ಸಿನಿಟಾಕ್​ :  ಶಿವಣ್ಣನ  ಟಗರು  ಸಿನಿಮಾ ಯಶಸ್ಸಿನತ್ತ ಸಾಗುತ್ತಿದ್ದಂತೆ ಇತ್ತ ಸಿನಿಮಾದಲ್ಲಿ  ಪಾತ್ರ ಮಾಡಿದ ಕಲಾವಿದರಿಗೆ  ಮಾತ್ರ ಬಂಪರ್​ ಆಫರ್​ ಸಿಗುತ್ತಿದೆ.  ಚಿತ್ರ ಹಿಟ್​ ಆದ ನಂತರ ಅದರಲ್ಲಿ  ಆ್ಯಕ್ಟ್​ ಮಾಡಿದವರು ದೊಡ್ಡ ದೊಡ್ಡ ಸಿನಿಮಾಗಳಲ್ಲೂ ಅಭಿನಯಿಸೋದಿಕ್ಕೆ  ಸಹಿ ಹಾಕಿದ್ದಾರೆ. ಇತ್ತ ಸಿನಿಮಾದಲ್ಲಿ ಕಾನ್ಸ್ಟೇಬಲ್​ ಸರೋಜ ಅಲಿಯಾಸ್​ ತ್ರಿವೇಣಿ ಗೆ ಇದೀಗ   ಸಾಧು ಕೋಕಿಲ ಜೋಡಿಯಾಗುತ್ತಿದ್ದಾರೆ. ಕನ್​ಫ್ಯೂಸ್​​ ​ ಆಗಬೇಡಿ  ಅವರು ಜೋಡಿಯಾಗುತ್ತಿರುವುದು    ರಿಯಲ್ ಲೈಫ್​ನಲ್ಲಿ ಅಲ್ಲ. ಬದಲಾಗಿ ಸಿನಿಮಾದಲ್ಲಿ.

ಅಜಯ್​ರಾವ್​  ಮತ್ತು ಸುಮಲತಾ  ಒಟ್ಟಿಗೆ ನಟಿಸುತ್ತಿರುವ  ಸಿನಿಮಾ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಸಾಧು ಮತ್ತು ಸರೋಜ ಒಟ್ಟಿಗೆ ಕಮಾಲ್​ ಮಾಡೋಕೆ ಸಿದ್ಧರಾಗಿದ್ದಾರೆ. ಅಂದಹಾಗೇ ಚಿತ್ರದಲ್ಲಿ ಅಜಯ್​ಗೆ  ಕೋಪಿಸ್ಟ ಮಗನ ಪಾತ್ರದಲ್ಲಿ ಅಜಯ್​  ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಅಜಯ್​ ಕೋಪ  ಕಡಿಮೆ ಮಾಡೋಕೆ  ಸರೋಜ ಅಲಿಯಾಸ್​ ತ್ರಿವೇಣಿ ಮತ್ತು ಸಾಧು ಮಹಕಾರಾಜ್​ ಕಂಟ್ರ್ಯಾಕ್ಟ್​ ತೆಗೆದುಕೊಂಡಿದ್ದಾರೆ.

ಅಂದಹಾಗೇ ಈ ಕಾಂಟ್ರಾಕ್ಟ್​ ವಿಚಾರ ತಾಯಿಗೆ ತಕ್ಕ ಸಿನಿಮಾದಲ್ಲಿ ಮಾತ್ರ. ಇದು ಬಹಿರಂಗವಾಗಿದ್ದು ಸರೋಜ ಅವರ ಫೇಸ್​ಬುಕ್​ ಪೇಜ್​ನಲ್ಲಿ. ಅವರು ಅಜಯ್​ರಾವ್​ ಜೊತೆಗಿನ ಸೆಲ್ಫಿ ಫೋಟೋವೊಂದನ್ನು ತಮ್ಮಫೇಸ್​ಬುಕ್​ನಲ್ಲಿ ಅಪಲೋಡ್​ ಮಾಡಿದ್ದರು. ಸಾಧು ಜೊತೆಗೆ ನಗೆಗಡಲಲ್ಲಿ ತೇಲಿಸಲು ಬರುತ್ತಿದ್ದಾರೆ ಸರೋಜ. ಇನ್ನು ಈ ಸಿನಿಮಾವನ್ನು ಶಶಾಂಕ್​ ನಿದೇರ್ಶನ ಮಾಡುತ್ತಿದ್ದು ಸುಮಲತಾ ಮತ್ತು ಅಜಯ್​ರಾವ್​ ಆಶಿಕಾ  ಮುಖ್ಯ ಪಾತ್ರದಲ್ಲಿ  ಕಾಣಿಸಿಕೊಳ್ಳುತ್ತಿದ್ದಾರೆ.

 

 

Please follow and like us:
0
http://bp9news.com/wp-content/uploads/2018/05/kavya-1-1024x768.jpghttp://bp9news.com/wp-content/uploads/2018/05/kavya-1-150x150.jpgBP9 Bureauಸಿನಿಮಾಸಿನಿಟಾಕ್​ :  ಶಿವಣ್ಣನ  ಟಗರು  ಸಿನಿಮಾ ಯಶಸ್ಸಿನತ್ತ ಸಾಗುತ್ತಿದ್ದಂತೆ ಇತ್ತ ಸಿನಿಮಾದಲ್ಲಿ  ಪಾತ್ರ ಮಾಡಿದ ಕಲಾವಿದರಿಗೆ  ಮಾತ್ರ ಬಂಪರ್​ ಆಫರ್​ ಸಿಗುತ್ತಿದೆ.  ಚಿತ್ರ ಹಿಟ್​ ಆದ ನಂತರ ಅದರಲ್ಲಿ  ಆ್ಯಕ್ಟ್​ ಮಾಡಿದವರು ದೊಡ್ಡ ದೊಡ್ಡ ಸಿನಿಮಾಗಳಲ್ಲೂ ಅಭಿನಯಿಸೋದಿಕ್ಕೆ  ಸಹಿ ಹಾಕಿದ್ದಾರೆ. ಇತ್ತ ಸಿನಿಮಾದಲ್ಲಿ ಕಾನ್ಸ್ಟೇಬಲ್​ ಸರೋಜ ಅಲಿಯಾಸ್​ ತ್ರಿವೇಣಿ ಗೆ ಇದೀಗ   ಸಾಧು ಕೋಕಿಲ ಜೋಡಿಯಾಗುತ್ತಿದ್ದಾರೆ. ಕನ್​ಫ್ಯೂಸ್​​ ​ ಆಗಬೇಡಿ  ಅವರು ಜೋಡಿಯಾಗುತ್ತಿರುವುದು    ರಿಯಲ್ ಲೈಫ್​ನಲ್ಲಿ ಅಲ್ಲ. ಬದಲಾಗಿ...Kannada News Portal