ನಟಿ ರಶ್ಮಿಕಾ ಮಂದಣ್ಣಗೂ ಟಾಲಿವುಡ್​ಗೂ ಅದ್ಯಾಕೋ ಭಾವ ಬಂಧ ಬೆಸೆದಂತಿದೆ. ಭರಪೂರ ಅವಕಾಶಗಳು ಕನ್ನಡದ ಹುಡುಗಿಯನ್ನು ಹುಡುಕಿಕೊಂಡು ಬರುತ್ತಿವೆ. ಇದೂವರೆಗೂ  ಆ ನೆಲದಲ್ಲಿ  ಮಿಂಚಿದ್ದ ನಾಯಕಿಯರಿಗೆ ಸೈಡು ಹೊಡೆದು ಟಾಪ್​ನಲ್ಲಿರುವ ರಶ್ಮಿಕಾ ಮಂದಣ್ಣ ಗಾಸಿಪ್​ ಕಾಲಂನ ನಂ1 ನಾಯಕಿ ಅಂತಾನೇ ಕರೆಯಲಾಗ್ತಿದೆ. ಅದಕ್ಕೆಲ್ಲಾ ಕಾರಣ ಆಕೆಯ ”ಗೀತಾ ಗೋವಿಂದಂ” ಸಿನಿಮಾ. ಸಿನಿಮಾ ಏನೋ ಯಶಸ್ಸು ಕಾಣ್ತಿದೆ. ಆದರೆ ಸಿನಿಮಾದ ರೊಮಾನ್ಸ್​ ದೃಶೀಕರಣ ಮಾತ್ರ ಅವರ ವೈಯಕ್ತಿಕ ಜೀವನವನ್ನು ಅಲ್ಲೋಲ- ಕಲ್ಲೋಲ ಮಾಡಿದೆ ಎಂದರೆ ಸುಳ್ಳಲ್ಲ. ಅದೇನೇ ಇರಲಿ ನಟಿ ರಶ್ಮಿಕಾ ಮಂದಣ್ಣ  ತೆಲುಗಿನ  ಬಹು ಬೇಡಿಕೆ ನಟಿ.

ಭಾನುವಾರ ರಶ್ಮಿಕಾ ಮಂದಣ್ಣ ತಮ್ಮ ತಾಯಿಯ ಜೊತೆ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಿದ್ದು, ಅಲ್ಲಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ದರ್ಶನ ಪಡೆದು ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವೇಳೆ ಮಠದಲ್ಲಿದ್ದ ರಶ್ಮಿಕಾ ಅವರ ಅಭಿಮಾನಿಗಳು ಅವರನ್ನು ಮಾತನಾಡಿಸಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಸದ್ಯಕ್ಕೆ ರಶ್ಮಿಕಾ ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್ ನಲ್ಲಿ ಬಹು ಬೇಡಿಕೆ ನಟಿಯಾಗಿದ್ದಾರೆ. ತೆಲುಗಿನಲ್ಲಿ `ಚಲೋ’ ಮತ್ತು `ಗೀತಾ ಗೋವಿಂದಂ’ ಸಿನಿಮಾ ಮಾಡಿದ್ದಾರೆ. ಆದರೆ ಇತ್ತೀಚೆಗೆ `ಗೀತ ಗೋವಿಂದಂ’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಅಭಿನಯದ ಮೂಲಕ ರಶ್ಮಿಕಾ ತೆಲುಗಿನ ಸ್ಟಾರ್ ನಟರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ತೆಲುಗಿನ ಸ್ಟಾರ್ ನಟರ ಜೊತೆ ಅಭಿನಯಿಸುವ ಅವಕಾಶಗಳು ಲಭಿಸುತ್ತಿದೆ. `ಗೀತಾಗೋವಿಂದಂ’ ಸಿನಿಮಾದಲ್ಲಿ ಮಾಡಿದ್ದ ನಾಯಕ ನಟ ವಿಜಯ್ ದೇವರಕೊಂಡ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಈಗ ಸದ್ಯಕ್ಕೆ ನಾಗರ್ಜುನ್ ಮತ್ತು ನಾನಿ ಅಭಿನಯಿಸುತ್ತಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಸ್ಯಾಂಡಲ್‍ವುಡ್ ನಲ್ಲಿ ದರ್ಶನ್ ಅಭಿನಯದ `ಯಜಮಾನ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದು, ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Please follow and like us:
0
http://bp9news.com/wp-content/uploads/2018/09/879965d9d66b2f447d1655808bf5aea7.jpghttp://bp9news.com/wp-content/uploads/2018/09/879965d9d66b2f447d1655808bf5aea7-150x150.jpgBP9 Bureauಸಿನಿಮಾನಟಿ ರಶ್ಮಿಕಾ ಮಂದಣ್ಣಗೂ ಟಾಲಿವುಡ್​ಗೂ ಅದ್ಯಾಕೋ ಭಾವ ಬಂಧ ಬೆಸೆದಂತಿದೆ. ಭರಪೂರ ಅವಕಾಶಗಳು ಕನ್ನಡದ ಹುಡುಗಿಯನ್ನು ಹುಡುಕಿಕೊಂಡು ಬರುತ್ತಿವೆ. ಇದೂವರೆಗೂ  ಆ ನೆಲದಲ್ಲಿ  ಮಿಂಚಿದ್ದ ನಾಯಕಿಯರಿಗೆ ಸೈಡು ಹೊಡೆದು ಟಾಪ್​ನಲ್ಲಿರುವ ರಶ್ಮಿಕಾ ಮಂದಣ್ಣ ಗಾಸಿಪ್​ ಕಾಲಂನ ನಂ1 ನಾಯಕಿ ಅಂತಾನೇ ಕರೆಯಲಾಗ್ತಿದೆ. ಅದಕ್ಕೆಲ್ಲಾ ಕಾರಣ ಆಕೆಯ ''ಗೀತಾ ಗೋವಿಂದಂ'' ಸಿನಿಮಾ. ಸಿನಿಮಾ ಏನೋ ಯಶಸ್ಸು ಕಾಣ್ತಿದೆ. ಆದರೆ ಸಿನಿಮಾದ ರೊಮಾನ್ಸ್​ ದೃಶೀಕರಣ ಮಾತ್ರ ಅವರ ವೈಯಕ್ತಿಕ ಜೀವನವನ್ನು ಅಲ್ಲೋಲ-...Kannada News Portal