ನಟ  ರಮೇಶ್ ಅರವಿಂದ್​​ ಅವರ   ಬಗ್ಗೆ ಹೇಳೋಕೆ ಹೊರಟ್ರೆ ನಿಜಕ್ಕೂ ಪದಗಳೇ ಸಾಲಲ್ಲ.  ಸ್ಯಾಂಡಲ್​ವುಡ್​ನಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ ಗೆದ್ದಿರುವ  ವ್ಯಕ್ತಿ ಎಂದರೆ ಅದು ನಟ ರಮೇಶ್​ ಅರವಿಂದ್​. ಸದ್ಯ ಚಂದನವನದಲ್ಲಿ  ಭಾರೀ ಬ್ಯುಸಿ ಆಗಿರುವ  ನಟ ರಮೇಶ್​ ಅರವಿಂದ್​. ತುಂಬಾ ಹಾರ್ಡ್​ವರ್ಕರ್​ ಎಂಬ ಮಾತಿದೆ. ಹೆಚ್ಚು ಮಹಿಳಾ ಅಭಿಮಾನಿಗಳ ಫೇವರೇಟ್​ ಸ್ಟಾರ್​ ಈ ಸಕಲಕಲಾವಲ್ಲಭ…ಅವರೇ ಹೇಳಿದ ಧಾಟಿಯಲ್ಲಿ ನಿಮ್ಮ ಮುಂದೆ ಈ ಸ್ಟೋರಿ…..

ಸದ್ಯ ಕನ್ನಡದ ಕೋಟ್ಯಾಧಿಪತಿ  ಸೀಸನ್​ನಲ್ಲಿ  ರಮೇಶ್​ ಅರವಿಂದ್​ ಹೋಸ್ಟ್​ ಆಗಿದ್ದಾರೆ.   ವೆರಿ ಹ್ಯಾಂಡ್ಸಮ್​ ಆ್ಯಕ್ಟರ್​ ಅಂದ್ರೆ ಅದು ಸ್ಯಾಂಡಲ್​​ವುಡ್​ನಲ್ಲಿ  ರಮೇಶ್​ ಅರವಿಂದ್​ ಅಂತಾನೇ ಹೇಳ್ತಾರೆ ಹೆಚ್ಚು ಮಂದಿ . ತುಂಬಾ ಶಿಸ್ತಿನ ಸಿಪಾಯಿ ಥರಾನೇ  ಸರ್​ ನೀವು ಅಂದ್ರೆ… ಏನ್​ ಸರ್​ ಮಾಡೋದು, ನನಗೆ ಏನೇ ಮಾಡಿದ್ರೂ ಅಚ್ಚು ಕಟ್ಟಾಗಿ ಮಾಡೋ ಅಭ್ಯಾಸ ಸೋ…ಅಲ್ದೇ  ಅಪ್ಪನೂ  ಹಾಗೇ ಅದಕ್ಕೆ ನಾನು ಕೂಡ. ಅಂದಹಾಗೇ ನಿಮ್ಮ ಬ್ಯೂಟಿ ಸೀಕ್ರೇಟ್​ ಏನ್​ ಸರ್​ ಅಂತಾ ಕೇಳಿದ್ರೆ…ಅವರು ಹೇಳೋದ್ ಏನ್​ ಗೊತ್ತಾ…?

