ಸ್ಯಾಂಡಲ್​ವುಡ್​: ‘‘ಮಾಸ್ ಲೀಡರ್’’ ಸಿನಿಮಾಗಾಗಿ ಕಾಯುತ್ತಿರುವ ಶಿವಣ್ಣನ ಅಭಿಮಾನಿಗಳಿಗೆ ಈಗ ಆಡಿಯೋ ರಿಲೀಸ್ ನಿಂದ ಇನ್ನಷ್ಟು ಕಾತುರ ಹೆಚ್ಚಾಗಿದೆ.

ಅಂದಹಾಗೆ ಮಾಸ್ ಲೀಡರ್ ಸಿನಿಮಾದ ಆಡಿಯೋ ರಿಲೀಸ್ ಗೆ ಆಗಮಿಸಿದ್ದ ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ, ಆಡಿಯೋ ಲಾಂಚಿಂಗ್ ಕಾರ್ಯಕ್ರಮದಲ್ಲಿ ಮಾತನಾಡಲು ಶುರುಮಾಡುತ್ತಿದ್ದಂತೆ ಚಪ್ಪಾಳೆ, ಶಿಳ್ಳೆಗಳ ಸದ್ದು ಜೋರಾಗಿತ್ತು. ಹೌದು, ಬಾಲಯ್ಯ ಆಡಿಯೋ ಲಾಂಚಿಂಗ್ ಆದ ನಂತರ ಮಾತಿಗೆ ನಿಂತು ‘‘ಕನ್ನಡ ಅಭಿಮಾನಿಗಳಿಗೆ ನಮಸ್ಕಾರ ಹಾಗೂ ಡಾ|| ರಾಜಕುಮಾರ ಅವರ ಅಭಿಮಾನಿಗಳಿಗೂ ನಮಸ್ಕಾರ ’’ ಎಂದು ಕನ್ನಡದಲ್ಲೇ ಮಾತು ಪ್ರಾರಂಭಿಸುತ್ತಿದ್ದಂತೆ ಚಪ್ಪಾಳೆಗಳ ಸುರಿಮಳೆಯೇ ಬಂತು.

ರಾಜಕುಮಾರ ಅವರ ಕುಟುಂಬ ನನಗೆ ತುಂಬಾ ಆತ್ಮೀಯವಾಗಿದೆ. ಶಿವರಾಜ್ ಕುಮಾರ್ ನನಗೆ ತಮ್ಮನಿದ್ದಂತೆ, ಎಂದು ಹೇಳುತ್ತಾ ಮಾಸ್ ಲೀಡರ್ ಆಡಿಯೋ ಟ್ರೇಲರ್ ಬಹಳಾ ಚೆನ್ನಾಗದೆ, ಸಿನಿಮಾವು ಒಳ್ಳೆಯ ಯಶಸ್ವಿಕಾಣಲಿ ಎಂದು ಹಾರೈಸಿದರು ಬಾಲಯ್ಯ.

ಮಾಸ್ ಲೀಡರ್ ಆಡಿಯೋ ಲಾಂಚಿಂಗ್ ನಲ್ಲಿ ಪುನೀತ್, ಜಗ್ಗಣ್ಣ, ಯೋಗಿ, ಗುರುಜಗ್ಗೇಶ್, ನಾಯಕಿ ಪ್ರಣಿತ, ನಿರ್ದೇಶಕ ನರಸಿಂಹ, ನಿರ್ಮಾಪಕ ತರುಣ್ ಶಿವಪ್ಪ, ಸಹ  ನಿರ್ಮಾಪಕ ಹಾರ್ಧಿಕ್ ಗೌಡ, ಶರ್ಮಿಳಾಮಾಂಡ್ರೆ, ಗೀತ ರಚನೆಕಾರರಾದ  ಚೇತನ್ ಕುಮಾರ್, ನಾಗೇಂದ್ರ ಪ್ರಸಾದ್, ಚಿತ್ರದ ಕವಿರಾಜ್, ಮೇಘನಾಗಾಂವ್ಕರ್ ಮತ್ತು ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅನುಭವ ಹಂಚಿಕೊಂಡರು.

ಇವರೆಲ್ಲರ ಮಾತುಕತೆಗಳ ನಡುವೆ ಆಶಿಕಾ, ಶರ್ಮಿಳಾಮಾಂಡ್ರೆ ಚಿತ್ರದ ಹಾಡುಗಳಿಗೆ ಹೆಜ್ಜೆಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಹಾಗೆ ಕಾರ್ಯಕ್ರಮದಲ್ಲಿ ಗೀತಾ ಶಿವರಾಜ್ ಕುಮಾರ್, ರಾಗಿಣಿ, ಗಿರಿಜಾ ಲೋಕೇಶ್, ಗುರುನಂದನ್, ಬೇಬಿ ಪರಿಣಿತ ಸೇರಿದಂತರೆ ಹಲವರು ಇದ್ದರು. ಹಾಗೂ ನಿರ್ಮಾಪಕ ತರುಣ್ ಶಿವಪ್ಪನವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟರು, ಅಷ್ಟೇ ಅಚ್ಚುಕಟ್ಟಾಗಿ ಸಿನಿಮಾ ತೆರೆಗೆ ಬರಲಿದೆ.

Please follow and like us:
0
http://bp9news.com/wp-content/uploads/2017/07/1_36.jpghttp://bp9news.com/wp-content/uploads/2017/07/1_36-150x150.jpgNews Updates Notificationಸಿನಿಮಾ  ಸ್ಯಾಂಡಲ್​ವುಡ್​: ‘‘ಮಾಸ್ ಲೀಡರ್’’ ಸಿನಿಮಾಗಾಗಿ ಕಾಯುತ್ತಿರುವ ಶಿವಣ್ಣನ ಅಭಿಮಾನಿಗಳಿಗೆ ಈಗ ಆಡಿಯೋ ರಿಲೀಸ್ ನಿಂದ ಇನ್ನಷ್ಟು ಕಾತುರ ಹೆಚ್ಚಾಗಿದೆ. ಅಂದಹಾಗೆ ಮಾಸ್ ಲೀಡರ್ ಸಿನಿಮಾದ ಆಡಿಯೋ ರಿಲೀಸ್ ಗೆ ಆಗಮಿಸಿದ್ದ ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ, ಆಡಿಯೋ ಲಾಂಚಿಂಗ್ ಕಾರ್ಯಕ್ರಮದಲ್ಲಿ ಮಾತನಾಡಲು ಶುರುಮಾಡುತ್ತಿದ್ದಂತೆ ಚಪ್ಪಾಳೆ, ಶಿಳ್ಳೆಗಳ ಸದ್ದು ಜೋರಾಗಿತ್ತು. ಹೌದು, ಬಾಲಯ್ಯ ಆಡಿಯೋ ಲಾಂಚಿಂಗ್ ಆದ ನಂತರ ಮಾತಿಗೆ ನಿಂತು ‘‘ಕನ್ನಡ ಅಭಿಮಾನಿಗಳಿಗೆ ನಮಸ್ಕಾರ ಹಾಗೂ ಡಾ|| ರಾಜಕುಮಾರ ಅವರ...Kannada News Portal