ರಾಮನಗರ : ನನ್ನ ಬಗ್ಗೆ ಮಾತನಾಡ್ಲಿಕ್ಕೆ ಅವನು ಯಾರು..? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಜಮೀರ್ ರಾಮನಗರದಲ್ಲಿ ಏಕವಚನದಲ್ಲಿ ವಾಗ್ಧಾಳಿ ನಡೆಸಿದ್ದಾರೆ.

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಬಾಲಕೃಷ್ಣ ಪರ ಪ್ರಚಾರ ಕೈಗೊಂಡಿರುವ ಅವರು ನನ್ನ ಬಗ್ಗೆ ಮಾತನಾಡ್ಲಿಕ್ಕೆ ಅವನು ಯಾರು, ನಾನು  ಚನ್ನಪಟ್ಟಣಕ್ಕೆ ಬಂದು ಹೋದ ಮೇಲೆ ಹಣ ಹಂಚಿ ಜನ ಸೇರಿಸಿರೋದು ಯಾರು? ಹಣ ಹಂಚಿ ಕುಮಾರಸ್ವಾಮಿ‌ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿದ್ದಾನೆ ಎಂದು ಜಮೀರ್ ಎಚ್​​ಡಿಕೆ ವಿರುದ್ದ ಹರಿಹಾಯ್ದರು.

ನಾನು ಬಂದಾಗ ತಡರಾತ್ರಿವರೆಗೂ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಚನ್ನಪಟ್ಟಣದಲ್ಲಿ ಜಮಾಯಿಸಿದ್ದರು. ಆದರೆ ಕುಮಾರಸ್ವಾಮಿ ಹಣ‌ಕೊಟ್ಟರು ಸೇರಿದ್ದು 200 ಜನ ಮಾತ್ರ ಎಂದು ಲೇವಡಿ ಮಾಡಿದರು. ಕುಮಾರಸ್ವಾಮಿ‌ ಹಣಕೊಟ್ಟು ಜನ ಸೇರಿಸುತ್ತಾರೆ, ಆತನ ಅಭಿಮಾನಕ್ಕೆ ಜನ ಸೇರೋದಿಲ್ಲ ಎಂದ ಜಮೀರ್  ಜನ ಸೇರಿಸೋ ವಿಚಾರದಲ್ಲಿ ಹೆಚ್ ಡಿಕೆಗೆ ನೇರ ಸವಾಲ್ ಹಾಕಿದ್ದಾರೆ.

ನಾನು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿಲ್ಲ, ರಾಜ್ಯದ 52 ಕ್ಷೇತ್ರದಲ್ಲಿ ಈವರೆಗೆ ಪ್ರಚಾರ ಮಾಡಿದ್ದೇನೆ. ಮೈಸೂರು ಭಾಗದಲ್ಲಿ ನನ್ನ ಸಮುದಾಯದ ಜನ ನನ್ನ ನಂಬಿ ಕಾಂಗ್ರೆಸ್ ಸೇರೋದನ್ನ ನೋಡಿ, ನನ್ನ ಸಮುದಾಯದ ಜನರನ್ನ ತುರುಕರು ಕಾಸುಕೊಟ್ರೆ ಬರ್ತಾರೆ ಅಂತ ಜರಿದಿದ್ದಾರೆ. ಆದರೆ ನನ್ನ ಜನ ಕಾಸಿಗೆ ಬದುಕಿಲ್ಲ. ಕೊಂಡುಕೊಳ್ಳಲು ಅವ್ನು ಯಾರು? ಎಂದು ಹೆಚ್ಡಿಕೆಗೆ ಟಾಂಗ್ ನೀಡಿದರು.

ಮುಸ್ಲಿಂರನ್ನ ಜರಿದು ಈಗ ನಾನು ಮಾತನಾಡಿಲ್ಲ ಅಂತಾರೆ, ಅವರದ್ದು ಹಿಟ್ ಅಂಡ್ ರನ್ ಕೇಸ್ ಸಂಸ್ಕೃತಿ,ಯಾವುದನ್ನ  ಅವನು ಒಪ್ಪಿಕೊಂಡಿದ್ದಾನೆ ಹೇಳಿ, ಹೇಳೋದನ್ನ ಹೇಳಿ ನಂತರ ನಾನು ಹೇಳೇ ಇಲ್ಲ ಅಂತಾರೆ ಎಂದು ಜರಿದರು.

 

Please follow and like us:
0
http://bp9news.com/wp-content/uploads/2018/04/Zmeer-Karnatakada-Miditha.jpeghttp://bp9news.com/wp-content/uploads/2018/04/Zmeer-Karnatakada-Miditha-150x150.jpegBP9 Bureauಪ್ರಮುಖರಾಜಕೀಯರಾಮನಗರರಾಮನಗರ : ನನ್ನ ಬಗ್ಗೆ ಮಾತನಾಡ್ಲಿಕ್ಕೆ ಅವನು ಯಾರು..? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಜಮೀರ್ ರಾಮನಗರದಲ್ಲಿ ಏಕವಚನದಲ್ಲಿ ವಾಗ್ಧಾಳಿ ನಡೆಸಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಬಾಲಕೃಷ್ಣ ಪರ ಪ್ರಚಾರ ಕೈಗೊಂಡಿರುವ ಅವರು ನನ್ನ ಬಗ್ಗೆ ಮಾತನಾಡ್ಲಿಕ್ಕೆ ಅವನು ಯಾರು, ನಾನು  ಚನ್ನಪಟ್ಟಣಕ್ಕೆ ಬಂದು ಹೋದ ಮೇಲೆ ಹಣ ಹಂಚಿ ಜನ ಸೇರಿಸಿರೋದು ಯಾರು? ಹಣ ಹಂಚಿ ಕುಮಾರಸ್ವಾಮಿ‌ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿದ್ದಾನೆ...Kannada News Portal