನು ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಸಿದರು. ಈ ವೇಳೆ ಸಂಘದ ಮಾಜಿ ಅಧ್ಯಕ್ಷ ಎಚ್.ಟಿ.ಶಿವಕುಮಾರ್, ಉಪಾಧ್ಯಕ್ಷ ಆರ್.ಕೃಷ್ಣಪ್ಪ, ಗ್ರಾಪಂ ಸದಸ್ಯರಾದ ಸತೀಶ್, ಡಿ.ಗೋಪಾಲ್ ಮುಖಂಡರಾದ ಡಿ.ನಾಗರಾಜು, ಮೂಡ್ಲಗಿರಿಯಪ್ಪ, ನಾಗಣ್ಣ, ದೇವರಾಜು ಮತ್ತಿತರರು ಇದ್ದರು.

Please follow and like us:
0
http://bp9news.com/wp-content/uploads/2018/09/WhatsApp-Image-2018-09-19-at-5.52.54-PM-1024x768.jpeghttp://bp9news.com/wp-content/uploads/2018/09/WhatsApp-Image-2018-09-19-at-5.52.54-PM-150x150.jpegBP9 Bureauಪ್ರಮುಖರಾಜಕೀಯರಾಮನಗರರಾಮನಗರ : ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳವಣಿಗೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಸುಳ್ಳು ಆರೋಪಗಳನ್ನು ಮಾಡಿ ಸಂಘಕ್ಕೆ ಮತ್ತು ನನ್ನ ಮೇಲೆ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಎಚ್.ಎಸ್.ಸಿದ್ದರಾಜು ದೂರಿದರು. ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘದಲ್ಲಿ ರೈತರಿಗೆ ಸಾಲ ನೀಡಲು ಲಂಚ ಪಡೆಯಲಾಗುತ್ತಿದೆ ಎಂದು ಕಿಡಿಗೇಡಿಗಳು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಅಂತಹವರ ವಿರುದ್ಧ...Kannada News Portal