ಕನ್ನಡದ ಕಿರಿಕ್​ ಪಾರ್ಟಿಯ ಸಿಂಪಲ್​ ಹುಡುಗಿ ರಶ್ಮಿಕಾ ಮಂದಣ್ಣರನ್ನು ಅದ್ಯಾಕೋ ಗಾಸಿಪ್​  ಬೆಂಬಿಡದೇ  ಬೆನ್ನತ್ತಿದೆ. ತೆಲುಗಿನಲ್ಲಿ  ಸ್ಟಾರ್​ ಹೀರೋಯಿನ್​  ಆಗಿ ಬೆಳೆಯುತ್ತಿರುವ ರಶ್ಮಿಕಾ ಮಂದಣ್ಣ ಮತ್ತೊಂದು ಕಾಂಟ್ರೋವರ್ಸಿಗೆ ಒಳಗಾಗಿದ್ದಾರೆ. ತೆಲುಗಿನ ಗೀತಾ ಗೋವಿಂದಂ ಸಿನಿಮಾ ಟೀಸರ್​ನಲ್ಲೇ  ಹೀರೋ ವಿಜಯ್​ ಜೊತೆ ರೊಮ್ಯಾಂಟಿಕ್​ ಸೀನ್​ನೊಂದರಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾರನ್ನು ಅಭಿಮಾನಿಗಳು ನೆಗಟೀವ್​ ಕಮೆಂಟ್​ ಹಾಕುವುದರ ಮೂಲಕ ಕ್ಲಾಸ್​ ತೆಗೆದುಕೊಂಡಿದ್ದರು. ನೀವು ಆ ಥರdಸೀನ್​ಗಳಲ್ಲಿ ಕಾಣಿಸಿಕೊಂಡು ರಕ್ಷಿತ್​ ಶೆಟ್ಟಿ  ಅವರ ಮಾನವನ್ನು ಕಳೆಯುತ್ತಿದ್ದೀರಿ ಎಂದು ರಶ್ಮಿಕಾ ಅವರನ್ನು ಕಣ್ಣು ಕೆಂಪಗೆ ಮಾಡಿಸಿದ್ದರು. ಸದ್ಯ ‘ಗೀತಾ  ಗೋವಿಂದಂ’ ಸಿನಿಮಾದ ಹಾಟ್​ ವಿಡಿಯೋವೊಂದು ವೈರಲ್​ ಆಗಿದೆ. ಅಂದಹಾಗೇ  ರಶ್ಮಿಕಾ ಮಂದಣ್ಣ ನಾಯಕ ವಿಜಯ್​ ದೇವರಕೊಂಡ ಅವರ ಲಿಪ್​ ಲಾಕ್​ ಮಾಡುವ  ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 ಈಗಾಗಲೇ ರಶ್ಮಿಕಾ,  ನಾನು ಮತ್ತು ವಿಜಯ್​  ಇಬ್ಬರು ಜಸ್ಟ್​ ಫ್ರೆಂಡ್​ ಅಷ್ಟೆ. ನಾನು ರಕ್ಷಿತ್​ರನ್ನ ಇಷ್ಟ ಪಡ್ತೀನಿ ನಮ್ಮಿಬ್ಬರ ಸಂಬಂಧ ಚೆನ್ನಾಗಿದೆ . ಸಿನಿಮಾದಲ್ಲಿನ ಪಾತ್ರಇರೋದೇ ಹಾಗೇ  ಎಂದು  ಕಮೆಂಟ್​ ಹಾಕಿದವರಿಗೆ ಲೆಫ್ಟ್​ ರೈಟ್​ ತೆಗೆದುಕೊಂಡಿದ್ದಾರೆ. ಸಿನಿಮಾ ಟೀಸರ್​ನಲ್ಲಿ ವಿಜಯ್​ ದೇವರಕೊಂಡ ಅವರು  ರಶ್ಮಿಕಾ ಅವರನ್ನು ಬೆನ್ನಮೇಲೆ ಹೊತ್ತುಕೊಂಡು ಹೋಗುತ್ತಿರುವುದು ತುಂಬಾ ರೊಮಾಂಟಿಕ್​ ಆಗಿದೆ ಎಂದಿದ್ದ ಅಭಿಮಾನಿಗಳು, ಲೀಕ್​ ಆಗಿರುವ  ಈ ವಿಡಿಯೋ ನೋಡಿ ಸಿಕ್ಕಾಪಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು ಡಾರ್ಕ್​  .ಂಬ ಟ್ವಿಟ್ಟರ್​  ಖಾತೆಯಿಂದ ಪೋಸ್ಟ್​ ಆಗಿದೆ.

