ಲೈಂಗಿಕ  ಕಿರುಕುಳ ಆರೋಪ ಎಲ್ಲೆಡೆ ಕೇಳಿ ಬರುತ್ತಿದ್ದು ಸದ್ಯ ರಾಷ್ಟ್ರಪತಿ ಭವನವೂ ಇದಕ್ಕೆ ಹೊರತಾಗಿಲ್ಲ ಎಂಬುದು ಸಾಬೀತಾಗಿದೆ. ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ  ಮೇಲಿ ನ ಲೈಂಗಿಕ  ಕಿರುಕುಳ ನಿಯಂತ್ರಣ  ಕಾಯ್ದೆ ಜಾರಿಯಾಗಿದ್ದರೂ ಪ್ರಕರಣಗಳುಮಾತ್ರ ದಾಖಲಾಗುತ್ತಲೇ ಇವೆ. ಅವುಗಳ ತನಿಖೆ ಕೂಡ ನಡೆಯುತ್ತಿವೆ. ಒಂದು ದೂರು ಸುಳ್ಳು ಎಂದು ಸಾಬೀತಾದರೆ, ಮತ್ತೊಂದರಲ್ಲಿ ಸಹದ್ಯೋಗಿಯೇ ತಪ್ಪಿತಸ್ಥ ಎಂದು ತನಿಖೆಯಿಂದ ತಿಳಿದು ಬಂದಿದೆಎಂದು ಸಾಮಾಜಿಕ ಕಾರ್ಯಕರ್ತೆ ನೂತನ್ ಠಾಕುರ್ ಅವರು ಸಲ್ಲಿಸಿದ್ದ RTI ಅರ್ಜಿಯೊಂದಕ್ಕೆ ರಾಷ್ಟ್ರಪತಿ ಭವನದ ಸೆಕ್ರಟೇರಿಯಟ್ ಉತ್ತರ ನೀಡಿದೆ.

ಮೇ 9, 2018ರಂದು ರಾಷ್ಟ್ರಪತಿ ಭವನದ ಉಪ ಕಾರ್ಯದರ್ಶಿ ಜೆ ಜಿ ಸುಬ್ರಹ್ಮಣ್ಯನ್ ಅವರು ತಮ್ಮ ಉತ್ತರದಲ್ಲಿ ಎರಡೂ ಪ್ರಕರಣಕ್ಕೆ ಸಂಬಂಧಿಸಿದ ಹೆಸರುಗಳು ಮತ್ತಿತರ ಮಾಹಿತಿಗಳನ್ನು ಹೊರಗೆಡಹಿಲ್ಲ. ಕಾನೂನು ಕೂಡ ಅದಕ್ಕೆ ಅನುಮತಿಸುವುದಿಲ್ಲ.

ಕಾಯಿದೆ ಜಾರಿಯಾದಂದಿನಿಂದ ರಾಷ್ಟ್ರಪತಿ ಭವನದಲ್ಲಿ ಎಷ್ಟು ದೂರುಗಳು ದಾಖಲಾಗಿವೆ ಹಾಗೂ ಅವುಗಳ ಬಗೆಗಿನ ವಿಚಾರಣೆಯ ಫಲಿತಾಂಶವೇನು ಎಂದು ನೂತನ್ ತಮ್ಮRTI ಅರ್ಜಿಯಲ್ಲಿ ಮಾಹಿತಿ ಕೋರಿದ್ದರು.

Please follow and like us:
0
http://bp9news.com/wp-content/uploads/2018/05/19travel-rb3.jpghttp://bp9news.com/wp-content/uploads/2018/05/19travel-rb3-150x150.jpgBP9 Bureauರಾಷ್ಟ್ರೀಯಲೈಂಗಿಕ  ಕಿರುಕುಳ ಆರೋಪ ಎಲ್ಲೆಡೆ ಕೇಳಿ ಬರುತ್ತಿದ್ದು ಸದ್ಯ ರಾಷ್ಟ್ರಪತಿ ಭವನವೂ ಇದಕ್ಕೆ ಹೊರತಾಗಿಲ್ಲ ಎಂಬುದು ಸಾಬೀತಾಗಿದೆ. ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ  ಮೇಲಿ ನ ಲೈಂಗಿಕ  ಕಿರುಕುಳ ನಿಯಂತ್ರಣ  ಕಾಯ್ದೆ ಜಾರಿಯಾಗಿದ್ದರೂ ಪ್ರಕರಣಗಳುಮಾತ್ರ ದಾಖಲಾಗುತ್ತಲೇ ಇವೆ. ಅವುಗಳ ತನಿಖೆ ಕೂಡ ನಡೆಯುತ್ತಿವೆ. ಒಂದು ದೂರು ಸುಳ್ಳು ಎಂದು ಸಾಬೀತಾದರೆ, ಮತ್ತೊಂದರಲ್ಲಿ ಸಹದ್ಯೋಗಿಯೇ ತಪ್ಪಿತಸ್ಥ ಎಂದು ತನಿಖೆಯಿಂದ ತಿಳಿದು ಬಂದಿದೆಎಂದು ಸಾಮಾಜಿಕ ಕಾರ್ಯಕರ್ತೆ ನೂತನ್ ಠಾಕುರ್ ಅವರು ಸಲ್ಲಿಸಿದ್ದ RTI...Kannada News Portal