ಬಾಲಿವುಡ್​ ಕಿಂಗ್​ ಖಾನ್​ ಗೆ ಸೆನ್ಸ್​ ಆಫ್​ ಹ್ಯೂಮರ್​ ಸ್ವಲ್ಪ ಜಾಸ್ತಿಯೇ ಇದೆ ಎಂತಾರೇ ಅವರ ಆತ್ಮೀಯರು. ಏಕಂದ್ರೆ ಶಾರುಖ್​ ಹೋದ ಕಡೆ ಬಂದ ಕಡೆ  ಸುತ್ತಲಿದ್ದವರನ್ನು ಖುಷಿಯಾಗಿಡೋದು ಅವರಿಗೆ ಗೊತ್ತು. ಮೊನ್ನೆ ಮೊನ್ನೆಯಷ್ಟೇ  ಟಿವಿ ಶೋ ವೊಂದರಲ್ಲಿ ಕರೀನಾ ಅವರ ಜೊತೆ ಇಂಟರ್​ವ್ಯೂ ನಲ್ಲಿ ನಟಿಯನ್ನ ಸಿಕ್ಕಾಪಟ್ಟೆ ನಗಿಸಿದ್ದ  ವಿಡಿಯೋ  ವೈರಲ್​ ಆಗಿತ್ತು. ಚೆನ್ನಾಗಿ ಡ್ಯಾನ್ಸ್​ ಮಾಡುವ ಮೂಲಕ  ಸೋನಂ  ಕಪೂರ್ ಮದುವೆಯಲ್ಲಿ, ಹಿರಿಯರನ್ನು ನೃತ್ಯ ಮಾಡಿಸಿ ಎಂಜಾಯ್​ ಮಾಡಿಸಿದ್ದರು-ಶಾರುಖ್-ಸಲ್ಮಾನ್​ ಖಾನ್​ ಜೋಡಿ. ಇದೀಗ  ಈ ಜೋಡಿಗೆ  ಸಿಕ್ಕಾಪಟ್ಟೆ  ಡಿಮ್ಯಾಂಡ್​.

ಅಂದಹಾಗೇ ಶಾರುಖ್​-ಸಲ್ಮಾನ್​ ಬಿ ಟೌನ್​ನಲ್ಲಿ ಬಿಗ್​ ಸ್ಟಾರ್​ಗಳು ಅಂತ  ಗೊತ್ತೇ ಇದೆ. ಆದರೆ ನಾವ್​ ಹೇಳ್ತ ಆಇರೋದು ಶಾರುಖ್​- ಸಲ್ಲು ಅವರ ಮಸ್ತ್​ ಜೊಡಿ ಝೀರೋ ಸಿನಿಮಾದ ಟೀಸರ್​ ಬಗ್ಗೆ. ಬಿಡುಗಡೆಯಾದ ತಕ್ಷಣ ವೈರಲ್​ ಆಗಿದೆ . ಇಂದು ಬಿಡುಗಡೆಯಾಗಿ 24 ಗಂಟೆಯೊಳಗೆ 2.4 ಕೋಟಿ ವೀವ್ಸ್​ ನ್ನು ಗಳಿಸಿ ದಾಖಲೆ ಬರೆದಿದೆ.

ಈ ಟೀಸರ್​ ಹಿಟ್​ ಆಗಲು ಪ್ರಮುಖ ಕಾರಣ ಶಾರುಖ್​ ಹಾಗೂ ಸಲ್ಮಾನ್​ ಖಾನ್​ ಜೋಡಿ. ಅದರಲ್ಲೂ ಈ ಜೋಡಿ ಒಟ್ಟಿಗೆ ಹೆಜ್ಜೆ ಹಾಕಿರೋದೆ ಇದಕ್ಕೆ ಕಾರಣ ಎನ್ನಬಹುದು. ಯೂಟ್ಯೂಬ್​ನಲ್ಲಿ ಅತಿ ಕಡಿಮೆ ಸಮಯದಲ್ಲಿ ಒಂದು ಲಕ್ಷ ವೀಕ್ಷಣೆ ಗಳಿಸಿರುವ ಖ್ಯಾತಿ ಈ ವಿಡಿಯೋದ್ದಾಗಿದೆ.

Please follow and like us:
0
http://bp9news.com/wp-content/uploads/2018/06/coldwar-between-shahrukh-khan-and-salman-khan-26-1456473771.jpghttp://bp9news.com/wp-content/uploads/2018/06/coldwar-between-shahrukh-khan-and-salman-khan-26-1456473771-150x150.jpgBP9 Bureauಸಿನಿಮಾಬಾಲಿವುಡ್​ ಕಿಂಗ್​ ಖಾನ್​ ಗೆ ಸೆನ್ಸ್​ ಆಫ್​ ಹ್ಯೂಮರ್​ ಸ್ವಲ್ಪ ಜಾಸ್ತಿಯೇ ಇದೆ ಎಂತಾರೇ ಅವರ ಆತ್ಮೀಯರು. ಏಕಂದ್ರೆ ಶಾರುಖ್​ ಹೋದ ಕಡೆ ಬಂದ ಕಡೆ  ಸುತ್ತಲಿದ್ದವರನ್ನು ಖುಷಿಯಾಗಿಡೋದು ಅವರಿಗೆ ಗೊತ್ತು. ಮೊನ್ನೆ ಮೊನ್ನೆಯಷ್ಟೇ  ಟಿವಿ ಶೋ ವೊಂದರಲ್ಲಿ ಕರೀನಾ ಅವರ ಜೊತೆ ಇಂಟರ್​ವ್ಯೂ ನಲ್ಲಿ ನಟಿಯನ್ನ ಸಿಕ್ಕಾಪಟ್ಟೆ ನಗಿಸಿದ್ದ  ವಿಡಿಯೋ  ವೈರಲ್​ ಆಗಿತ್ತು. ಚೆನ್ನಾಗಿ ಡ್ಯಾನ್ಸ್​ ಮಾಡುವ ಮೂಲಕ  ಸೋನಂ  ಕಪೂರ್ ಮದುವೆಯಲ್ಲಿ, ಹಿರಿಯರನ್ನು ನೃತ್ಯ ಮಾಡಿಸಿ...Kannada News Portal