ನಾನು ಯಾವ ಸೋಪು, ಕ್ರೀಮ್​,ಶ್ಯಾಂಪ್ಯೂ ಏನ್​ ಉಪಯೋಗಿಸಲ್ಲ. ನೀವ್​ ನಂಬೋದೇ ಇಲ್ಲ, ನನಗೆ ಅದರ ಕಡೆ ಗಮನವೇ ಇಲ್ಲ…ನಾನು ಮಿರರನ್ನೇ ನೋಡದೇ ಅಪರೂಪ…ಶೂಟಿಂಗ್​ ಸ್ಥಳದಲ್ಲೇ ಟಚ್​ಟಪ್​ ಮಾಡುವಾಗ್ಲೇ ನಾನು ಕನ್ನಡಿ ನೋಡುವುದು ಎ ಂದು ನಗುತ್ತಾ  ಹೇಳುತ್ತಾರೆ… ಬ್ಯೂಟಿ ಮತ್ತು ಫಿಟ್​ನೆಸ್​ ವಿಚಾರಕ್ಕೆ ಬಂದ್ರೆ… ನಾನು ನೆಗಟೀವ್​ ಆಗಿ ಯೋಚಿಸಿಲ್ಲ.ಲವ್​ ಈಸ್​ ದ ಬೆಸ್ಟ್​ ಕಾಸ್ಮೆಟಿಕ್​ ಅಂತೆ,.ನೆಗಟೀವ್​ ಥಾಟ್​ ತಲೆಯಲ್ಲಿ ಕಡಿಮೆ ಇದ್ರೆ ನಮ್ಮ ಸೌಂದರ್ಯ ಹೆಚ್ಚು ಮಾಡುತ್ತದೆ ಎನ್ನುತ್ತಾರೆ ಆ ಹ್ಯಾಂಡ್ಸಮ್​ ಆ್ಯಕ್ಟರ್​.

ಇಂಡಸ್ಟ್ರಿಯಲ್ಲಿ  ಕಾಂಟ್ರೋವರ್ಸಿ ಇಲ್ಲದ ನಟ ಅಂದ್ರೆ ರಮೇಶ್​ ಅರವಿಂದ್.  ಅವರಿಗೆ ಈ ಹಿಂದೆ ಕನ್ನಡದ ಕೋಟ್ಯಾಧಿಪತಿ ಹೋಸ್ಟ್​ ಆಗಿ ಆಫರ್​  ಬಂದಿತ್ತಂತೆ. ಅದಕ್ಕಾಗಿ ನಾನು ಬಾಂಬೆಗೆ ಹೋಗಿದ್ದೆ.  ಸೆಲೆಕ್ಟ್​ ಕೂಡ ​ ಆದೆ.  ಟ್ರೈನಿಂಗ್​ ಕೂಡ   ತೆಗೆದುಕೊಂಡಿದ್ದೆ. ಅದಕ್ಕಾಗಿ ನಾನು ಒಂದಷ್ಟು ಹೋಂ  ವರ್ಕ್​ ಕೂಡ ಮಾಡಿಕೊಂಡಿದ್ದೆ. ಹೋಸ್ಟ್​ ಮಾಡೋ  ಆ ಫಾರ್ಮೇಟ್​ನಲ್ಲಿ ರೆಡಿಯಾಗಿದ್ದೆ.  ಒಂದು ಲೆವೆಲ್​ಗೆ ನಾನು ತಯಾರಾಗಿದ್ದೆ.  ಸುವರ್ಣ ಚಾನೆಲ್​ನಲ್ಲಿ ರಿಹರ್ಸಲ್​  ಕೂಡ ನಡೆಸಿದ್ದೆ. ಆದರೆ ಯಾವುದೋ ಕಾರಣಕ್ಕಾಗಿ  ಬೇರೆ ಚಾನೆಲ್​ಗೆ ಆ ಶೋ ಹೋಯ್ತು. ನಿರೂಪಕ ಚೇಂಜ್​ ಆದ್ರು…ನಾನು ವೀಕೆಂಡ್​ ವಿತ್​ ರಮೇಶ್​ ಗೆ ಬಂದೆ ಎಂಬ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ರು.

