ಬೆಂಗಳೂರು : ಅಂಕಲ್ ಡಾನ್ಸ್ ಈಗ ದೇಶಾದ್ಯಂತ ವೈರಲ್ ಆಗಿದೆ. ಆದ್ರೆ, ಅಂಕಲ್ ಸ್ಟೆಪ್ ಅನ್ನೇ ಫಾಲೋ ಮಾಡಿರುವ ಯುಎಸ್ ಎ ನಿವಾಸಿ ದಂತದ ಬೊಂಬೆಯಂತಿರುವ ಯುವತಿಯೊಬ್ಬಳು ವಿಡೀಯೋ ಅಪ್ ಲೋಡ್ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ಅಂಕಲ್ ಸ್ಟೆಪ್ ಗೆ ಇಡೀ ದೇಶ ವಾವ್​ ಎಂಬ ಶಹಬಾಷ್​ಗಿರಿ ನೀಡಿತ್ತು. ಅಂಕಲ್​  ಡ್ಯಾನ್ಸ್​   ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸಿಂಗ್​ ಅಂಕಲ್​ ಅಂತಾನೇ  ಸಿಕ್ಕಾಪಟ್ಟೆ  ಫೇಮಸ್ಸ್ ​ ಆಗಿದ್ದಾರೆ.

ಎಷ್ಟರ ಮಟ್ಟಿಗೆ ಈ ಮಧ್ಯಪ್ರದೇಶದ ಪ್ರೋಫೆಸರ್‌ ಅಂಕಲ್​ ಡ್ಯಾನ್ಸ್​ ಫೇಮಸ್​ ಆಗಿದೆ ಅಂದ್ರೆ, ಸಂಜೀವ್ ಶ್ರೀವಾತ್ಸವ್ ಅವರು ಹಾಕಿದ್ದ ಸೇಮ್​ ಸ್ಟೆಪ್​ಗಳನ್ನೇ ಇದೀಗ ಹದಿಹರೆಯದ ಲಲನೆಯರು, ಚಂದುಳ್ಳಿ ಚೆಲುವೆಯರು, ಪಡ್ಡೆಗಳ ನಿದ್ದೆಗೆಡಿಸುವಂತೆ ಸೊಂಟ ಬಳುಕಿಸುತ್ತಿದ್ದಾರೆ. ಇದೀಗ ಅಂಕಲ್​ ಡ್ಯಾಂನ್ಸ್ ಟ್ರೆಂಡ್​ ಸೆಟ್​ ಮಾಡಿದ್ದು, ಅಂಕಲ್​ ಸ್ಟೆಪ್​ಗಳನ್ನೇ ತಾವು ಹಾಕಿ , ಅಂಕಲ್​ ಡ್ಯಾನ್ಸ್​ ಮಾಡಿರುವ ವಿಡಿಯೋ ಪಕ್ಕ ತಾವು ಮಾಡಿರುವ ಡ್ಯಾನ್ಸ್​ ವೀಡಿಯೋವನ್ನು ಕೊಲ್ಯಾಜ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

ಇನ್ನು 1987ರಲ್ಲಿ ಬಾಲಿವುಡ್ ನಟ ಗೋವಿಂದಾ ಮತ್ತು ನೀಲಮ್ ನಾಯಕ ನಾಯಕಿಯಾಗಿದ್ದ ಖುದ್​ಗರ್ಜ್​ ಚಿತ್ರದ ‘ಆಪ್ ಕೆ ಆ ಜಾನೆ ಸೆ ‘ಹಾಡು ಈಗ ಈ ಡಾನ್ಸ್ ನಿಂದ ಮತ್ತಷ್ಟು ಫೇಮಸ್ ಆಗಿದೆ.

ಇನ್ನೂ ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ರಾಷ್ಟ್ರೀಯ ಸುದ್ದಿವಾಹಿನಿಗಳೇ ಸಂಜೀವ್ ಶ್ರೀವಾತ್ಸವ್ ​​ ಅವರನ್ನು ಸಂದರ್ಶನ ಮಾಡುತ್ತಿದ್ದು, ಕಳೆದ ಎರಡು ದಿನಗಳಿಂದ ಮೇಲಿದಂದ ಮೇಲೆ ಬಿಡುವಿಲ್ಲದಂತೆ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇತ್ತ ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್‌ ಚೌವ್ಹಾಣ್  ಅಂಕಲ್​ ಡ್ಯಾನ್ಸ್​ ಮಾಡಿರುವ ವಿಡಿಯೋ ನೋಡಿ ಮಧ್ಯಪ್ರದೇಶದ ನೀರಿನಲ್ಲಿ ಏನೋ ಇದೆ ಎಂದು ಟ್ವೀಟ್​ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/06/girl-dancing-in-USA-Karnatakada-Miditha.jpeghttp://bp9news.com/wp-content/uploads/2018/06/girl-dancing-in-USA-Karnatakada-Miditha-150x150.jpegPolitical Bureauಟೈಮ್ ಪಾಸ್ಪ್ರಮುಖSee Uncle Dance Wearing Hip In The USA !!!ಬೆಂಗಳೂರು : ಅಂಕಲ್ ಡಾನ್ಸ್ ಈಗ ದೇಶಾದ್ಯಂತ ವೈರಲ್ ಆಗಿದೆ. ಆದ್ರೆ, ಅಂಕಲ್ ಸ್ಟೆಪ್ ಅನ್ನೇ ಫಾಲೋ ಮಾಡಿರುವ ಯುಎಸ್ ಎ ನಿವಾಸಿ ದಂತದ ಬೊಂಬೆಯಂತಿರುವ ಯುವತಿಯೊಬ್ಬಳು ವಿಡೀಯೋ ಅಪ್ ಲೋಡ್ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಅಂಕಲ್ ಸ್ಟೆಪ್ ಗೆ ಇಡೀ ದೇಶ ವಾವ್​ ಎಂಬ ಶಹಬಾಷ್​ಗಿರಿ ನೀಡಿತ್ತು. ಅಂಕಲ್​  ಡ್ಯಾನ್ಸ್​   ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸಿಂಗ್​ ಅಂಕಲ್​ ಅಂತಾನೇ  ಸಿಕ್ಕಾಪಟ್ಟೆ  ಫೇಮಸ್ಸ್ ​ ಆಗಿದ್ದಾರೆ. ಎಷ್ಟರ...Kannada News Portal