View this post on Instagram

 

Well.. there has to be a He, me, Sea and us Three 😉 #radhikapandit #nimmaRP

A post shared by Radhika Pandit (@iamradhikapandit) on

ಸ್ಯಾಂಡಲ್​ವುಡ್​ನ ಕ್ಯೂಟೆಸ್ಟ್​ ಕಪಲ್​ ಯಶ್​ ಅಂಡ್​ ರಾಧಿಕಾ  ಸಿಕ್ಕಾಪಟ್ಟೆ ಎಂಜಾಯ್​ ಮಾಡ್ತಿದ್ದಾರೆ. ಅಯ್ಯೋ…! ಯಶ್​ ನೋಡಿದ್ರೆ ಸಿನಿಮಾ ಅಂತಾ  ಯಾವಾಗಲು ಬ್ಯುಸಿಯಾಗಿರುತ್ತಾರೆ. ಇನ್ನು ರಾಧಿಕಾ ಪ್ರಗ್ನೆಂಟ್​ . ಈ ನಡುವೆ ಎಲ್ಲಿಗೆ ಹೋಗಿ ಎಂಜಾಯ್​ ಮಾಡ್ತಿದ್ದಾರೆ ಈ ಸ್ಟಾರ್​ ಜೋಡಿ ಅಂತಾ ಯೋಚನೆ ಮಾಡ್ತಿದ್ದೀರಾ.

ಹೌದು ಮನೆಗೆ ಬರೋ ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿ  ಈ ರಾಮಚಾರಿ ದಂಪತಿ  ಸ್ಪೆಷಲ್​ ಅಂಡ್​ ಇಂಟ್ರೆಸ್ಟಿಂಗ್​ ಜೋಡಿ ಅಂದ್ರೆ ತಪ್ಪಾಗಲಾರದು. ಯಶ್​ ಸ್ಯಾಂಡಲ್​ವುಡ್​ ಲಕ್ಕಿಯೆಸ್ಟ್​ ಸ್ಟಾರ್​. ಅಂದಹಾಗೇ  ಸ್ಯಾಂಡಲ್ವುಡ್​ ಸಿಂಡ್ರೆಲಾ ಕೂಡ ಅಷ್ಟೆ ಅದೃಷ್ಟವಂತೆ. ಮಗು ಆದ ನಂತರ ಸಿನಿಮಾ ಮಾಡುವುದಾಗಿ ಹೊಸ ಚಿತ್ರಕ್ಕೆ ಕಮಿಟ್​ ಆಗಿದ್ದಾರೆ. ಇನ್ನು ಹುಟ್ಟುವ ಮಗು ವೆರಿ ವೆರಿ ಲಕ್ಕಿ. ಭೂಮಿಗೆ ಬರೋ ಮುನ್ನವೇ ಸ್ಟಾರ್​ ಕಿಡ್​ಗೆ ಭರ್ಜರಿ ವೆಲ್​ಕಮ್, ಸ್ಟಾರ್​ಡಂ.

ಅಂದಹಾಗೇ ಈ ಜೋಡಿ ಹನಿಮೂನ್​ ಅಂಡ್ ಬೇಬಿ ಮೂನ್​ ಎರಡನ್ನೂ ಮಾಡ್ತಿದ್ದಾರೆ.ಮನೆಗೆ ಬರೋ ಪುಟ್ಟ ಅತಿಥಿಯ ಆಗಮನದ ನಿರೀಕ್ಷೆಯಲ್ಲಿರೋ ಸ್ಟಾರ್ ಜೋಡಿ ಯಶ್ ರಾಧಿಕಾ ಪಂಡಿತ್ ಏನೇ ಮಾಡಿದ್ರೂ ತಮ್ ಸ್ಟೈಲ್‌ನಲ್ಲೇ ಮಾಡ್ತಾರೆ. ಎಲ್ರೂ ಮದುವೆಯಾದ್ಮೇಲೆ ಹನಿಮೂನ್‌ಗೆ ಹೋಗ್ತಾರೆ. ಆದ್ರೆ ಈ ಜೋಡಿ ಹನಿಮೂನ್ ಅಷ್ಟೇ ಅಲ್ಲ, ಬೇಬಿಮೂನ್ ಕೂಡ ಮಾಡ್ತಿದ್ದಾರೆ.