ಸದ್ಯ ಈ ಸೀಸನ್​ ಕನ್ನಡದ ಕೋಟ್ಯಾಧಿಪತಿಗೆ 6 ದಿನ  ರಿಹರ್ಸಲ್​ ಮಾಡಿಕೊಂಡಿದ್ದೇನೆ. ನಾನು ಕಾರಿನಲ್ಲಿ ಬರುತ್ತಿರುವಾಗ್ಲೇ ಒಂದಷ್ಟು ಪುಸ್ತಕಗಳನ್ನು ಇಟ್ಟುಕೊಂಡು ಬರುತ್ತೇನೆ. ಬರುತ್ತಲೇ ಲೌಡ್​ ಆಗಿ ಕನ್ನಡದ ಸಾಲುಗಳನ್ನು ಓದಿಕೊಂಡು  ಬರುತ್ತೇನೆ. ಕನ್ನಡದ ಸಾಲುಗಳು ಸುಲಲಿತವಾಗಿ  ಬರಲು ನಾನು ಪ್ರತೀನಿತ್ಯ  ಇದನ್ನು ಮಾಡುತ್ತೇನೆ. ಭೈರಪ್ಪ, ನವರ ಪುಸ್ತಕ ಓದುತ್ತೇನೆ. ಇದಕ್ಕೆ ಕಾರಣ ನನ್ನ ಬಾಯಲ್ಲಿ ಮಿಸ್​  ಆಗಿ ತಮಿಳು, ಹಿಂದಿ ಬರಕೂಡದು ಅಲ್ವಾ ಸೋ ನಾನು ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಬೇಕು. ಕನ್ನಡದ ಪದಗಳು ಕರೆಕ್ಟ್​ ಆಗಿ ಓದಬೇಕು. ನಾಲಿಗೆಯಲ್ಲಿ ಉರಳುಬೇಕು ಅಲ್ವಾ  ಅದಕ್ಕಾಗಿ ನಾನು ಇದಕ್ಕೆಲ್ಲಾ ತಯಾರಿ ಮಾಡಿಕೊಳ್ತೀನಿ.

ಬೇರೆ ರಿಯಾಲಿಟಿ ಶೋ ಗೆ ಕಂಪೇರ್​ ಮಾಡಿದ್ರೆ ಕೋಟ್ಯಾಧಿಪತಿ ಒಂದು ಬಿಗ್​ಎಸ್ಟ್​ ರಿಯಾಲಿಶೋ. ಆದರೆ ಇದು ಹಾಟ್​ ಸೀಟ್ ಆದ್ರೂ​  ಮಜಾ ಇದೆ.   ಮಕ್ಕಳಿಗೆ ಇಂಟರೆಸ್ಟ್​  ತರಿಸೋ ಕನ್ನಡದ ಕೋಟ್ಯಾಧಿಪತಿ ಶೋ ತುಂಬಾ ಇಷ್ಟವಾಗುತ್ತದೆ, ಅದು ನನಗೆ ಖುಷಿ ಅನಿಸುತ್ತದೆ ಎನ್ನುತ್ತಾರೆ ಚಂದ್ರಮುಖಿ ನಾಯಕ.

ಇನ್ನು ರಿಯಾಲಿಟಿ ಶೋ ಕಾಸ್ಟ್ಯೂಮ್​ ನಲ್ಲಿ ನನಗೆ ಯಾವುದೇ ತಕರಾರು ಇಲ್ಲ. ಫಿಟ್​ನೆಸ್​ ಇದ್ರೆ ಓಕೆ, ಅದು ಯಾವ ಕಲರ್​ ಆದ್ರೂ ಡಿಸೈನ್ ಆದ್ರೂ ನೋ ಪ್ರಾಬ್ಲಂ.  ಹ್ಯಾಂಗರ್​ ಥರಾ ಹಾಕ್ಕೊಂಡ್​ ಬರುವುದು ಅಷ್ಟೆ ನನ್ನ ಕೆಲಸ. ಕೆಲ ಫಿಟ್​ನೆಸ್ ಆಗಿರಲು ನಾನು ​ ಕೂಡ  ವರ್ಕೌಟ್​ ಮಾಡುತ್ತೇನೆ. ಜಿಮ್​ಗೆ  ಹೋಗುತ್ತೇನೆ, ಯೋಗ ಮಾಡುತ್ತೇನೆ ಇದು ನನ್ನ ಅಭ್ಯಾಸ…ಟೈಮ್​ ಕೊಡೊಕಾಗಲ್ಲ, ಟೈಮ್​ ಇರಲ್ಲ ವ್ಯಾಯಾಮ ಮಾಡೋಕೆ ಅಂತಾ ಹೇಳುವವರ  ನೆಪವನ್ನು ನಾನು ಒಪ್ಪೋದೇ ಇಲ್ಲ  ಎನ್ನುತ್ತಾರೆ. ಇನ್ನು ಮೋಟೀವೇಷನ್  ಸ್ಪೀಚ್​  ಮಾಡೋದ್ರಲ್ಲೂ  ಈ ಆರ್ಟಿಸ್ಟ್​  ತುಂಬಾ ಮುಂದು. ಇದರ ಬಗ್ಗೆ ಕೇಳಿದ್ರೆ…

