ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಕ್ಷೌರ ಮಾಡಲು ಚಿನ್ನದ ಸಾಧನ (ರೇಜರ್‌) ಬಳಸುವುದನ್ನು ಕೇಳಿದ್ದೀರಾ?! , ಹೌದು ಚಿಕ್ಕೋಡಿಯಿಂದ 50 ಕಿ.ಮೀ. ದೂರದ, ಕರ್ನಾಟಕ ಗಡಿ ಭಾಗದಲ್ಲಿ ಇರುವ ‘ಉಸ್ತ್ರಾ ಫಾರ್‌ ಮೆನ್ಸ್‌’ ಸಲೂನ್‌ ಮಾಲೀಕ ರಾಮಚಂದ್ರ ದತ್ತಾತ್ರೇಯ ಕಾಸೀದ್‌ ಈ ಪ್ರಯೋಗ ಮಾಡುತ್ತಿದ್ದಾರೆ. ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್‌ ಮಾಡಿ ಇಲ್ಲಿಗೆ ಬರುತ್ತಿದ್ದಾರೆ!

₹ 3.55 ಲಕ್ಷ ವೆಚ್ಚದಲ್ಲಿ 105 ಗ್ರಾಂ (18 ಕ್ಯಾರೆಟ್‌) ಚಿನ್ನ ಬಳಸಿ ಈ ಸಾಧನವನ್ನು ಮಾಡಿಸಿಕೊಂಡಿದ್ದಾರೆ. ಗ್ರಾಹಕರಿಗೆ ಅದರಿಂದಲೇ ಕ್ಷೌರ ಮಾಡುವ ಮೂಲಕ ಗಮನಸೆಳೆದಿದ್ದಾರೆ.

ಸಾಂಗ್ಲಿಯ ಚಂದುಕಾಕಾ ಜ್ಯುವೆಲ್ಲರ್ಸ್‌ನವರು, ಪುಣೆಯ ಮಿಥುನ್‌ ರಾಣಾ ಎಂಬ ಕುಶಲಕರ್ಮಿಯಿಂದ ಇದನ್ನು ಮಾಡಿಸಿಕೊಟ್ಟಿದ್ದಾರೆ. ಇದನ್ನು ಸಿದ್ಧಪಡಿಸಲು 22 ದಿನ ಬೇಕಾಯಿತಂತೆ. ರಾಮಚಂದ್ರ ಅವರು, ತಿಂಗಳ ಹಿಂದೆ ನಡೆದ ತಮ್ಮ ತಂದೆ–ತಾಯಿಯ 33ನೇ ಮದುವೆ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ಇದನ್ನು ಬಳಸುವುದಕ್ಕೆ ಶುರು ಮಾಡಿದ್ದಾರೆ. ಮೊದಲಿಗೆ, ತಂದೆ ದತ್ತಾತ್ರೇಯ ಅವರಿಗೇ ಇದರಿಂದ ಕ್ಷೌರ ಮಾಡಿದ್ದಾರೆ.

ವೃತ್ತಿಯಲ್ಲಿ ವಿಶೇಷತೆ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರನ್ನು ಸೆಳೆಯಲು ಈ ಬಂಗಾರದ ರೇಜರ್‌ ಮಾಡಿಸಿದ್ದೇನೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದರಿಂದ ದಾಡಿ ಮಾಡಿದರೆ ₹ 200 ಪಡೆಯುತ್ತೇನೆ. ಬಹುತೇಕರು ಇದನ್ನೇ ಬಳಸುವಂತೆ ಕೇಳುತ್ತಾರೆ. ಡೊಂಬಿವಲಿಯ ಒಂದು ಕುಟುಂಬದವರು ತಮ್ಮ ಮಗನ ಜವುಳ ತಗೆಸುವುದಕ್ಕೆಂದೇ ಇಲ್ಲಿಗೆ ಬಂದಿದ್ದರು. ಸಾಂಗ್ಲಿ ಸುತ್ತಮುತ್ತಲಿನ 50 ಕಿ.ಮೀ. ದೂರದಿಂದಲೂ ಯುವಕರು ಇಲ್ಲಿಗೆ ಬಂದು ಬಂಗಾರದ ರೇಜರ್‌ನಿಂದಲೇ ದಾಡಿ ಮಾಡಿಸಿಕೊಂಡು ಹೋಗುತ್ತಾರೆ. ಈ ಬಗ್ಗೆ ಜನರೇ ಪ್ರಚಾರ ಮಾಡುತ್ತಿದ್ದಾರೆ.

ಸದ್ಯ, ಈ ಚಿನ್ನದ ರೇಜರ್ಗೆ ಮಾಮೂಲಿ ಬ್ಲೇಡ್‌ಗಳನ್ನು ಬಳಸುತ್ತಿದ್ದು, ಮುಂಬರುವ ದಿನಗಳಲ್ಲಿ ಚಿನ್ನಲೇಪಿತ ಬ್ಲೇಡ್‌ಗಳನ್ನು ಬಳಸುವ ವಿಚಾರವಿದೆ ಎಂದು ಅವರು ಹೇಳಿದರು.

Please follow and like us:
0
http://bp9news.com/wp-content/uploads/2018/06/2067790542-1.jpghttp://bp9news.com/wp-content/uploads/2018/06/2067790542-1-150x150.jpgPolitical Bureauಪ್ರಮುಖಬೆಳಗಾವಿರಾಷ್ಟ್ರೀಯಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಕ್ಷೌರ ಮಾಡಲು ಚಿನ್ನದ ಸಾಧನ (ರೇಜರ್‌) ಬಳಸುವುದನ್ನು ಕೇಳಿದ್ದೀರಾ?! , ಹೌದು ಚಿಕ್ಕೋಡಿಯಿಂದ 50 ಕಿ.ಮೀ. ದೂರದ, ಕರ್ನಾಟಕ ಗಡಿ ಭಾಗದಲ್ಲಿ ಇರುವ ‘ಉಸ್ತ್ರಾ ಫಾರ್‌ ಮೆನ್ಸ್‌’ ಸಲೂನ್‌ ಮಾಲೀಕ ರಾಮಚಂದ್ರ ದತ್ತಾತ್ರೇಯ ಕಾಸೀದ್‌ ಈ ಪ್ರಯೋಗ ಮಾಡುತ್ತಿದ್ದಾರೆ. ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್‌ ಮಾಡಿ ಇಲ್ಲಿಗೆ ಬರುತ್ತಿದ್ದಾರೆ! ₹ 3.55 ಲಕ್ಷ ವೆಚ್ಚದಲ್ಲಿ 105 ಗ್ರಾಂ (18 ಕ್ಯಾರೆಟ್‌) ಚಿನ್ನ ಬಳಸಿ ಈ ಸಾಧನವನ್ನು ಮಾಡಿಸಿಕೊಂಡಿದ್ದಾರೆ....Kannada News Portal