ಬೆಂಗಳೂರು: ಗದಗದ ಶಿರಹಟ್ಟಿ ಕ್ಷೇತ್ರದಲ್ಲಿ 10 ನೇ ಸುತ್ತಿನ ಫಲಿತಾಂಶ ಹೊರ ಬಿದ್ದಿದೆ. ಬಿಜೆಪಿ ಅಬ್ಯರ್ಥಿ ರಾಮಣ್ಣ ಲಮಾಣಿ ಮುನ್ನಡೆ ಸಾಧಿಸಿದ್ದಾರೆ. ಸದ್ಯ 16975 ಮತಗಳ ಮುನ್ನಡೆ ಸಾಧಿಸಿದ್ದು, ರಾಮಣ್ಣ ಲಮಾಣಿ(ಬಿಜೆಪಿ) 52993 , ರಾಮಕೃಷ್ಣ ದೊಡ್ಡಮನಿ(ಕಾಂಗ್ರೆಸ್) 36018 ಮತ ಪಡೆದಿದ್ದಾರೆ. ಇನ್ನು ಇದರೊಂದಿಗೆ ಸತ್ಯವಾಗ್ತೈತಿ ಶಿರಟ್ಟಿ ಶಕುನ. ಬಿಜೆಪಿ ಅಧಿಕಾರದ ಗದ್ದುಗೆಯತ್ತ ಮುನ್ನುಗ್ಗುತ್ತಿದೆ.

ಕರ್ನಾಟಕ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಎಲ್ಲರ ಚಿತ್ತ ಮತ ಎಣಿಕೆಯ ಮೇಲಿದೆ. ಯಾರು ಗೆಲ್ಲುತ್ತಾರೆ? ಯಾರು ಸೋಲ್ತಾರೆ? ರಾಜ್ಯದ ಮುಖ್ಯಮಂತ್ರಿ ಯಾರ ಪಾಲಾಗಬಹುದು ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಈ ಒಂದು ಕ್ಷೇತ್ರ ರಾಜ್ಯದ ಗದ್ದುಗೆ ಯಾರ ಪಾಲಾಗಲಿದೆ ಎಂದು ಶಕುನ ಹೇಳಲು ಸಿದ್ದವಾಗಿದೆ. ಆ ಕ್ಷೇತ್ರ ಯಾವುದು ಅಂದ್ರೆ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರ. ಈ ಕ್ಷೇತ್ರ ರಾಜ್ಯದ 5 ದಶಕದ ಚುನಾವಣಾ ಶಕುನ ಹೇಳಿದ್ದು, ಇಲ್ಲಿಯವರೆಗೂ ನಿಜವಾಗುತ್ತಲೇ ಬಂದಿದೆ. ಈ ಶಿರಹಟ್ಟಿ ಸಂಪೂರ್ಣ ವಿವರ ಇಲ್ಲಿದೆ.

-1972ರಲ್ಲಿ ರಾಜ್ಯ ಚುನಾವಣೆಯಲ್ಲಿ ಶಿರಹಟ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಾದಿರಾಜಾಚಾರ್ಯ ಗೆದ್ದಿದ್ದರು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಿತ್ತು. ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದರು.

-1983ರಲ್ಲಿ ಉಪನಾಳ ಗೂರಪ್ಪ ಪಕ್ಷೇತರ ಎಂಬ ಅಭ್ಯರ್ಥಿ ಗೆದ್ದಿದ್ದರು. ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ನಂತರ ರಾಮಕೃಷ್ಣ ಹೆಗಡೆಯವರು ಸರ್ಕಾರ ರಚನೆ ಮಾಡಿದಾಗ ಇದೇ ಶಿರಹಟ್ಟಿಯಿಂದ ಪಕ್ಷೇತರರಾಗಿ ಗೆದ್ದಿದ್ದ ಉಪನಾಳ ಗೂರಪ್ಪ ಸರ್ಕಾರದ ಒಂದು ಭಾಗವಾಗಿದ್ದು ವಿಶೇಷವಾಗಿತ್ತು.

-1989ರಲ್ಲಿ ನಡೆದ ಚುನಾವಣೆಯಲ್ಲಿ ಈ ಶಿರಹಟ್ಟಿಯಿಂದ ಕಾಂಗ್ರೆಸ್‌ ಅಭ್ಯರ್ಥಿ ಜಯಭೇರಿ ಭಾರಿಸಿದ್ದು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಶಿರಹಟ್ಟಿ ಬಗ್ಗೆ ಕುತೂಹಲ ಮೂಡಿಸಿತ್ತು.

