ಬೆಂಗಳೂರು: ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರೆಸ್ಸೆಸ್ ಹಿಂದುತ್ವವಾದಿಗಳು ಮಾತನಾಡುತ್ತಿಲ್ಲ. ನಾವು ಮಾತನಾಡಿದರೆ, ನಮ್ಮ ಬಾಯಿ ಮುಚ್ಚಲು ಮುಂದಾಗಿದ್ದಾರೆ. ಮುಂದುವರೆದು ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ. ಮೋದಿ ಅವರಂತಹ ನೀಚ ಪ್ರಧಾನಿ ಮತ್ತೊಬ್ಬ ಇಲ್ಲ ಎಂದು ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ದಾಹಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕೊಲೆಯೂ ಆಗಲಿದೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಿತ ಹೇಳಿಕೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಬೇಕೆನ್ನುವ ಹಿಂದೂ ಮುಖಂಡರನ್ನು ವ್ಯವಸ್ಥಿತವಾಗಿ ಆರೆಸ್ಸೆಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮುಗಿಸಲು ಮುಂದಾಗಿದ್ದಾರೆ. ಆದರೆ ಮುಂದೆ, ಮೋದಿಯ ಅಧಿಕಾರ ದಾಹಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕೊಲೆಯೂ ಆಗಲಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಹಿಂದೂ ಸಂಘಟನೆಗಳನ್ನು ಗುತ್ತಿಗೆ ಪಡೆದ ರೀತಿ ಆರೆಸ್ಸೆಸ್ ನಡೆದುಕೊಳ್ಳುತ್ತಿದೆ. ಅಲ್ಲದೆ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ಮನೆಗೆ ಕಳುಹಿಸುವ ಹೊಸ ವ್ಯವಸ್ಥೆ ಹುಟ್ಟು ಹಾಕಲಾಗಿದೆ ಎಂದ ಅವರು, ಬರೋಬ್ಬರಿ 37 ವರ್ಷಗಳಿಂದ ತನ್ನ ಸ್ವಂತ ಉದ್ಯೋಗ, ಕುಟುಂಬಸ್ಥರನ್ನು ಬಿಟ್ಟು, ಹಿಂದೂ ಸಮಾಜದ ಜಾಗೃತಿಗೆ ಶ್ರಮಿಸಿದ ಪ್ರವೀಣ್‌ಬಾಯ್ ತೊಗಾಡಿಯ ಅವರನ್ನು ಕಡೆಗಣಿಸಿ, ಅವರ ಹತ್ಯೆಗೆ ಸಂಚು ರೂಪಿಸಿದ್ದು, ನಾಚಿಕೆಗೇಡು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2018/04/pramod-muthalik_650x400_81452873931.jpghttp://bp9news.com/wp-content/uploads/2018/04/pramod-muthalik_650x400_81452873931-150x150.jpgPolitical Bureauಪ್ರಮುಖರಾಜಕೀಯRSS chief Mohan Bhagwat will be murdered: Pramod Muthalikಬೆಂಗಳೂರು: ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರೆಸ್ಸೆಸ್ ಹಿಂದುತ್ವವಾದಿಗಳು ಮಾತನಾಡುತ್ತಿಲ್ಲ. ನಾವು ಮಾತನಾಡಿದರೆ, ನಮ್ಮ ಬಾಯಿ ಮುಚ್ಚಲು ಮುಂದಾಗಿದ್ದಾರೆ. ಮುಂದುವರೆದು ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ. ಮೋದಿ ಅವರಂತಹ ನೀಚ ಪ್ರಧಾನಿ ಮತ್ತೊಬ್ಬ ಇಲ್ಲ ಎಂದು ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ದಾಹಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕೊಲೆಯೂ ಆಗಲಿದೆ ಎಂದು ಶ್ರೀರಾಮ ಸೇನಾ...Kannada News Portal