ಬೆಂಗಳೂರು : ಸ್ವಲ್ಪ ದಿನಗಳ  ಕಾಲ  ಯಶ್​ ಮತ್ತು ಕಿಚ್ಚ ಸುದೀಪ್​ ಅಭಿಮಾನಿಗಳ ನಡುವೆ  ವಾರ್​ ನಡೆಯುತ್ತಲೇ ಇತ್ತು. ರಾಕಿಂಗ್​ ಸ್ಟಾರ್​ ಯಶ್​, ವರ್ಕೌಟ್​ ವಿಡಿಯೋವೊಂದರಲ್ಲಿ ಹಾಯ್​ ಸುದೀಪ್​ ಎಂದಿದ್ದೇ ಮಹಾ ತಪ್ಪಾಗಿ ಹೋಗಿತ್ತು. ಅದೊಂದು ಕಿಚ್ಚನ ಅಭಿಮಾನಿಗಳು ಕೆಂಡಾಮಂಡಲವಾಗೋಕೆ ಕಾರಣವಾಯ್ತು. ಯಶ್​, ಸುದೀಪ್​ರನ್ನು ಸುದೀಪ್​ ಸರ್​ ಅಥವಾ ಬಾಸ್​ ಎಂದು ಕರೆಯದೇ ಇದ್ದುದ್ದೇ ಕಿಚ್ಚನ ಅಭಿಮಾನಿಗಳು ಮುನಿಸಿಕೊಳ್ಳುವುದಕ್ಕೆ ಕಾರಣವಾಯ್ತು. ಫ್ಯಾನ್ಸ್​ ಜಗಳ ತಾರಕಕ್ಕೇರುತ್ತಿದ್ದಂತೆ ಅಭಿಮಾನಿಗಳ ಮಧ್ಯೆ ಬಂದ ಯಶ್​ ಮತ್ತು ಸುದೀಪ್​ ನಮ್ಮ ನಡುವೆ ಯಾವ ಭಿನ್ನಅಭಿಪ್ರಾಯಗಳು ಇಲ್ಲ. ಸುದೀಪ್​ ಅಂತಾ ಕರೆದ್ರೆ ನನಗೆ ಯಾವ  ಬೇಜಾರು ಇಲ್ಲ. ಅಂತಾ ಅಭಿಮಾನಿಗಳ ನಡುವೆ ಇದ್ದ ಫೈಯರ್​ಗೆ ತಣ್ಣೀರೆರಚಿದ್ದಾರೆ.

ಆದರೆ ರಾಕಿಂಗ್​ ಸ್ಟಾರ್​ ಯಶ್ ಇದೀಗ ತಾವು ಕೊಂಡು  ಕೊಂಡ ನ್ಯೂ ಕಾರ್​ನಿಂದಾಗಿ ಯಶ್​ ಅಭಿಮಾನಿಗಳು ಖುಷ್​ ಆಗಿದ್ರೆ ಮತ್ತಷ್ಟು ಸ್ಟಾರ್​ಗಳ ಅಭಿಮಾನಿಗಳಲ್ಲಿ ಬಿಸಿ ಏರಿದಂತೆ ಕಾಣುತ್ತಿದೆ.  ವಾಹನಗಳ  ನೋಂದಣಿ  ಸಂಖ್ಯೆಗಾಗಿ ಫ್ಯಾನ್ಸಿ ನಂಬರ್​ ಹರಾಜು ಪ್ರಕ್ರಿಯೆ ಶಾಂತಿನಗರದ ಆರ್​ಟಿಒ ಕೇಂದ್ರ ಕಚೇರಿಯಲ್ಲಿ ಇಂದು ನಡೆಯಿತು. ಈ ಹರಾಜು ಪ್ರಕ್ರಿಯೆಯಲ್ಲಿ 50 ಕ್ಕೂ ಮಂದಿ ಹೆಚ್ಚು ಜನ ಭಾಗವಹಿಸಿದ್ದರು. ಆರ್​ಟಿಒ ಆಫೀಸರ್​  ನಾರಯಣ  ಸ್ವಾಮಿ ಈ ಹರಾಜಿನ ನೇತೃತ್ವ ವಹಿಸಿದ್ದರು.   ಯಶ್​ ತಮ್ಮ ಹೊಸ ಬೆಂಜ್​ಗೆ  8055(BOSS) ನಂಬರ್​ ಖರೀದಿ ಮಾಡಿದ್ದಾರೆ.KA05MY8055 ನೋಂದಣಿ ಸಂಖ್ಯೆಯನ್ನು 78 ಸಾವಿರಕ್ಕೆ ಹರಾಜು ಮೂಲಕ ಖರೀದಿ ಮಾಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ   ಬಾಸ್​ ಸ್ಥಾನದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿರುವಾಗಲೇ ಯಶ್ ಬಾಸ್​ ನಂ.8055 ​ ಕಾರು ಕೊಂಡಿದ್ದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.  