ಅಂದಹಾಗೇ ಸಿನಿಮಾದಲ್ಲಿ ಬಸ್​ನಲ್ಲಿ ಪ್ರಯಾಣಿಸುತ್ತಿರುವ ರಶ್ಮಿಕಾ ಮಂದಣ್ಣ ಮತ್ತು ದೇವರಕೊಂಡ ದೃಶ್ಯದಲ್ಲಿ  ರಶ್ಮಿಕಾ ಕರ್ಟನ್​ ಎಳೆದು ವಿಜಯ್​ ಅವರ ತೊಡೆಯ ಮೇಲೆ ಕುಳಿತುಕೊಂಡು ಲಿಪ್​ ಲಾಕ್​(ಕಿಸ್​ಮಾಡ್ತಿರುವ) ದೃಶ್ಯ ಸಿಕ್ಕಾಪಟ್ಟೆ  ವೈರಲ್​ ಆಗ್ತಿದೆ. ಈ ದೃಶ್ಯ ಕೇವಲ 26 ಸೆಕೆಂಡ್​ಗಳಿದ್ದು, ನ್ಯಾಚುರಲ್​ ಆಗಿ ಮೂಡಿ ಬಂದಿದೆ. ನಿಶ್ಚಿತಾರ್ಥ ಮಾಲಡಿಕೊಂಡಿರುವ ರಶ್ಮಿಕಾ ಮತ್ತೊಬ್ಬ  ಹೀರೋ ಜೊತೆ  ಹೀಗೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಇಷ್ಟವಿಲ್ಲ.

 

ಗೀತಾ ಗೋವಿಂದಂ ಸಿನಿಮಾದ ಹಾಡೊಂದು ಯೂಟ್ಯೂಬ್​ನಲ್ಲಿ ನಂ1 ಟ್ರೆಂಡಿಂಗ್​ ಕ್ರಿಯೇಟ್​ ಮಾಡಿದೆ. ಟೀಸರ್​ನಲ್ಲೇ  ಭಾರೀ ಸೌಂಡ್​ ಮಾಡಿದ್ದ ಗೋತಾ ಗೋವಿಂದಂ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತದೆ ಎಂಬುದು ಟಾಲಿವುಡ್​  ಮಂದಿಯ ಅಭಿಪ್ರಾಯ.

 

 

Please follow and like us:
0
http://bp9news.com/wp-content/uploads/2018/08/Rashmika-Mandanna.jpghttp://bp9news.com/wp-content/uploads/2018/08/Rashmika-Mandanna-150x150.jpgBP9 Bureauಪ್ರಮುಖಸಿನಿಮಾಕನ್ನಡದ ಕಿರಿಕ್​ ಪಾರ್ಟಿಯ ಸಿಂಪಲ್​ ಹುಡುಗಿ ರಶ್ಮಿಕಾ ಮಂದಣ್ಣರನ್ನು ಅದ್ಯಾಕೋ ಗಾಸಿಪ್​  ಬೆಂಬಿಡದೇ  ಬೆನ್ನತ್ತಿದೆ. ತೆಲುಗಿನಲ್ಲಿ  ಸ್ಟಾರ್​ ಹೀರೋಯಿನ್​  ಆಗಿ ಬೆಳೆಯುತ್ತಿರುವ ರಶ್ಮಿಕಾ ಮಂದಣ್ಣ ಮತ್ತೊಂದು ಕಾಂಟ್ರೋವರ್ಸಿಗೆ ಒಳಗಾಗಿದ್ದಾರೆ. ತೆಲುಗಿನ ಗೀತಾ ಗೋವಿಂದಂ ಸಿನಿಮಾ ಟೀಸರ್​ನಲ್ಲೇ  ಹೀರೋ ವಿಜಯ್​ ಜೊತೆ ರೊಮ್ಯಾಂಟಿಕ್​ ಸೀನ್​ನೊಂದರಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾರನ್ನು ಅಭಿಮಾನಿಗಳು ನೆಗಟೀವ್​ ಕಮೆಂಟ್​ ಹಾಕುವುದರ ಮೂಲಕ ಕ್ಲಾಸ್​ ತೆಗೆದುಕೊಂಡಿದ್ದರು. ನೀವು ಆ ಥರdಸೀನ್​ಗಳಲ್ಲಿ ಕಾಣಿಸಿಕೊಂಡು ರಕ್ಷಿತ್​ ಶೆಟ್ಟಿ  ಅವರ ಮಾನವನ್ನು ಕಳೆಯುತ್ತಿದ್ದೀರಿ...Kannada News Portal