ನನಗೆ ಮೋಟಿವೇಷನ್​ ಸ್ಪೀಚ್​ ಕೊಡೋಕೆ   ತುಂಬಾ ಇಷ್ಟ. ಮೊದಲಿನಿಂದಲೂ ನನಗೆ ಇದರ ಮೇಲೆ ಆಸಕ್ತಿ.ನನ್ನ ಮನೆಯಲ್ಲಿ  ಅರ್ಧ ಸಿನಿಮಾ ಬುಕ್ಸ್​ ಇದ್ರೆ, ಇನ್ನು ಅರ್ಧ ಮ್ಯಾನೆಜ್​ಮೆಂಟ್​, ಮೋಟೀವೇಷನ್​ ಬುಕ್ಸ್​ ಇದೆ. ಮೊದಲೆಲ್ಲಾ ಕಾಲೇಜ್​ಗಳಲ್ಲಿ  ನನ್ನನ್ನು ಗೆಸ್ಟ್​ ಆಗಿ ಕರಿತಾ ಇದ್ರು, ಆಗೇಲ್ಲ  ಸಿನಿಮಾ ಡೈಲಾಗ್​ ಮಾಮೂಲು, ಹೊಸದಾಗಿ ಏನೇನ್ನಾದ್ರೂ ಮಾಡಬೇಕು ಅಂತಾ ಮೋಟೀವೇಷನ್​  ಸ್ಪೀಚ್​ ಕೊಡೋಕೆ  ಸಿದ್ಧವಾದೆ. ಯೂಟ್ಯೂಬ್​ನಲ್ಲಿ  ಅದನ್ನ  ​  ತುಂಬಾ ಜನ ಫಾಲೋ ಮಾಡ್ತಾರಂತೆ ಎಂದು ಮುಗುಳುನಗ್ತಾರೆ  ಸೂಪರ್​ ಹೀರೋ.

ಇನ್ನು  ಸಿನಿಮಾ ಇಂಡಸ್ಟ್ರಿಯಲ್ಲಿ  ನಿಮ್ಮ ಬಗ್ಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಸರ್​. ನಿಮ್ಮ ಸ್ಟೇಟ್​ಮೆಂಟ್​ ಅಲ್ಲಾಗಲೀ, ಬೇರೆಯವರ  ಸ್ಟೇಟ್​ಮೆಂಟ್​ ಬಗ್ಗೆ ಆಗಲೀ  ಎಲ್ಲಿಯೂ ನಿಮ್ಮ ಬಗ್ಗೆ ಕಪ್ಪು ಮಾರ್ಕ್​ ಇಲ್ಲ. ಇದರ  ಬಗ್ಗೆ ಏನಂತೀರಾ ಸರ್​ ಅಂದ್ರೆ…ಅದು ನನ್ ನೇಚರ್​. ಬೇರೆಯವರ ಬಗ್ಗೆ ಜಡ್ಜ್​ಮೆಂಟ್​ ನಾನ್​ ಮಾಡಲ್ಲ. ಬೇರೆಯವರ ಬಗ್ಗೆ ನಾನು ಮಾತನಾಡಲ್ಲ ಅಂತಾ ಹೇಳ್ತಾರೆ. ಅದಕ್ಕಾಗಿ ನನಗೆ ಈ ಹೆಸರು ಬಂದಿರಬೇಕೇನೋ ಗೊತ್ತಿಲ್ಲ ಅಂತಾರೆ.

