ಸ್ಯಾಂಡಲ್​ವುಡ್​  ಮೊಗ್ಗಿನ ಮನಸ್ಸಿನ ಹುಡುಗಿ ರಾಧಿಕಾ ಪಂಡಿತ್​ ಗೆ ಅಮ್ಮನಾಗ್ತಿರುವ ಖುಷಿ. ರಾಧಿಕಾ  ಪಂಡಿತ್​ ಮತ್ತು ರಾಕಿಂಗ್​ ಸ್ಟಾರ್​ ಮನೆಗೆ ನ್ಯೂ  ಗೆಸ್ಟ್​ ಒಬ್ಬರು ಕೆಲವೇ ತಿಂಗಳಲ್ಲಿ ಬರುತ್ತಿದ್ದಾರೆ.  ಮುದ್ದು ಕಂದಮ್ಮನಿಗಾಗಿ ಕಾಯುತ್ತಿರುವ ಸ್ಟಾರ್ ದಂಪತಿ ಸಾಮಾಜಿಕ ಜಾಲತಾಣಗಳ   ಮೂಲಕ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

ಆ ಪೋಟೋದಲ್ಲಿ ರಾಧಿಕಾ ಜೊತೆ ನಿಂತು ಯಶ್​ ಸೆಲ್ಫಿ ತೆಗೆದಿದ್ದಾರೆ. ಇದರ ಜೊತೆಗೆ ತಮ್ಮ ನಿಶ್ಚಿತಾರ್ಥದ ಫೋಟೋವೊಮಂದನ್ನು ಕೂಡ ಆ ಫೋಟೋ ಜೊತೆ ಕೊಲೇಜ್​ ಮಾಡಿ ರಾಧಿಕಾ ಪಂಡಿತ್ ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್   ಮಾಡಿದ್ದಾರೆ. “ಆಗಸ್ಟ್ 12 ನಾವು ಎಂಗೇಜ್ ಮೆಂಟ್​  ಆಗಿದ್ದೀವಿ. ಇಂದಿಗೆ ಎರಡು ವರ್ಷ ಕಳೆಯಿತು. ಇದು ನಿಜವಾಗಿಯೂ `ಬಂಪಿ ರೈಡ್’ ಆಗಿದೆ ” ಎಂದು ಕಾಮಿಡಿಯಾಗಿ ಬರೆದುಕೊಂಡಿದ್ದಾರೆ.

ಹೌದು ರಾಧಿಕಾ ಪಂಡಿತ್ ಅವರಿಗೆ ಆಗಸ್ಟ್ 12 ರಂದು ಮಹತ್ವದ ದಿನವಾಗಿದೆ. ಯಾಕೆಂದ್ರೆ 2016 ಆಗಸ್ಟ್ 12 ರಂದು ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಗೋವಾದಲ್ಲಿ ರಿಂಗ್ ಬದಲಾಯಿಸಿಕೊಂಡು ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಆದ್ದರಿಂದ ಆಗಸ್ಟ್ 12 ಕ್ಕೆ ಅವರು ನಿಶ್ಚಿತಾರ್ಥ ಮಾಡಿಕೊಂಡು ಎರಡು ವರ್ಷಗಳು ಕಳೆದಿದೆ. ಆ ಖುಷಿಯಲ್ಲಿ ಪತಿ ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಗರ್ಭಿಣಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ.

ಅಭಿಮಾನಿಗಳು ಈ ಫೋಟೋ ನೋಡಿ ಶುಭ ಹಾರೈಸಿದ್ದಾರೆ. ರಾಧಿಕಾ ಪಂಡಿತ್​ ಅವರನ್ನು ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಪೋಸ್ಟ್​ ಮಾಡಿದ್ದಾರೆ. ನಾವೆಲ್ಲಾ ಮುದ್ದು ಯಶ್​ ಅಥವಾ ಮುದ್ದು ಕಂದಮ್ಮ ರಾಧಿಕಾರನ್ನ ನೋಡಲು  ಕಾತುರರಾಗಿದ್ದೇವೆ ಎಂದು ಅಭಿಮಾನಿಗಳು ಬರೆದು  ಶೇರ್​ ಮಾಡಿದ್ದಾರೆ.

ಅಂದಹಾಗೇ  ಯಶ್​ ಕೆಜಿಎಫ್​ ಸಿನಿಮಾವನ್ನು   ಭರ್ಜರಿ ಆಗಿ ಮುಗಿಸಿದ್ದಾರೆ. ಕಿರಾತಕ-2 ಸಿನಿಮಾ ಶೂಟಿಂಗನಲ್ಲಿ ದ್ದಾರೆಂಬ ಮಾಹಿತಿ ಇದೆ. ಒಟ್ಟಾರೆ ಮೆಚ್ಚಿ ಮದುವೆ ಮಾಡಿಕೊಂಡ  ರಾಧಿಕಾ ಜೊತೆ ರಾಕಿಂಗ್​ಸ ್ಟಾರ್​​ ಯಶ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.

Please follow and like us:
0
http://bp9news.com/wp-content/uploads/2018/08/DIYo4-QVwAADRJ1.jpghttp://bp9news.com/wp-content/uploads/2018/08/DIYo4-QVwAADRJ1-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​  ಮೊಗ್ಗಿನ ಮನಸ್ಸಿನ ಹುಡುಗಿ ರಾಧಿಕಾ ಪಂಡಿತ್​ ಗೆ ಅಮ್ಮನಾಗ್ತಿರುವ ಖುಷಿ. ರಾಧಿಕಾ  ಪಂಡಿತ್​ ಮತ್ತು ರಾಕಿಂಗ್​ ಸ್ಟಾರ್​ ಮನೆಗೆ ನ್ಯೂ  ಗೆಸ್ಟ್​ ಒಬ್ಬರು ಕೆಲವೇ ತಿಂಗಳಲ್ಲಿ ಬರುತ್ತಿದ್ದಾರೆ.  ಮುದ್ದು ಕಂದಮ್ಮನಿಗಾಗಿ ಕಾಯುತ್ತಿರುವ ಸ್ಟಾರ್ ದಂಪತಿ ಸಾಮಾಜಿಕ ಜಾಲತಾಣಗಳ   ಮೂಲಕ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute...Kannada News Portal