ರಾಮನಗರ : ಪ್ರಚಾರ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಉಂಟುಮಾಡಿ ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ಸಂಸದ ಮತ್ತು ಎಂಎಲ್ಸಿ ಅವರಿಗೆ ಸಾರ್ವಜನಿಕರು ಬೆವರಿಳಿಸಿದ ಘಟನೆ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ವಿಜಿದೊಡ್ಡಿಯಲ್ಲಿ ನಡೆದಿದೆ.

ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಡಿ.ಕೆ.ಸುರೇಶ್ ಮತ್ತು ಎಂಎಲ್ ಸಿ ಹೆಚ್.ಎಂ.ರೇವಣ್ಣ ಅವರಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಅವರ ಪರವಾಗಿ ವಿ.ಜಿ.ದೊಡ್ಡಿಯ ರಾಮನಗರ- ಮಾಗಡಿ ಮುಖ್ಯರಸ್ತೆಯಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದರು.ಇದರಿಂದ ಮಾಗಡಿ ರಾಮನಗರ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಸಾರ್ವಜನಿಕರೊರ್ವರು ಭಾಷಣ ಮಾಡುತ್ತಿದ್ದ ಸಂಸದರನ್ನು ಬಹಿರಂಗವಾಗಿಯೇ ಟೀಕೆ ಮಾಡಿದರು. ಒಂದು ಸೈಡ್ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಸಾರ್ವಜನಿಕರು ಹೇಳುತ್ತಿದ್ದಂತೆ ಜಿಲ್ಲಾ ಪಂಚಾಯ್ತಿ ಸದಸ್ಯ ಅಶೋಕ್ ಮತ್ತು ಕಾಂಗ್ರೆಸ್ ಮುಖಂಡರು ಸಾರ್ವಜನಿಕರ ಜೊತೆ ವಾಗ್ವಾದ ನಡೆಸಿದರು.

ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸಂಸದ ಡಿ.ಕೆ.ಸುರೇಶ್ ಅವರೇ ಸಾರ್ವಜನಿಕರಲ್ಲಿ ಮನವಿ ಮಾಡಿ, ತೊಂದರೆಗೆ ವಿಷಾಧಿಸಿದರು, ನಂತರ ಪ್ರಚಾರ ಮೊಟಕುಗೊಳಿಸಿ, ಟ್ರಾಫಿಕ್ ತೆರವುಗೊಳಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-04-at-1.35.40-PM-1024x576.jpeghttp://bp9news.com/wp-content/uploads/2018/05/WhatsApp-Image-2018-05-04-at-1.35.40-PM-150x150.jpegBP9 Bureauಪ್ರಮುಖರಾಮನಗರರಾಮನಗರ : ಪ್ರಚಾರ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಉಂಟುಮಾಡಿ ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ಸಂಸದ ಮತ್ತು ಎಂಎಲ್ಸಿ ಅವರಿಗೆ ಸಾರ್ವಜನಿಕರು ಬೆವರಿಳಿಸಿದ ಘಟನೆ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ವಿಜಿದೊಡ್ಡಿಯಲ್ಲಿ ನಡೆದಿದೆ. ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಡಿ.ಕೆ.ಸುರೇಶ್ ಮತ್ತು ಎಂಎಲ್ ಸಿ ಹೆಚ್.ಎಂ.ರೇವಣ್ಣ ಅವರಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಅವರ ಪರವಾಗಿ ವಿ.ಜಿ.ದೊಡ್ಡಿಯ ರಾಮನಗರ- ಮಾಗಡಿ ಮುಖ್ಯರಸ್ತೆಯಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದರು.ಇದರಿಂದ ಮಾಗಡಿ ರಾಮನಗರ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್...Kannada News Portal