ಇನ್ನು ಮನೆಯವರೊಟ್ಟಿಗೆ ಹೇಗೆ ಟೈಮ್​ ಸ್ಪೆಂಡ್​ ಮಾಡ್ತೀರಾ ಅಂದ್ರೆ ,ನನಗೆ ಸಿನಿಮಾ ವರ್ಕ್​ ಇಲ್ಲ ಅಂದ್ರೆ ನಾನು ಮನೆಯವರೊಟ್ಟಿಗೆ ಹೆಚ್ಚು ಇರುತ್ತೇನೆ. ನಾನು ನನ್ನ ಪತ್ನಿ ಮತ್ತು ನನ್ನ ಇಬ್ಬರ ಮಕ್ಕಳ ಜೊತೆ ಕಾಲ ಕಳೆಯುತ್ತೇನೆ ಎನ್ನುತ್ತಾರೆ.

ಒಟ್ಟಾರೆ ಬಟರ್​ಫ್ಲೈ ಸಿನಿಮಾ ಎರೆಡು ಭಾಷೆಯಲ್ಲಿ ತಯಾರಾಗ್ತಿದೆ. ಕನ್ನಡದಲ್ಲಿ ಪಾರೂಲ್​, ತೆಲುಗಿನಲ್ಲಿ ಕಾಜೋಲ್​ ಅಗರ್​ವಾಲ್​ ನಟಿಸ್ತಾ ಇದ್ದಾರೆ ಆ ಡೈರೆಕ್ಷನ್​ ವರ್ಕ್​​ ನಡೀತಾ ಇದೆ. ಇನ್ನು ರಿಯಾಲಿಟಿ ಶೋ ಕೆಲಸ ಮತ್ತು ಮೂರು ನಾಲ್ಕು ಸಿನಿಮಾಗೆ ಸಹಿ ಮಾಡಿದ್ದೇನೆ..ಇದಿಷ್ಟು ಸದ್ಯ ನನ್ ಕೈಯಲ್ಲಿರುವ ಕೆಲಸ ಎನ್ನುತ್ತಾರೆ. ಗಾಂಧಿನಗರದ ಗಾಸಿಪ್​ಗಳಿಗೆ ಒಳಗಾಗದೇ ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲ ಕನ್ನಡ ಸಿನಿಮಾ ರಂಗವನ್ನು ಆಳಿದ ಅದ್ಭುತ ಕಲಾವಿದರೆಂದರೆ ನಿಜಕ್ಕೂ  ತಪ್ಪಾಗಲಾರದು. ರಮೇಶ್​ ಅರವಿಂದ್​ ಸರ್​ ನಿಮಗೆ ಆಲ್​ ದಿ ಬೆಸ್ಟ್​…..

 

 

Please follow and like us:
0
http://bp9news.com/wp-content/uploads/2018/07/5BG_RAMESHARVIND.jpghttp://bp9news.com/wp-content/uploads/2018/07/5BG_RAMESHARVIND-150x150.jpgBP9 Bureauಸಿನಿಮಾನಟ  ರಮೇಶ್ ಅರವಿಂದ್​​ ಅವರ   ಬಗ್ಗೆ ಹೇಳೋಕೆ ಹೊರಟ್ರೆ ನಿಜಕ್ಕೂ ಪದಗಳೇ ಸಾಲಲ್ಲ.  ಸ್ಯಾಂಡಲ್​ವುಡ್​ನಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ ಗೆದ್ದಿರುವ  ವ್ಯಕ್ತಿ ಎಂದರೆ ಅದು ನಟ ರಮೇಶ್​ ಅರವಿಂದ್​. ಸದ್ಯ ಚಂದನವನದಲ್ಲಿ  ಭಾರೀ ಬ್ಯುಸಿ ಆಗಿರುವ  ನಟ ರಮೇಶ್​ ಅರವಿಂದ್​. ತುಂಬಾ ಹಾರ್ಡ್​ವರ್ಕರ್​ ಎಂಬ ಮಾತಿದೆ. ಹೆಚ್ಚು ಮಹಿಳಾ ಅಭಿಮಾನಿಗಳ ಫೇವರೇಟ್​ ಸ್ಟಾರ್​ ಈ ಸಕಲಕಲಾವಲ್ಲಭ...ಅವರೇ ಹೇಳಿದ ಧಾಟಿಯಲ್ಲಿ ನಿಮ್ಮ ಮುಂದೆ ಈ ಸ್ಟೋರಿ..... var domain = (window.location...Kannada News Portal