-1994ರಲ್ಲೂ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶಿರಟ್ಟಿಯತ್ತ ಗಮನಹರಿಸಿದರೆ ಈ ಬಾರಿ ಅಲ್ಲಿಂದ ಗೆದ್ದವರು ಜನತಾದಳದ ಅಭ್ಯರ್ಥಿಯಾಗಿದ್ದರು. ಆಗಲೂ ಕಾಕತಾಳಿಯವೆಂಬಂತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಜನತಾದಳ ಸರ್ಕಾರ.

-1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶಿರಹಟ್ಟಿಯಿಂದ ಗೆದ್ದಿದ್ದರು. ಇದ್ರಿಂದ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

-2004ರಲ್ಲಿ ಶಿರಹಟ್ಟಿಯಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದರು. ಅತ್ತ ಶಿರಹಟ್ಟಿಯ ಫಲಿತಾಂಶ ನೋಡಿದ್ರೆ ಕಾಂಗ್ರೆಸ್‌ ಅಭ್ಯರ್ಥಿ ಜಯಭೇರಿ ಬಾರಿಸಿದ್ದರು.

-2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜಿಪಿ ಅಭ್ಯರ್ಥಿ ರಾಮಣ್ಣ ಎಸ್‌ ಲಕ್ಷ್ಮಣ್‌ ಜಯಭೇರಿ ಭಾರಿಸಿದ್ದು ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.

-2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೊಡ್ಡಮನಿ ರಾಮಕೃಷ್ಣ ಗೆದ್ದಿದ್ದು,ಕಾಂಗ್ರೆಸ್‌ ಸಂಪೂರ್ಣ ಬಹುಮತದೊಂದಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ರು.

ಈ ಐದು ದಶಕದ ಶಿರಹಟ್ಟಿ ಫಲಿತಾಂಶವನ್ನು ಗಮನಿಸಿದಾಗ ಅಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾನೋ, ಆ ಪಕ್ಷ ರಾಜ್ಯದ ಗದ್ದುಗೆ ಏರಿ ಆಡಳಿತ ನಡೆಸುವುದು ಸತ್ಯವಾಗುತ್ತೆ. ಆದ್ದರಿಂದ ಶಿರಹಟ್ಟಿ ಶಕುನ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿ, ರಾಜ್ಯದ ಗದ್ದುಗೆ ಭಾಜಪ ಪಾಲು ಮಾಡುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಶಕುನ ಎಷ್ಟು ಸತ್ಯವೋ ಸುಳ್ಳೋ ಆದರೆ ಶಿರಹಟ್ಟಿ ವಿಚಾರದಲ್ಲಿ ಸತ್ಯವಾಗುತ್ತಿದ್ದು. ಈ ಬಾರಿಯು ಮುಮದುವರೆಯುತ್ತಿದೆ.

Please follow and like us:
0
http://bp9news.com/wp-content/uploads/2018/05/1525351225-Shirahatti.jpghttp://bp9news.com/wp-content/uploads/2018/05/1525351225-Shirahatti-150x150.jpgPolitical Bureauಗದಗಪ್ರಮುಖರಾಜಕೀಯSatyavagtaiti Shirahatti Shakunu !!! BJP candidate lead BJP moves to form governmentಬೆಂಗಳೂರು: ಗದಗದ ಶಿರಹಟ್ಟಿ ಕ್ಷೇತ್ರದಲ್ಲಿ 10 ನೇ ಸುತ್ತಿನ ಫಲಿತಾಂಶ ಹೊರ ಬಿದ್ದಿದೆ. ಬಿಜೆಪಿ ಅಬ್ಯರ್ಥಿ ರಾಮಣ್ಣ ಲಮಾಣಿ ಮುನ್ನಡೆ ಸಾಧಿಸಿದ್ದಾರೆ. ಸದ್ಯ 16975 ಮತಗಳ ಮುನ್ನಡೆ ಸಾಧಿಸಿದ್ದು, ರಾಮಣ್ಣ ಲಮಾಣಿ(ಬಿಜೆಪಿ) 52993 , ರಾಮಕೃಷ್ಣ ದೊಡ್ಡಮನಿ(ಕಾಂಗ್ರೆಸ್) 36018 ಮತ ಪಡೆದಿದ್ದಾರೆ. ಇನ್ನು ಇದರೊಂದಿಗೆ ಸತ್ಯವಾಗ್ತೈತಿ ಶಿರಟ್ಟಿ ಶಕುನ. ಬಿಜೆಪಿ ಅಧಿಕಾರದ ಗದ್ದುಗೆಯತ್ತ ಮುನ್ನುಗ್ಗುತ್ತಿದೆ. ಕರ್ನಾಟಕ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಎಲ್ಲರ ಚಿತ್ತ ಮತ...Kannada News Portal