ರಾಮನಗರ : ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ರವರ ಪ್ರಚಾರದ ಕೈಪಿಡಿ ಹಾಗೂ ಕರಪತ್ರಗಳಿಗೆ ದಲಿತರು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.

ತಾಲ್ಲೂಕಿನ ದಲಿತ ಸಂಘಟನೆಗಳ ಮುಖಂಡರು ಸಾತನೂರು ಸರ್ಕಲ್ ಬಳಿಯ ಅಂಬೇಡ್ಕರ್ ಭವನದ ಎದುರು ಪ್ರತಿಭಟನೆ ನಡೆಸಿದ ದಲಿತರು
ಬಿಜೆಪಿ ಸೇರಿರುವ ಛಲವಾದಿ ಮಹಾಸಭಾದ ಅಧ್ಯಕ್ಷ  ಕೆ..ಶಿವರಾಂ ವಿರುದ್ದ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದು ಕೆ. ಶಿವರಾಮ್ ದಲಿತ ವಿರೋಧಿ, ೪೨೦ ಎಂದು ಘೋಷಣೆ ಕೂಗಿದ್ದಾರೆ.

ಕಳೆದ ೧೯ ವರ್ಷದಿಂದ ದಲಿತರ ಹೆಸರಲ್ಲಿ ಅಧಿಕಾರ ಹಿಡಿದಿದ್ದಾರೆ. ಆದ್ರೆ ತಾಲೂಕಿನಲ್ಲಿ ದಲಿತರ ಅಭಿವೃದ್ಧಿ ಆಗಿಲ್ಲ. ಯೋಗೇಶ್ವರ್ ಒಬ್ಬ ಸುಳ್ಳು ಶಾಸಕ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಯೋಗೇಶ್ವರ್ ಅವರ ಬಿಜೆಪಿ ಪಕ್ಷದ ಪ್ರಚಾರ ಕೈ ಪಿಡಿಯಲ್ಲಿ ಅಂಬೇಡ್ಕರ್ ಭವನ ಪೂರ್ಣಗೊಳಿಸಿರುವುದಾಗಿ ಹೇಳಿದ್ದಾರೆ.

ಆದರೆ ಭವನ ಲೋಕಾರ್ಪಣೆಯಾಗದೆ ಶಿಥಿಲವಾಸ್ಥೆಗೆ ತಲುಪುತ್ತಿದೆ ಎಂದು ಯೋಗೇಶ್ವರ್ ಕರ ಪತ್ರಕ್ಕೆ ಬೆಂಕಿ ಹಚ್ಚಿ ಈ ಬಾರಿ  ಯೋಗೇಶ್ವರ್ ಗೆ ದಲಿತರು ಮತ ನೀಡಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

Please follow and like us:
0
http://bp9news.com/wp-content/uploads/2018/05/Karnatakada-Miditha-27.jpeghttp://bp9news.com/wp-content/uploads/2018/05/Karnatakada-Miditha-27-150x150.jpegBP9 Bureauರಾಮನಗರರಾಮನಗರ : ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ರವರ ಪ್ರಚಾರದ ಕೈಪಿಡಿ ಹಾಗೂ ಕರಪತ್ರಗಳಿಗೆ ದಲಿತರು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ. ತಾಲ್ಲೂಕಿನ ದಲಿತ ಸಂಘಟನೆಗಳ ಮುಖಂಡರು ಸಾತನೂರು ಸರ್ಕಲ್ ಬಳಿಯ ಅಂಬೇಡ್ಕರ್ ಭವನದ ಎದುರು ಪ್ರತಿಭಟನೆ ನಡೆಸಿದ ದಲಿತರು ಬಿಜೆಪಿ ಸೇರಿರುವ ಛಲವಾದಿ ಮಹಾಸಭಾದ ಅಧ್ಯಕ್ಷ  ಕೆ..ಶಿವರಾಂ ವಿರುದ್ದ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದು ಕೆ. ಶಿವರಾಮ್ ದಲಿತ ವಿರೋಧಿ, ೪೨೦...Kannada News Portal