ರಾಕಿಂಗ್​ ಸ್ಟಾರ್​ ಪರವಾಗಿ ಈ ಹರಾಜು ಪ್ರಕ್ರಿಯೆಯಲ್ಲಿ ರಾಕೇಶ್​ ಭಾಗವಹಿಸಿದ್ದರು. ಏನೇ ಅದರೂ ಈ ಬಾಸ್​ ನಂ. ಕಾರ್​ ನಾವೇ  ಖರೀದಿ ಮಾಡಲೇ ಬೇಕು ಅಂತಾ ನಿರ್ಧರಿಸಿ, ಎಷ್ಟೇ ಹಣ ಆದರೂ ಪರವಾಗಿಲ್ಲ ಬಾಸ್ ನಂಬರ್ ಅನ್ನೇ ತೆಗೆದುಕೊಳ್ಳುವಂತೆ ರಾಕೇಶ್​ಗೆ ಯಶ್ ಸೂಚಿಸಿದ್ದರು. ಆದರೆ ಯಾರೂ ಬಿಡ್ ಮಾಡದ ಹಿನ್ನಲೆ 78 ಸಾವಿರಕ್ಕೆ BOSS ಎಂದು ಸಂಕೇತಿಸುವ 8055 ಅನ್ನು ಯಶ್ ತಮ್ಮದಾಗಿಸಿಕೊಂಡಿದ್ದಾರೆ. ಕೊನೆಗೂ ಕಾರ್​ ಖರೀದಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.  ಒಟ್ಟರೆ ತಣ್ಣಗಾಗಿದ್ದ ಬಾಸ್​ ವಾರ್​ ಯಶ್​ ಕಾರ್​ ಕೊಂಡುಕೊಳ್ಳುವುದರ ಮೂಲಕ ಮತ್ತಷ್ಟು ಕಾವೇರುತ್ತಾ ಎಂಬುದು ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2018/06/190618-Yash-768x432-1.jpghttp://bp9news.com/wp-content/uploads/2018/06/190618-Yash-768x432-1-150x150.jpgBP9 Bureauಸಿನಿಮಾಬೆಂಗಳೂರು : ಸ್ವಲ್ಪ ದಿನಗಳ  ಕಾಲ  ಯಶ್​ ಮತ್ತು ಕಿಚ್ಚ ಸುದೀಪ್​ ಅಭಿಮಾನಿಗಳ ನಡುವೆ  ವಾರ್​ ನಡೆಯುತ್ತಲೇ ಇತ್ತು. ರಾಕಿಂಗ್​ ಸ್ಟಾರ್​ ಯಶ್​, ವರ್ಕೌಟ್​ ವಿಡಿಯೋವೊಂದರಲ್ಲಿ ಹಾಯ್​ ಸುದೀಪ್​ ಎಂದಿದ್ದೇ ಮಹಾ ತಪ್ಪಾಗಿ ಹೋಗಿತ್ತು. ಅದೊಂದು ಕಿಚ್ಚನ ಅಭಿಮಾನಿಗಳು ಕೆಂಡಾಮಂಡಲವಾಗೋಕೆ ಕಾರಣವಾಯ್ತು. ಯಶ್​, ಸುದೀಪ್​ರನ್ನು ಸುದೀಪ್​ ಸರ್​ ಅಥವಾ ಬಾಸ್​ ಎಂದು ಕರೆಯದೇ ಇದ್ದುದ್ದೇ ಕಿಚ್ಚನ ಅಭಿಮಾನಿಗಳು ಮುನಿಸಿಕೊಳ್ಳುವುದಕ್ಕೆ ಕಾರಣವಾಯ್ತು. ಫ್ಯಾನ್ಸ್​ ಜಗಳ ತಾರಕಕ್ಕೇರುತ್ತಿದ್ದಂತೆ ಅಭಿಮಾನಿಗಳ ಮಧ್ಯೆ ಬಂದ...Kannada News Portal