 

View this post on Instagram

 

Babymoon (travel) pictures coming up soon…. 😊 #radhikapandit #nimmaRP

A post shared by Radhika Pandit (@iamradhikapandit) on

ಬೇಬಿಮೂನ್‌ಗಾಗಿ ದೂರದ ಮಾಲ್ಡೀವ್ಸ್ ದ್ವೀಪಕ್ಕೆ ತೆರಳಿರೋ ದಂಪತಿ ಸಮುದ್ರತೀರವೊಂದ್ರಲ್ಲಿ ಕೈಕೈಹಿಡಿದು ನಡೆದುಹೋಗ್ತಿರೋ ಫೋಟೋನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರೋ ರಾಧಿಕಾ ಪಂಡಿತ್ ಹೀಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. “ಇಲ್ಲಿ ನಾನು,ಅವರು,ಸಮುದ್ರ ಮತ್ತು ನಾವು ಮೂವರು ಅಂತಾ ಬರೆದಿದ್ದಾರೆ. ಇನ್ನೊಂದೆಡೆ ಬೇಬಿಮೂನ್ ಟ್ರಾವಲ್‌,ಫೋಟೋಗಳನ್ನ ಶೀಘ್ರದಲ್ಲೇ ನಿರೀಕ್ಷಿಸಿ” ಅಂತಾ ಬರೆದಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳಂತೂ “ಅಬ್ಬಾ..!ಎಂಥಾ ಜೋಡಿ. ದೇವ್ರು ನಿಮಗೆ ಒಳ್ಳೆಯದು ಮಾಡಲಿ,ಯಾವಾಗ ಪುಟ್ಟ ಅತಿಥಿ ಬರುತ್ತೋ?ಕುತೂಹಲ ತಡೆಯೋಕಾಗ್ತಿಲ್ಲ” ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಮೊದಲಿನಿಂದ್ಲೂ ತಮ್ಮ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಖುಷಿಯನ್ನ ಹಂಚಿಕೊಂಡು ಬಂದಿರೋ ಈ ಜೋಡಿ ತಮ್ಮ ಜೀವನದ ಗೋಲ್ಡನ್ ಟೈಮ್‌ನೂ ಹೀಗೆ ಅಭಿಮಾನಿಗಳೊಡನೆ ಹಂಚಿಕೊಳ್ತಿದ್ದಾರೆ. ಹಿಂದೆ ಯಶ್‌ ಅಪ್ಪ ಆಗ್ತಿರೋ ವಿಷ್ಯವನ್ನೂ ಸಿನಿಮಾ ಟೀಸರ್‌ ಬಿಡುಗಡೆಯ ಸ್ಟೈಲ್‌ನಲ್ಲೇ ವೀಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡಿತ್ತು ಈ ಜೋಡಿ.

Please follow and like us:
0
http://bp9news.com/wp-content/uploads/2018/09/dc-Cover-03v5bo6s0vrulme0u3ek1i2a17-20160811223127.Medi_.jpeghttp://bp9news.com/wp-content/uploads/2018/09/dc-Cover-03v5bo6s0vrulme0u3ek1i2a17-20160811223127.Medi_-150x150.jpegBP9 Bureauಸಿನಿಮಾ  View this post on Instagram   Well.. there has to be a He, me, Sea and us Three 😉 #radhikapandit #nimmaRP A post shared by Radhika Pandit (@iamradhikapandit) on Sep 17, 2018 at 5:56am PDT ಸ್ಯಾಂಡಲ್​ವುಡ್​ನ ಕ್ಯೂಟೆಸ್ಟ್​ ಕಪಲ್​ ಯಶ್​ ಅಂಡ್​ ರಾಧಿಕಾ  ಸಿಕ್ಕಾಪಟ್ಟೆ ಎಂಜಾಯ್​ ಮಾಡ್ತಿದ್ದಾರೆ. ಅಯ್ಯೋ...! ಯಶ್​ ನೋಡಿದ್ರೆ ಸಿನಿಮಾ ಅಂತಾ  ಯಾವಾಗಲು ಬ್ಯುಸಿಯಾಗಿರುತ್ತಾರೆ. ಇನ್ನು...Kannada News Portal